ಹೊಸ ಪಿಂಚಣಿಗೆ ಅರ್ಜಿ ಸಲ್ಲಿಸುವರು ಗ್ರಾಮಲೆಖ್ಕಿಗ ಹಾಗೂ ರಾಜಸ್ವ ನೀರೀಕ್ಷರ ಬಳಿ ಹೊಸ ಅರ್ಜಿಗಳನ್ನು ಸಲ್ಲಿಸಬಹುದು. ಜೊತೆಗೆ ಸಾಮಾಜಿಕ ಭದ್ರತೆಯ ವೇತನದ ಹಳೆಯ ಅರ್ಜಿಗಳಲ್ಲಿ ತಪ್ಪಾಗಿ ಹಲವು ದಿನಗಳಿಂದ ವೇತನಗಳು ಬಿಡುಗಡೆಯಾಗದಿದ್ದರೆ ಅಂತಹ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಇದ್ದರೆ ಸ್ಥಳದಲ್ಲೇ ತಿದ್ದುಪಡಿ ಮಾಡಿ ವಿತರಿಸಲಾಗುವುದು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಗಂಜಾಂ ನಿವಾಸಿಗಳಿಂದ ಸೆ.5ರಂದು ಶನಿವಾರ ಅಹವಾಲು ಸ್ವೀಕಾರ ಜೊತೆಗೆ ನಿವೇಶನ ಕೋರಿ ಪುರಸಭೆಗೆ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ದಾಖಲೆ ಪತ್ರಗಳನ್ನು ಪ್ರಜಾಸೇವಾ ಆಂದೋಲನ ಅಡಿ ಮನೆಮನೆಗೆ ತೆರಳಿ ವಿತರಿಸಲಾಗುವುದು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಪ್ರಜಾಸೇವಾ ಆಂದೋಲನ ಕುರಿತು ಮಾತನಾಡಿ, ಪಟ್ಟಣ ಪುರಸಭಾ ವ್ಯಾಪ್ತಿಯ ರಸ್ತೆ ಚರಂಡಿ ಹಾಗೂ ಇತರೆ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದರು.
ಈಗಾಗಲೇ ಪುರಸಭೆಗೆ ಫಲಾನುಭವಿಗಳು ತಮ್ಮ ನಿವೇಶನ ಹಾಗೂ ಮನೆಗೆ ಸಂಬಂಧಿಸಿದ ಖಾತೆಗಳ ಅರ್ಜಿ ಸಲ್ಲಿಸಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ನೀಡಿರುವರಿಗೆ ಬಿ ಖಾತೆಯಿಂದ ಎ ಖಾತೆ ಬದಲಾವಣೆ, ಪೌತಿ ಖಾತೆ, ಸಾಮಾಜಿಕ ಭದ್ರತೆಯ ವೃದ್ಯಾಪ್ಯ ವೇತನ, ವಿಧುವಾ ವೇತನ, ಅಂಗವಿಕಲರ ವೇತನಗಳು ಸೇರಿದಂತೆ ಅವುಗಳ ಅರ್ಜಿಗಳನ್ನು ವಿಲೇವಾರಿ ಮಾಡಿಸಿ ಗಂಜಾಂನಲ್ಲಿ ಸರ್ಕಾರದಿಂದ ಆಯೋಜಿಸಿರುವ ಎಲ್ಲಾ ಸಮಾಜದ ಜನರಿಗೆ ಪ್ರಜಾಸೇವಾ ಕಾರ್ಯಕ್ರಮದ ಮೂಲಕ ಮನೆ ಮನೆಗೆ ತೆರಳಿ ಆಯಾ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.ಹೊಸ ಪಿಂಚಣಿಗೆ ಅರ್ಜಿ ಸಲ್ಲಿಸುವರು ಗ್ರಾಮಲೆಖ್ಕಿಗ ಹಾಗೂ ರಾಜಸ್ವ ನೀರೀಕ್ಷರ ಬಳಿ ಹೊಸ ಅರ್ಜಿಗಳನ್ನು ಸಲ್ಲಿಸಬಹುದು. ಜೊತೆಗೆ ಸಾಮಾಜಿಕ ಭದ್ರತೆಯ ವೇತನದ ಹಳೆಯ ಅರ್ಜಿಗಳಲ್ಲಿ ತಪ್ಪಾಗಿ ಹಲವು ದಿನಗಳಿಂದ ವೇತನಗಳು ಬಿಡುಗಡೆಯಾಗದಿದ್ದರೆ ಅಂತಹ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಇದ್ದರೆ ಸ್ಥಳದಲ್ಲೇ ತಿದ್ದುಪಡಿ ಮಾಡಿ ವಿತರಿಸಲಾಗುವುದು ಎಂದರು.
ರೈತರಿಗೆ ಕೆಎಂಎಫ್‌ನಿಂದ ಹೊಸದಾಗಿ ಉಚಿತ ವಿಮೆ ಮಾಡುತ್ತಿದ್ದು, ಅಂತಹ ರೈತರು ತಮ್ಮ ಅಗತ್ಯ ದಾಖಲೆಗಳ ನೀಡಿ ಉಚಿತ ವಿಮೆಯನ್ನು ಮಾಡಿಸಿಕೊಳ್ಳಬೇಕು. ಇದಲ್ಲದೆ ಪ್ರಧಾನ ಮಂತ್ರಿ ವಿಮಾ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಅಗತ್ಯ ದಾಖಲೆಗಳ ಪಡೆದು 20 ರು.ಗೆ ವಿಮೆ ಮಾಡಿಸಿಕೊಡಲಾಗುವುದು ಇದು ಅಫಘಾತದಲ್ಲಿ ಈ ಯೋಜನೆ ಉಪಯೋಗಕ್ಕೆ ಬರುತ್ತದೆ. ಇದರಿಂದ ಎರಡು ಲಕ್ಷ ಪರಿಹಾರವು ದೊರೆಯಲಿದೆ ಎಂದರು.ಸಭೆಯಲ್ಲಿ ತಹಸೀಲ್ದಾರ್ ಚೇತನ ಯಾದವ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್. ದಿನೇಶ್, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ಪ್ರಜಾಸೇವಾ ಆಂದೋಲನ: ಕೆ.ಎಂ.ಉದಯ್ಕನ್ನಡಪ್ರಭ ವಾರ್ತೆ ಮದ್ದೂರುಜನರ ಕುಂದುಕೊರತೆ ಆಲಿಸುವ ಜೊತೆಗೆ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಉದ್ದೇಶದಿಂದ ಸೆ.5ರಂದು ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕರ ಸಮಸ್ಯೆ ಆಲಿಸಿ ತ್ವರಿತವಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಬಳಿಗೆ ತೆರಳಿ ಅವರ ಸಮಸ್ಯೆ ಹಾಗೂ ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಅಲ್ಲದೆ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದೇ ನಿಜವಾದ ಪ್ರಜಾಸೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಪ್ರಜಾಸೇವಾ ಆಂದೋಲನವನ್ನು ಯಶಸ್ವಿಗೊಳಿಸಬೇಕು. ತಾಲೂಕಿನ ಜನರು ಭಾಗವಹಿಸಿ ತಮ್ಮ ಸಮಸ್ಯೆ ಹಾಗೂ ಅಹವಾಲುಗಳನ್ನು ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.