ಆಳಂದದಲ್ಲಿ ಶ್ರೀರಾಮನ ಮಂತ್ರಾಕ್ಷತೆ ವಿತರಣೆ

| Published : Dec 28 2023, 01:45 AM IST

ಸಾರಾಂಶ

ಶ್ರೀರಾಮ ಜನ್ಮಭೂಮಿ ಆಯೋಧ್ಯಾನಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮ ಜನ್ಮ ತೀರ್ಥಕ್ಷೇತ್ರ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ ದೇಶಾದ್ಯಂತ ಆರಂಭಿಸಿದ ಮಂತ್ರಾಕ್ಷತೆ ವಿತರಣೆ

ಕನ್ನಡಪ್ರಭ ವಾರ್ತೆ ಆಳಂದ

ಜ.22ರಂದು ಶ್ರೀರಾಮ ಜನ್ಮಭೂಮಿ ಆಯೋಧ್ಯಾನಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮ ಜನ್ಮ ತೀರ್ಥಕ್ಷೇತ್ರ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ ದೇಶಾದ್ಯಂತ ಆರಂಭಿಸಿದ ಮಂತ್ರಾಕ್ಷತೆ ವಿತರಣೆ ಯಾತ್ರೆಯೂ ಬುಧವಾರ ಪಟ್ಟಣಕ್ಕೆ ಆಗಮಿಸಿ ಸಾರ್ವಜನಿಕರಿಗೆ ಅಕ್ಷತಾ ವಿತರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಪಟ್ಟಣದ ಶ್ರೀರಾಮ ಮಾರುಕಟ್ಟೆಯಿಂದ ಆರಂಭಗೊಂಡ ಅಕ್ಷತೆಯ ಶೋಭಾಯಾತ್ರೆಯನ್ನ ಮುಖ್ಯ ರಸ್ತೆಯ ಮೂಲಕ ಆರ್ಯ ಸಮಾಜ ಮಂದಿರವರೆಗೆ ತೆರಳಿ ಸಾರ್ವಜನಿಕರಿಗೆ ಅಕ್ಷತಾ ವಿತರಣೆಗೆ ಚಾಲನೆ ನೀಡಲಾಯಿತು.

ಅಭಿಯಾನ ತಾಲೂಕು ಸಂಚಾಲಕ ನಾಗೇಂದ್ರ ಕಾಬಡೆ ಮಾತನಾಡಿ, ಆಯೋಧ್ಯಾನಲ್ಲಿ ಜ.22ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮೂರ್ತಿ ಪ್ರತಿಷ್ಠಾಪನೆ ಬಳಿಕ ತಾವಿರುವ ಊರಲ್ಲೇ ದೇವಸ್ಥಾನದಲ್ಲಿ ಮಂತ್ರಗಳ ಉಚ್ಛರಿಸುತ್ತಾ ಅಕ್ಷತಾರೋಹಣ ಕೈಗೊಳ್ಳಬೇಕು. ಆಯೋಧ್ಯನಿಂದಲೇ ಪೂರೈಕೆಯಾದ ಅಕ್ಷತೆಯನ್ನು ಸರ್ವರಿಗೂ ತಲುಪಿಸಿ ಅಂದು ಅಕ್ಷತೆ ಸಮರ್ಪಿಸಿ ಶ್ರೀರಾಮಚಂದ್ರನ ಕೃಪೇಗೆ ಪಾತ್ರರಾಗಬೇಕೆಂದರು.

ಜಿಲ್ಲಾ ಸಹ ಸಂಚಾಲಕ ಶಿವರಾಜ ಸಂಗೋಗಳಗಿ, ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಪಡಸಾವಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಮಾತನಾಡಿದರು.

ಕಿಣ್ಣಿಸುಲ್ತಾನ ಮಠದ ಮರಿಶಾಂತಲಿಂಗ ಶಿವಾಚಾರ್ಯರು, ಹಿಂದೂ ಜಾಗರಣ ಸಹ ಸಂಚಾಲಕ ಅವಿನಾಶ ಮಡಿವಾಳ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ, ಮಾಜಿ ಎಂಎಲ್‍ಸಿ ಅಮರನಾಥ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ, ಮಲ್ಲಿಕಾರ್ಜುನ ಕಂದಗುಳೆ, ಸಿದ್ಧು ಪಾಟೀಲ ಸಕ್ಕರಗಾ, ಶ್ರೀಶೈಲ ಖಜೂರಿ, ಸುನಿತಾ ಚಂದ್ರಶೇಖರ ಪೂಜಾರಿ ಸಾವಳೇಶ್ವರ, ಸುನಿಲ ಹಿರೋಳಿಕರ್, ಸಂಜಯ ಮಿಸ್ಕಿನ್, ಸಂತೋಷ ಹಾದಿಮನಿ, ರಾಜಶೇಖರ ಕೊರಳಿ, ಪ್ರಕಾಶ ಮಾನೆ, ಮಹೇಶ ಸೂರೆ, ಸಿ.ಕೆ. ಪಾಟೀಲ, ಬಾಬಾಸಾಹೇಬ ವಿ. ಪಾಟೀಲ, ಸಹಾದೇವ ಇಂಗಳೆ, ಮಹಾದೇವ ಇಂಗಳೆ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಅಸ್ಮೀತಾ ಚಿಟಗುಪ್ಪಕರ್, ಸುಜ್ಞಾನಿ ಪೋದ್ದಾರ. ದಮಯಂತಿ ಪಾಟೀಲ ಸೇರಿಂದತೆ ಮಹಿಳೆಯರು, ಮಕ್ಕಳು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.