ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇವಸ್ಥಾನಗಳಿಗೆ ಸಹಾಯಧನ ವಿತರಣೆ

| Published : Nov 16 2024, 12:33 AM IST

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇವಸ್ಥಾನಗಳಿಗೆ ಸಹಾಯಧನ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತಡಸದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ ೨ ಲಕ್ಷ ರು.ಗಳ ಡಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕರಾದ ಶಿವರಾಯ ಪ್ರಭು ಕಮಿಟಿಯವರಿಗೆ ವಿತರಿಸಿದರು.

ಶಿಗ್ಗಾಂವಿ: ತಾಲೂಕಿನ ತಡಸದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ ೨ ಲಕ್ಷ ರು.ಗಳ ಡಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕರಾದ ಶಿವರಾಯ ಪ್ರಭು ಕಮಿಟಿಯವರಿಗೆ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರದಿಂದ ಪೂಜ್ಯರು ನಿಮ್ಮ ಬಸದಿಗೆ ಪ್ರಸಾದ ರೂಪದಲ್ಲಿ ಈ ಸಹಾಯಧನವನ್ನು ನೀಡಿದ್ದು ಇದನ್ನು ಸರಿಯಾದ ಉದ್ದೇಶಕ್ಕೆ ಬಳಸಿ ಹಾಗೂ ಇನ್ನು ಹೆಚ್ಚಿನ ಸಹಾಯಧನ ನಿಮಗೆ ಬೇರೆಬೇರೆ ಕಡೆಯಿಂದ ಸಿಗಲಿ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಬಗ್ಗೆ ಹಾಗೂ ಸ್ವ ಸಹಾಯ ಸಂಘಗಳ ಮೂಲಕ ಸಮಾಜಕ್ಕೆ ನೀಡುವ ಸೌಲಭ್ಯದ ಬಗ್ಗೆ ಮಾತನಾಡಿ, ಎಲ್ಲಾ ಪಾಲುದಾರ ಸದಸ್ಯರು ಈ ಸೌಲಭ್ಯ ಪಡೆದುಕೊಳ್ಳಬೇಕು ಹಾಗೂ ಬ್ಯಾಂಕಿನಿಂದ ನೀಡುವ ಸಾಲ ಸೌಲಭ್ಯದ ಬಗ್ಗೆ ತಿಳಿಸಿದರು. ಈ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಉಮಾ ನಾಗರಾಜ್ ಹಾಗೂ ಜೈನ ಕಮಿಟಿಯ ಅಧ್ಯಕ್ಷ ಈರಪ್ಪ ಮಾದೇವಪ್ಪ ಗೊಟಗೋಡಿ, ಕಾರ್ಯದರ್ಶಿ ಸೂರಜ್ ಸುಧಾಕರ್ ಮಣಕಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ವಲಯ ಮೇಲ್ವಿಚಾರಕರಾದ ಜಯರಾಮ ದೇವಾಡಿಗ, ಸೇವಾಪ್ರತಿನಿಧಿ ಪ್ರೇಮವ್ವ, ರಾಜ್ ಬಿ, ಶಾಹಿರಾಬಾನು ಹಾಗೂ ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು , ಊರಿನ ಹಿರಿಯರು ಸದಸ್ಯರು ಉಪಸ್ಥಿತರಿದ್ದರು.