ಪೊಲೀಸ್‌ ಸಿಬ್ಬಂದಿಗೆ ಬೇಸಿಗೆ ಕಿಟ್‌ ವಿತರಣೆ

| Published : May 11 2024, 01:33 AM IST

ಪೊಲೀಸ್‌ ಸಿಬ್ಬಂದಿಗೆ ಬೇಸಿಗೆ ಕಿಟ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಸ್ವರ್ಣಾಗ್ರೂಪ್‌ ಆಫ್‌ ಕಂಪನೀಸ್‌ ಹಾಗೂ ರೆಡ್‌ ಎಫ್‌ಎಂ ವತಿಯಿಂದ ಸಮ್ಮರ್‌ ಸ್ಮೈಲ್‌ ಏರ್ಪಡಿಸಿ ಬೇಸಿಗೆ ಕಿಟ್‌ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬಿಸಿಲಿನಲ್ಲೇ ನಿಂತು ಕಾರ್ಯನಿರ್ವಹಿಸುವ ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಸ್ವರ್ಣಾಗ್ರೂಪ್‌ ಆಫ್‌ ಕಂಪನೀಸ್‌ ಹಾಗೂ ರೆಡ್‌ ಎಫ್‌ಎಂ ವತಿಯಿಂದ ಸಮ್ಮರ್‌ ಸ್ಮೈಲ್‌ ಏರ್ಪಡಿಸಿ ಬೇಸಿಗೆ ಕಿಟ್‌ ವಿತರಿಸಲಾಯಿತು.

ಕಿಟ್‌ಗಳಲ್ಲಿ ನೀರಿನ ಬಾಟಲ್‌, ಸನ್‌ಸ್ಕ್ರೀಂ, ಬಾಡಿ ಲೋಷನ್‌, ವೈಟ್‌ವೈಫ್ಸ್‌ ಮತ್ತಿತರ ಅಗತ್ಯ ವಸ್ತುಗಳಿದ್ದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವರ್ಣಾ ಗ್ರೂಪ್‌ನ ಮಾಲೀಕ ಡಾ. ವಿ.ಎಸ್‌.ವಿ ಪ್ರಸಾದ ಮಾತನಾಡಿ, ಪೊಲೀಸ್‌ ಸಿಬ್ಬಂದಿ ಬಿಸಿಲು, ಧೂಳು, ಮಳೆಯನ್ನೂ ಲೆಕ್ಕಿಸದೇ ಅವಿರತವಾಗಿ ದುಡಿಯುತ್ತಾರೆ. ಇಂತಹ ಕಾರ್ಯಕ್ರಮಕ್ಕೆ ಕೈ ಜೋಡಿಸುವುದು ನನ್ನ ಕರ್ತವ್ಯ. ಕಾರ್ಯಕ್ರಮ ಎಲ್ಲರಿಗು ಮಾದರಿಯಾಗಿದೆ ಎಂದರು.

ರೆಡ್‌ ಎಫ್‌ಎಂನ ಆರ್‌.ಜೆ. ಮೇಘಾ, ಅಸೋಸಿಯೇಟ್‌ ಸ್ಪಾನ್ಸರ್‌ ಡಾ. ಅಗರವಾಲ್‌ ಕಣ್ಣಿನ ಆಸ್ಪತ್ರೆ ಸೆಂಟರ್‌ ಹೆಡ್‌ ವಿಜಯಕುಮಾರ, ಹೆಲ್ತ್‌ ಪಾರ್ಟನರ್‌ ಎಸ್‌ಡಿಎಂ ನಾರಾಯಣ ಹೃದಯಾಲಯದ ಫೆಸಿಲಿಟಿ ಡೈರೆಕ್ಟರ್‌ ಶಶಿಕುಮಾರ ಪಟ್ಟಣಶೆಟ್ಟಿ, ಡ್ರೀಮ್‌ ಪಾರ್ಟನರ್‌ ಎಲ್ಫಿನ್‌ ಡವಲಪರ್ಸ್‌ ಎಂಡಿ ಸಾಜೀದ್‌ ಅಲಿ ಫರಾಷ್‌, ಟ್ರಾಫಿಕ್‌ ಇನಸ್ಪೆಕ್ಟರ್‌ ಆರ್‌.ಜೆ. ಡಿಸೋಜಾ, ರೆಡ್‌ ಎಫ್‌ಎಂನ ಶೋಭಿತ್‌ ಶೆಟ್ಟಿ, ಗ್ರೂಫ್‌ ಮ್ಯಾನೇಜರ್‌ ಕೃಷ್ಣ ಬೆಂಗೇರಿ, ಸಿನಿಯರ್‌ ಮ್ಯಾನೇಜರ್‌ ಮಂಜುನಾಥ ಸಣ್ಣ ಕುಂಬಾರ, ಆರ್‌.ಜೆ. ಮಾಧುರಿ, ಆರ್‌ಜೆ ವಿವೇಕ ಸೇರಿದಂತೆ ಹಲವರಿದ್ದರು. ಮುಂದಿನ 5 ದಿನಗಳ ಕಾಲ ಅವಳಿ ನಗರದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.