ಶಿಕಾರಿಪುರದಲ್ಲಿ ಹಿಂದೂ ಪರ ಸಂಘಟನೆಗಳಿಂದ ಸಿಹಿ ವಿತರಣೆ

| Published : Jun 10 2024, 12:32 AM IST

ಸಾರಾಂಶ

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ 3 ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮ ಹಿನ್ನೆಲೆಯಲ್ಲಿ ಇಲ್ಲಿನ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಸಂಜೆ ವೇಳೆ ಮೋದಿಯವರು ಪ್ರಮಾಣ ವಚನ ವೇಳೆ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಒಗ್ಗೂಡಿ ಪೂಜೆ ಸಲ್ಲಿಸಿ ಮೋದಿಯವರ ದೀರ್ಘಾಯುಷ್ಯಕ್ಕೆ ಹಾಗೂ ಅವಧಿ ಪೂರ್ತಿ ಸುಸೂತ್ರ ಆಡಳಿತಕ್ಕೆ ಪ್ರಾರ್ಥಿಸಿದರು. ಸ್ವಾಮಿ ದರ್ಶನಕ್ಕೆ ಪರಸ್ಥಳದಿಂದ ಆಗಮಿಸಿದ್ದ ನೂರಾರು ಭಕ್ತರಿಗೆ ಸಿಹಿ ವಿತರಿಸಿ ಸಂಭ್ರಮಾಚರಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರಧಾನಿಯಾಗಿ ನರೇಂದ್ರ ಮೋದಿ ಸತತ 3 ನೇ ಬಾರಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕಾರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಜತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಿಸಿದರು.

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ 3 ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮ ಹಿನ್ನೆಲೆಯಲ್ಲಿ ಇಲ್ಲಿನ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಸಂಜೆ ವೇಳೆ ಮೋದಿಯವರು ಪ್ರಮಾಣ ವಚನ ವೇಳೆ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಒಗ್ಗೂಡಿ ಪೂಜೆ ಸಲ್ಲಿಸಿ ಮೋದಿಯವರ ದೀರ್ಘಾಯುಷ್ಯಕ್ಕೆ ಹಾಗೂ ಅವಧಿ ಪೂರ್ತಿ ಸುಸೂತ್ರ ಆಡಳಿತಕ್ಕೆ ಪ್ರಾರ್ಥಿಸಿದರು. ಸ್ವಾಮಿ ದರ್ಶನಕ್ಕೆ ಪರಸ್ಥಳದಿಂದ ಆಗಮಿಸಿದ್ದ ನೂರಾರು ಭಕ್ತರಿಗೆ ಸಿಹಿ ವಿತರಿಸಿ ಸಂಭ್ರಮಾಚರಿಸಿದರು.

ಎಸ್ವಿಕೆ ಮೂರ್ತಿ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ವಿಹಿಪಂ ಮಾಜಿ ಅಧ್ಯಕ್ಷ ಭವರ್ ಸಿಂಗ್,ಮಾಜಿ ಉಪಾಧ್ಯಕ್ಷ ಪ್ರಕಾಶ್ ಜಿನ್ನು ಮುಖಂಡ ಗಿರೀಶ್ ರಾವ್ ಘೋರ್ಪಡೆ, ಪೈಲ್ವಾನ್ ರವಿ, ವಸಂತ ಮಿರಜ್ಕರ್, ನಳ್ಳಿನಕೊಪ್ಪ ಪ್ರಕಾಶ್, ಆನಂದರಾವ್, ಗಿರೀಶ್ ಧಾರವಾಡದ, ಅಶೋಕ್ ಮಾರವಳ್ಳಿ, ಬಸವರಾಜ್,ಅಶೋಕ, ತಿಪ್ಪಣ್ಣ ಮತ್ತಿತರರಿದ್ದರು.ಸಮಸ್ಯೆ ಭವಿಷ್ಯದಲ್ಲಿ ಬಗೆಹರಿಯಲಿದೆ:

ಈ ವೇಳೆ ವಿಶ್ವ ಹಿಂದು ಪರಿಷತ್‌ ಮಾಜಿ ಉಪಾಧ್ಯಕ್ಷ ಪ್ರಕಾಶ್ ಜಿನ್ನು ಮಾತನಾಡಿ, ನೆಹರೂ ಬಳಿಕ ಸತತ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಸಮಸ್ತ ಹಿಂದೂಗಳ, ದೇಶಭಕ್ತರ ಮನಸ್ಸು ಗೆದ್ದಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಈಗಾಗಲೇ ಕೈಗೊಂಡ ಹಲವು ದಿಟ್ಟ ನಿರ್ಧಾರದಿಂದ ದೇಶ ಜಗತ್ತಿನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. 5 ಶತಮಾನದ ಹಿಂದೂ ಸಮುದಾಯದ ರಾಮಮಂದಿರ ನಿರ್ಮಾಣದ ಕನಸು ನನಸಾಗಿಸಿದ ಹೆಗ್ಗಳಿಕೆ ಹೊಂದಿರುವ ಮೋದಿ ಬಾಕಿಯುಳಿದ ದೇಶದಲ್ಲಿನ ಕಗ್ಗಂಟಾಗಿರುವ ಸಮಸ್ಯೆ ಭವಿಷ್ಯದಲ್ಲಿ ಸುಸೂತ್ರವಾಗಿ ಬಗೆಹರಿಸುವ ವಿಶ್ವಾಸವಿದ್ದು ಈ ನಿಟ್ಟಿನಲ್ಲಿ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಆಶಾಭಾವನೆ ಹುಟ್ಟು ಹಾಕಿದ್ದಾರೆ. ದೇಶ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲು ಎಲ್ಲ ದೇಶ ಭಕ್ತರು ಬೆಂಬಲಿಸಿ ಶಕ್ತಿ ತುಂಬಬೇಕಾಗಿದೆ ಎಂದು ಮನವಿ ಮಾಡಿದರು. ಈ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಪ್ರಧಾನಿ ಮೋದಿಗೆ ಜೈಕಾರ ಘೋಷಣೆ ಹಾಕಿದರು. ಪ್ರಮುಖ ವೃತ್ತಗಳಲ್ಲಿ ವಿವಿಧ ನಮೂನೆಯ ಚಿತ್ತಾಕರ್ಷಕ ಪಟಾಕಿ ಸಿಡಿಸಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.