ಸಾರಾಂಶ
ಗುಡ್ಡೆಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗುಡ್ಡೆಹೊಸೂರು ಹೋಟೆಲ್ ಉದ್ಯಮಿ ಕುಡೆಕಲ್ ನಿತ್ಯಾನಂದ ಅವರು ಉಚಿತವಾಗಿ ಟೀಶರ್ಟ್‌ಗಳನ್ನು ವಿತರಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗುಡ್ಡೆಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗುಡ್ಡೆಹೊಸೂರು ಹೋಟೆಲ್ ಉದ್ಯಮಿ ಕುಡೆಕಲ್ ನಿತ್ಯಾನಂದ ಅವರು ಉಚಿತವಾಗಿ ಟೀಶರ್ಟ್‌ಗಳನ್ನು ವಿತರಿಸಿದರು.ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಖಾಸಗಿ ಶಾಲೆಯ ಮಕ್ಕಳಂತೆ ಕಾಣಬೇಕೆಂಬ ಹಂಬಲದೊಂದಿಗೆ ಗುಡ್ಡೆಹೊಸೂರು ಹೋಟೆಲ್ ಉದ್ಯಮಿ ನಿತ್ಯಾನಂದ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗಾಂಧಿ ಜಯಂತಿ ದಿನದ ಶಾಲಾ ಕಾರ್ಯಕ್ರಮದಲ್ಲಿ ಟೀ ಶರ್ಟ್ ವಿತರಿಸಿದರು.ಬಸವನಹಳ್ಳಿ ಲ್ಯಾಂಪ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಅನಿಕುಮಾರ್, 50 ಮಕ್ಕಳಿಗೆ ಐಡಿ ಕಾರ್ಡ್‌ಗಳನ್ನು ವಿತರಿಸಿದರು.ಶಾಲಾ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮಕ್ಕಳಿಂದ ಗುಡ್ಡೆಹೊಸೂರಿನ ಪ್ರಮುಖ ಬೀದಿಗಳಲ್ಲಿ ಗಾಂಧೀಜಿಯ ಸ್ವಚ್ಛ ಭಾರತ ಕನಸಿನ ಸಂದೇಶ ಸಾರುವ ಕಾಲ್ನಡಿಗೆ ಜಾಥಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್. ನಾಗೇಂದ್ರ ವಹಿಸಿದ್ದರು. ಪಂಚಾಯಿತಿ ಸದಸ್ಯರಾದ ರಮೇಶ್, ಗಂಗಮ್ಮ, ಎಸ್‌ಡಿಎಂಸಿ ಉಪಾಧ್ಯಕ್ಷ ದಯಾ, ಮುಖ್ಯ ಶಿಕ್ಷಕ ಕೆ.ಎಸ್. ಸಣ್ಣಸ್ವಾಮಿ, ಅಳುವರ ಸ್ನಾತಕೋತ್ತರ ಪದವಿ ಕಾಲೇಜು ಉಪನ್ಯಾಸಕ ಮಂಜುನಾಥ, ಪ್ರದೀಪ್, ನಿತ್ಯಶ್ರೀ, ಎಂಎಸ್‌ಡಬ್ಲ್ಯು ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.