ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಸಮವಸ್ತ್ರ ಸೀರೆ ವಿತರಣಾ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಆರೋಗ್ಯ ಇಲಾಖೆಯ ಆಧಾರ ಸ್ತಂಭವೇ ಆಶಾ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ ಸಮವಸ್ತ್ರದ ಸೀರೆಯ ಬಣ್ಣ ತುಂಬಾ ಚೆನ್ನಾಗಿದೆ, ಪಿಂಕ್ ಬಣ್ಣದ ಸಮವಸ್ತ್ರ ಧರಿಸುವ ಆಶಾ ಕಾರ್ಯಕರ್ತೆಯರು ಎಷ್ಟೇ ಜನ ಇದ್ದರೂ ಸಹ ಆಶಾ ಕಾರ್ಯಕರ್ತರು ಎಂದು ಎದ್ದು ಕಾಣಿಸುತ್ತಾರೆ ಮತ್ತು ಅದರಲ್ಲಿ ಸಿಗುವ ಗೌರವ ಬೇರೆ ಎಲ್ಲೂ ಸಿಗದು, ಊರಿಂದ ಊರಿಗೆ ನಡೆದುಕೊಂಡು ಗ್ರಾಮದ ಮನೆ ಮನೆಗೂ ಹೋಗಿ ಬಾಣಂತಿ ಗರ್ಭಿಣಿಯರ, ಜನರ ಬಗ್ಗೆ. ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ, ಹಾಗೂ ಮಕ್ಕಳ ಚುಚ್ಚುಮದ್ದಿನಲ್ಲೂ ಸಹ ಅವರ ಪಾತ್ರ ಮುಖ್ಯವಾಗಿರುತ್ತದೆ, ಆರೋಗ್ಯವೇ ಭಾಗ್ಯ ,ಜನರ ಆರೋಗ್ಯದ ಜೊತೆಗೆ ನಿಮ್ಮ ಆರೋಗ್ಯವನ್ನು ಸಹ ನೋಡಿಕೊಳ್ಳಿ ಎಂದರು.
ಮಾ.17ರಂದು ನಮ್ಮ ತಂದೆಯವರಾದ ಚಿಕ್ಕಮಾದು ಅವರ ಹುಟ್ಟುಹಬ್ಬ ಇದೆ. ಆ ಸಮಯದಲ್ಲಿ ನಿಮಗೆ ಮತ್ತೊಂದು ಛತ್ರಿಯನ್ನು ನೀಡುತ್ತೇನೆ ಹಾಗೂ ನನ್ನ ಕ್ಷೇತ್ರದಲ್ಲಿನ ಎಲ್ಲ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಶ್ರಮ ವಹಿಸುತ್ತೇನೆ, ಸಾಂಕೇತಿಕವಾಗಿ ಆಶಾ ಕಾರ್ಯಕರ್ತರಿಗೆ ಸಮವಸ್ತ್ರ ಸೀರೆ ವಿತರಣೆ ಮಾಡಿದರು.ಜಿಲ್ಲಾ ಹಾಲು ಒಕ್ಕೂಟ ಸಂಘದ ನಿರ್ದೇಶಕ ಈರೇಗೌಡ, ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್, ನಾಗರಾಜು, ರಾಜನಾಯ್ಕ, ಶಂಭುಲಿಂಗನಾಯಕ, ಗಿರಿಗೌಡ, ಸೌಮ್ಯ, ಮಂಜುನಾಥ್, ಚಿಕ್ಕಣ್ಣ, ತಾಲೂಕು ಮಟ್ಟದ ಸಿಬ್ಬಂದಿಗಳಾದ ನಾಗೇಂದ್ರ, ರವಿರಾಜ್, ರೇಖಾ, ಪುಷ್ಪ, ಅರ್ಚನಾ, ರಾಜಕೀಯ ಮುಖಂಡರು, ಆಶಾ ಕಾರ್ಯಕರ್ತರು ಇದ್ದರು.