ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

| Published : Jul 11 2025, 01:47 AM IST

ಸಾರಾಂಶ

ಪೂರ್ವ ವಿದ್ಯಾರ್ಥಿಗಳ ಸಂಘ ಮತ್ತು ಕ್ರೀಡಾ ತಂಡ ವತಿಯಿಂದ ನಿಡ್ತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪೂರ್ವ ವಿದ್ಯಾರ್ಥಿಗಳ ಸಂಘ ಮತ್ತು ಕ್ರೀಡಾ ತಂಡ (1988 - 89 ) ವತಿಯಿಂದ ನಿಡ್ತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ನಡೆಯಿತು.

ಕಾರ್ಯಕ್ರಮವು ಸುನಿಲ್ ಗೌಡಳ್ಳಿ ಮತ್ತು ಹೇಮಲತಾ ರವರ ನಿರೂಪಣೆ, ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ನಿವೃತ್ತ ಶಿಕ್ಷಕರಾದ ಡಿ ಬಿ ಸೋಮಪ್ಪನವರು ಮತ್ತು ಪಂಚಾಯಿತಿಯ ಅಧ್ಯಕ್ಷರಾದ ಅಶೋಕ್ ಟಿ ಕೆ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಆರಂಭಗೊಂಡಿತು.

ಸಂಘದ ಅಧ್ಯಕ್ಷರಾದ ಜಯಕುಮಾರ್ ರವರು ಮಾತನಾಡಿ ವಿದ್ಯಾ ದೇವಾಲಯದಂತಿದ್ದ ಈ ಶಾಲೆಯು ಅತ್ಯಂತ ಕಡಿಮೆ ಮಕ್ಕಳನ್ನು ಹೊಂದಿರುವುದು ಬಹಳ ದುಃಖದ ವಿಷಯ, ನಾವೆಲ್ಲ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದು, ನಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯನ್ನು ಆಂಗ್ಲ ಮಾಧ್ಯಮವನ್ನಾಗಿ ಮಾಡುತ್ತೇವೆ ಮತ್ತು ಶತಮಾನೋತ್ಸವ ಕಂಡ ಇಂತಹ ಸರ್ಕಾರಿ ಶಾಲೆಗಳು ಕಣ್ಮರೆಯಾಗುವ ಹೊಸ್ತಿಲಲ್ಲಿರುವುದು ಬಹಳ ವೇದನೆಯಾಗಿದೆ, ನಿಡ್ತ ಸರ್ಕಾರಿ ಶಾಲೆಯನ್ನು ಉಳಿಸಲು ಪೂರ್ವ ವಿದ್ಯಾರ್ಥಿಗಳಾದ ನಮ್ಮ ದಿಟ್ಟ ಹೆಜ್ಜೆ ಎಂದು ತಿಳಿಸಿದರು.

ನಿಡ್ತ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಮಾನಸ, ಸ್ಥಳೀಯರಾದ ಸುಬ್ಬಪ್ಪ, ಸಿ ಆರ್ ಪಿ ಯವರಾದ ದಿನೇಶ್ ಮತ್ತು ನಿವೃತ್ತ ಶಿಕ್ಷಕಿಯವರಾದ ಸ್ವಾತಿ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು.

ಮಾಜಿ ಸೈನಿಕರಾದ ಮುರುಗನ್ ರವರು ಸ್ವಾಗತಿಸಿ ಮತ್ತು ಮಾಜಿ ಸೈನಿಕರಾದ ರಾಮಕೃಷ್ಣ ಎಂ ಕೆ ರವರು ವಂದಿಸಿದರು. ಸಂಘದ ಸದಸ್ಯರಾದ ಮಲ್ಲೇಶ್ ಎಚ್ ಎಸ್, ರೇಖಲೋಕೇಶ್, ಅಶೋಕ ಜೆ ಯಸ್, ವೀರಭದ್ರಪ್ಪ, ಯೋಗೇಶ್, ಗಣೇಶ್, ಮಣಿ ಮತ್ತು ಮೋಹನಾಕ್ಷಿ ಉಪಸ್ಥಿತರಿದ್ದರು. ಎಸ್, ಡಿ ಎಂ ಸಿ ಅಧ್ಯಕ್ಷರಾದ ಪೂಜಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾರ್ತಿಕ್, ಆನಂದ್ ಮತ್ತು ಪುಟ್ಟಸ್ವಾಮಿ ಹಾಗೂ ಮುಖ್ಯೋಪಾಧ್ಯಾಯರಾದ ರತ್ನ ಮತ್ತು ಸಹ ಶಿಕ್ಷಕರು, ಶಾಲಾ ಮಕ್ಕಳ ಸಹಯೋಗದಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ನಮ್ಮನ್ನಗಲಿದ ಸಹಪಾಠಿಗಳ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಒಂದು ನಿಮಿಷ ಮೌನಾಚರಿಸಿ ಮತ್ತು ಅವರ ಕುಟುಂಬಕ್ಕೆ ಧನ ಸಹಾಯವನ್ನು ಕೂಡ ಮಾಡಲಾಯಿತು.