ಕೆನರಾ ಬ್ಯಾಂಕ್ ಇತ್ತೀಚೆಗೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಕ್ರಮದಡಿಯಲ್ಲಿ, ಪ್ರತಿಭಾನ್ವಿತ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದು , ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಶಿವಮೊಗ್ಗ: ಕೆನರಾ ಬ್ಯಾಂಕ್ ಇತ್ತೀಚೆಗೆ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಉಪಕ್ರಮದಡಿಯಲ್ಲಿ, ಪ್ರತಿಭಾನ್ವಿತ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದು , ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪ್ರಾದೇಶಿಕ ಮುಖ್ಯಸ್ಥರು ಮತ್ತು ಡಿಜಿಎಂ ಸಂಜೀವ್ ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಎಂ ರಾಜು ಅಣಜ ಅವರು, ಕೆನರಾ ಬ್ಯಾಂಕಿನ ಪರಂಪರೆ ಹಾಗೂ ಉದ್ದೇಶದ ಬಗ್ಗೆ ವಿವರಿಸಿದರು. ಎಜಿಎಂ ಶೈಜು ಅಬ್ರಾಹಮ್‌ ಸ್ಕಾಲರ್‌ಶಿಪ್ ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ಅಧಿಕಾರಿ ರಮೇಶ್ ನಾಯಕ್, ಬ್ಯಾಂಕಿನ ಪ್ರಯತ್ನಗಳನ್ನು ಶ್ಲಾಘಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಎಲ್‌ಡಿಎಂ ಹನುಮಂತಪ್ಪ ಬ್ಯಾಂಕಿಂಗ್ ಸೇವೆಗಳ ಬಗ್ಗೆ ವಿವರಿಸಿದರು.

ನಂತರ ಗಣ್ಯರು ಹಣಕಾಸಿನ ನೆರವು ನೀಡುವ ಸ್ಕಾಲರ್ ಶಿಪ್ ಪ್ರಮಾಣಪತ್ರವನ್ನು ವಿತರಿಸಿದರು.

5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ 3,000 ರು. ಸಹಾಯಧನ ಮತ್ತು 8 ರಿಂದ10ನೇ ತರಗತಿಯ ವಿದ್ಯಾರ್ಥಿಗಳಿಗೆ 5,000 ರು. ಸಹಾಯಧನ. ಉಳಿತಾಯ ಮತ್ತು ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಬ್ಯಾಂಕಿಂಗ್ ಜಾಗೃತಿ ಕುರಿತು ಅಧಿವೇಶನ ಮತ್ತು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಮುಕ್ತ ವೇದಿಕೆಯನ್ನು ಸಹ ಆಯೋಜಿಸಲಾಗಿತ್ತು. ವ್ಯವಸ್ಥಾಪಕಿ ಭಾಗ್ಯಶ್ರೀ ಮತ್ತು ಎಫ್‌ಐ ವಿಭಾಗದ ವ್ಯವಸ್ಥಾಪಕಿ ಶಿವ-ಆನಂದ್ ಅಸುಂಡಿ ಉಪಸ್ಥಿತರಿದ್ದರು.