ಅಂಗನವಾಡಿಗಳಿಗೆ ನೀರಿನ ಫಿಲ್ಟರ್‌ಗಳ ವಿತರಣೆ

| Published : Jul 20 2025, 01:15 AM IST

ಸಾರಾಂಶ

ಎಸ್.ಎಫ್.ಸಿ ಶೇಕಡಾ 7.25 ರ ಅನುದಾನದಲ್ಲಿ ಪಟ್ಟಣದ 6 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಸಾಧನಗಳನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ , ಪ್ರದೀಪ್ ಕುಮಾರ್ ಮಾತನಾಡಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡುವಂತೆ ಮನವಿ ಸಲ್ಲಿಸಿದರು .ಮಕ್ಕಳಿಗೆ ಶುದ್ದ ಆಹಾರದ ಜೊತೆಗೆ ಶುದ್ಧ ನೀರು ಅತ್ಯಗತ್ಯವಾಗಿರುವುದನ್ನು ಗಮನಿಸಿ ಒಂದು ಲಕ್ಷದ ಮೂವತ್ತು ಸಾವಿರ ರು.ಗಳ ವೆಚ್ಚದಲ್ಲಿ ಶುದ್ಧ ನೀರಿನ ಸಾಧನವನ್ನು ಕೊಡುಗೆಯಾಗಿ ಇಂದು ನೀಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ 6 ಅಂಗನವಾಡಿಗೆ ಶುದ್ಧ ಕುಡಿಯುವ ನೀರಿನ ಸಾಧನಗಳನ್ನು ಪಟ್ಟಣ ಪಂಚಾಯತಿ ವತಿಯಿಂದ ಕೊಡುಗೆಯಾಗಿ ನೀಡಿದರು.

ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2022-23ನೇ ಎಸ್.ಎಫ್.ಸಿ ಶೇಕಡಾ 7.25 ರ ಅನುದಾನದಲ್ಲಿ ಪಟ್ಟಣದ 6 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಸಾಧನಗಳನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ , ಪ್ರದೀಪ್ ಕುಮಾರ್ ಮಾತನಾಡಿ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡುವಂತೆ ಮನವಿ ಸಲ್ಲಿಸಿದರು .ಮಕ್ಕಳಿಗೆ ಶುದ್ದ ಆಹಾರದ ಜೊತೆಗೆ ಶುದ್ಧ ನೀರು ಅತ್ಯಗತ್ಯವಾಗಿರುವುದನ್ನು ಗಮನಿಸಿ ಒಂದು ಲಕ್ಷದ ಮೂವತ್ತು ಸಾವಿರ ರು.ಗಳ ವೆಚ್ಚದಲ್ಲಿ ಶುದ್ಧ ನೀರಿನ ಸಾಧನವನ್ನು ಕೊಡುಗೆಯಾಗಿ ಇಂದು ನೀಡಲಾಗಿದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯರಾದ ಹೂವಣ್ಣ ಅಂಗನವಾಡಿಗಳಿಗೆ ಅಗತ್ಯವಾದ ಇನ್ನೂ ಹಲವು ಮೂಲಭೂತವಾಗಿ ಬೇಕಿರುವ ಪರಿಕರಗಳನ್ನು ಇನ್ನೆರಡು ತಿಂಗಳಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಮಾಜಿ ಅಧ್ಯಕ್ಷ, ಅಬ್ದುಲ್ ಬಾಸಿದ್, ಸದಸ್ಯರಾದ ಸುಮಿತ್ರಮ್ಮ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಇತರರು ಉಪಸ್ಥಿತರಿದ್ದರು.