ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ–2026ರ ಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಪೆಟ್ಟಿಗೆ ಸೇರಿದಂತೆ ಇನ್ನಿತರೆ ಚುನಾವಣಾ ಸಾಮಾಗ್ರಿಗಳೊಂದಿಗೆ, ಪೊಲೀಸ್ ಬಂದೋಬಸ್ತನೊಂದಿಗೆ ತಮ್ಮ ನಿಯೋಜಿತ ಮತಗಟ್ಟೆಗಳಿಗೆ ಸುರಕ್ಷಿತವಾಗಿ ತಲುಪಿದ್ದು, ಮತದಾನ ಕಾರ್ಯಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ಅಂಕೋಲಾ ತಹಶೀಲ್ದಾರ್ ಕಚೇರಿಯ ಪಶ್ಚಿಮ ಮತ್ತು ಉತ್ತರ ಭಾಗ, ತಹಶೀಲ್ದಾರ್ ಕಚೇರಿ ಭಟ್ಕಳ, ಕೆ.ಎಚ್.ಇ.ಪಿ. ಹೈಸ್ಕೂಲ್ ಅಂಬಿಕಾನಗರ, ತಾಲೂಕಾ ಆಡಳಿತ ಸೌಧ ದಾಂಡೇಲಿ, ತಹಶೀಲ್ದಾರ್ ಕಚೇರಿ ಹಳಿಯಾಳ, ತಹಶೀಲ್ದಾರ್ ಕಚೇರಿ ಹೊನ್ನಾವರ, ಗ್ರಾಮ ಪಂಚಾಯತ್ ಕಚೇರಿ ಹೇರಂಗಡಿ ಹೊನ್ನಾವರ, ಗ್ರಾಮ ಲೆಕ್ಕಿಗರ ಕಚೇರಿ ರಾಮನಗರ, ತಹಶೀಲ್ದಾರ್ ಕಚೇರಿ, ಚುನಾವಣಾ ವಿಭಾಗ ಜೋಯಿಡಾ, ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಕುರ್ನಿಪೇಟೆ, ಸೇಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್ ಕಾರವಾರ, 7ನೇ ಎ ತರಗತಿ ಕೊಠಡಿ (ಪಶ್ಚಿಮ ಬದಿ), ಸೇಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್ ಕಾರವಾರ, 7ನೇ ಬಿ ತರಗತಿ ಕೊಠಡಿ (ಮಧ್ಯ ಭಾಗ), ಉಪ ತಹಶೀಲ್ದಾರ್ ಕಚೇರಿ ನಾಡಕಚೇರಿ, ಗೋಕರ್ಣ, ತಹಶೀಲ್ದಾರ್ ಕಚೇರಿ ಕುಮಟಾ, ತಹಶೀಲ್ದಾರ್ ಕಚೇರಿ ಮುಂಡಗೋಡ, ತಹಶೀಲ್ದಾರ್ ಕಚೇರಿ ಸಿದ್ದಾಪುರ, ನಾಡಕಚೇರಿ ಉಮಾಲಮನೆ ಹೇರೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಂದನೆ (ಗುಬ್ಬುಗೊಡ), ಶ್ರೀ ಮಾರಿಕಾಂಬಾ ಪಿಯು ಕಾಲೇಜು, ಹೈಸ್ಕೂಲ್ ವಿಭಾಗ, ಕೋರ್ಟ್ ರಸ್ತೆ ಶಿರಸಿ (ದಕ್ಷಿಣ ಬದಿ), ಶ್ರೀ ಮಾರಿಕಾಂಬಾ ಪಿಯು ಕಾಲೇಜು, ಹೈಸ್ಕೂಲ್ ವಿಭಾಗ, ಕೋರ್ಟ್ ರಸ್ತೆ ಶಿರಸಿ (ಉತ್ತರ ಬದಿ), ಶ್ರೀ ಮಾರಿಕಾಂಬಾ ಪಿಯು ಕಾಲೇಜು, ಹೈಸ್ಕೂಲ್ ವಿಭಾಗ, ಕೋರ್ಟ್ ರಸ್ತೆ ಶಿರಸಿ, ತಹಶೀಲ್ದಾರ್ ಕಚೇರಿ ಯಲ್ಲಾಪುರ, ಉಪ ತಹಶೀಲ್ದಾರ್ ಕಚೇರಿ ಮಂಚಿಕೇರಿಯಲ್ಲಿ ಸೇರಿದಂತೆ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಚುನಾವಣೆಯಲ್ಲಿ ಜಿಲ್ಲೆಯ 25 ಮತದಾನ ಕೇಂದ್ರಗಳಲ್ಲಿ 8,028 ಪುರುಷರು ಹಾಗೂ 8,011 ಮಹಿಳೆಯರು ಸೇರಿದಂತೆ ಒಟ್ಟು 16,039 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾನ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮತದಾನ ಕೇಂದ್ರಗಳಿಗೆ ಒಟ್ಟು 34 ಪಿಆರ್‌ಒಗಳು, 35 ಎಪಿಆರ್‌ಒಗಳು, 62 ಪಿಒಗಳು, 25 ಮೈಕ್ರೋ ವೀಕ್ಷಕರು ಹಾಗೂ 125 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚುನಾವಣೆಯ ಅಂತಿಮ ಕಣದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮೋಹನ ಲಿಂಬಿಕಾಯಿ, ಭಾರತೀಯ ಜನತಾ ಪಾರ್ಟಿಯ ಸಂಕನೂರ ಎಸ್.ವಿ., ಕರ್ನಾಟಕ ರಾಷ್ಟ್ರ ಸಮಿತಿಯ ನಿಶಾಂತ ಶಂಕರ ಬಂಕಾಪೂರ, ಕಿತ್ತೂರ ಕಲ್ಯಾಣ ಕರ್ನಾಟಕ ಸೇನಾದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಜನತಾ ಚಳುವಳಿ ಭಾರತ ಪಕ್ಷದ ತಳವಾರ ಶಿವಕುಮಾರ, ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ಮನ್ನಾನ, ಡಾ. ಜಿ.ಹೆಚ್.ಇಮ್ರಾಪೂರ, ಉಮೇಶ ಕೃಷ್ಣಪ್ಪ ದೈವಜ್ಞ, ಕೃಷ್ಣ ಎಚ್.ಬಳೆಗಾರ, ಕಾಂತಕುಮಾರ್ ಆರ್., ಜಿಶಾನ ಡಿ.ಸಿರಸಂಗಿ, ಜೀಶಾನ ಅಹ್ಮದಖಾನ ಪಠಾಣ, ಬಸವರಾಜ ಶಂಕರಪ್ಪ ಕೊಟಗಿ, ಸಂತೋಷ ಮನೋಹರ ವೆರ್ಣೇಕರ್ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅಕ್ಟೋಬರ್ 27 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆಯು ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆಯಲಿದೆ.