ಜಿಲ್ಲಾ ವಕೀಲರ ಸಂಘ ಚುನಾವಣೆ ಕಾನೂನುಬಾಹಿರ

| Published : Sep 01 2025, 01:03 AM IST

ಜಿಲ್ಲಾ ವಕೀಲರ ಸಂಘ ಚುನಾವಣೆ ಕಾನೂನುಬಾಹಿರ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲಾ ವಕೀಲರ ಸಂಘದ ಚುನಾವಣೆ ಕಾನೂನು ಬಾಹಿರವಾಗಿದ್ದು, ಪದಾಧಿಕಾರಿಗಳ ಆಯ್ಕೆ ಅಸಿಂಧು ಎಂದು ಘೋಷಿಸುವಂತೆ ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ, ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಒತ್ತಾಯಿಸಿದ್ದಾರೆ.

- ಅಧ್ಯಕ್ಷ ಸ್ಥಾನ ಪರಾಜಿತ ಅಭ್ಯರ್ಥಿ ಗುಮ್ಮನೂರು ಮಲ್ಲಿಕಾರ್ಜುನಪ್ಪ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾ ವಕೀಲರ ಸಂಘದ ಚುನಾವಣೆ ಕಾನೂನು ಬಾಹಿರವಾಗಿದ್ದು, ಪದಾಧಿಕಾರಿಗಳ ಆಯ್ಕೆ ಅಸಿಂಧು ಎಂದು ಘೋಷಿಸುವಂತೆ ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ, ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನ ವಕೀಲರ ಸಭಾ ಭವನದಲ್ಲಿ ಸಂಘದ 2025-26 ರಿಂದ 2026-27ರ ಅವಧಿಗೆ ಜಿಲ್ಲಾ ವಕೀಲರ ಸಂಘದ ಚುನಾವಣೆ ನಡೆದಿದೆ. ಇದು ಕಾನೂನುಬಾಹಿರ ಚುನಾವಣೆಯಾಗಿದ್ದು, ಸಂಘಕ್ಕೆ ಸರ್ಕಾರದ ಅಧಿಕಾರಿಗಳ ನೇಮಕ ಮಾಡಬೇಕು ಎಂದರು.

ಆ.23ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾನೂ ಅಭ್ಯರ್ಥಿಯಾಗಿದ್ದೆ. ಬೆಳಗ್ಗೆ 11.30ರಿಂದ ಸಂಜೆ 5.30 ಗಂಟೆವರೆಗೆ ನಡೆದ ಚುನಾವಣೆಯಲ್ಲಿ ಮತದಾರರು ದಾವಣಗೆರೆ ವಕೀಲರ ಸಂಘದ ಸದಸ್ಯರು ಮತ ಚಲಾಯಿಸಬೇಕು. ಆದರೆ, ಸಂಘದಲ್ಲಿ ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ಹರಪನಹಳ್ಳಿ, ಚಿತ್ರದುರ್ಗ ಹೀಗೆ ವಿವಿಧ ತಾಲೂಕು ಸಂಘಗಳಲ್ಲಿ ಸದಸ್ಯರಾದವರು ದಾವಣಗೆರೆ ಜಿಲ್ಲಾ ವಕೀಲರ ಸಂಘದಲ್ಲಿ ಸದಸ್ಯರಾಗಿರುವುದು ಕಾನೂನುಬಾಹಿರ. ನಾನು ದಾವಣಗೆರೆ ಜಿಲ್ಲಾ ವಕೀಲರ ಸಂಘದಲ್ಲಿ ಸದಸ್ಯನಾಗಿದ್ದೇನೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೂ ಆಗಿದ್ದೇನೆ. ಸದರಿ ವಕೀಲರು ತಮ್ಮ ತಾಲೂಕುಗಳಲ್ಲಿ ಸದಸ್ಯತ್ವ ಹೊಂದಿದ್ದರೂ, ದಾವಣಗೆರೆ ಸಂಘದಲ್ಲೂ ಸದಸ್ಯತ್ವ ಪಡೆದಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಬಾರ್ ಕೌನ್ಸಿಲ್ ವಕೀಲರ ಸಂಘದ ಅಧ್ಯಕ್ಷರ ನಿರ್ಣಯದಂತೆ ಯಾವುದಾದರೂ ಒಂದು ವಕೀಲರ ಸಂಘದಲ್ಲಿ ಸದಸ್ಯತ್ವ ಹೊಂದಿರಬೇಕು. ಎರಡು ಕಡೆ ಮತ ಚಲಾವಣೆ ಮಾಡಬಾರದೆಂಬ ನಿರ್ಣಯವಾಗಿರುತ್ತದೆ. ಈ ನಿರ್ಣಯಕ್ಕೆ ಎರಡೂ ಸಂಘಗಳಲ್ಲಿ ಸದಸ್ಯತ್ವ ಹೊಂದಿ, ಮತ ಚಲಾಯಿಸಿರುವುದು ನಮ್ಮ ಗಮನಕ್ಕೂ ಬಂದಿದೆ. ಆದರೆ, ಚುನಾವಣಾಧಿಕಾರಿ ಗಮನಕ್ಕೆ ತರಲು ಸಾಧ್ಯವಾಗಿರಲಿಲ್ಲ. ಚುನಾವಣೆ ಕಾರಣ ಸುಸ್ತಾಗಿದ್ದರಿಂದ ಮನೆಗೆ ಹೋಗಿದ್ದೆ. ಮತ ಎಣಿಕೆ ವೇಳೆ ಸೂಚಕರಿಗೂ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಎಂದರು.

ಚುನಾವಣೆ ನಡೆದ ಮಾರನೇ ದಿನ ಚುನಾವಣಾಧಿಕಾರಿಗಳು ವಾಟ್ಸಪ್‌ನಲ್ಲಿ ಮಾಡಿದ ಅಭ್ಯರ್ಥಿಗಳ ಗ್ರೂಪ್‌ನಲ್ಲಿ, ವಕೀಲರ ಸಂಘದ ಗ್ರೂಪ್‌ಗಳಿಗೆ ಚುನಾವಣಾಧಿಕಾರಿಗಳಿದ್ದ ಗ್ರೂಪ್‌ಗೆ ವಾಟ್ಸಪ್ ಮೂಲಕ ತಕರಾರು ಸಲ್ಲಿಸಿದ್ದೇನೆ. ಈ ತಕರಾರನ್ನು ಚುನಾವಣಾಧಿಕಾರಿಗಳ ವಾಟ್ಸಪ್‌ ನಂಬರ್‌ಗೂ ಕಳಿಸಿದ್ದೇನೆ ಎಂದು ಮಾಹಿತಿ ನೀಡಿದರು.

- - -

-31ಕೆಡಿವಿಜಿ1: ಅಭ್ಯರ್ಥಿ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.