ಸಾರಾಂಶ
ಬಿಜೆಪಿಯ 18 ಜನ ಶಾಸಕರನ್ನು ಸದನದಿಂದ ಅಮಾನತು ಮಾಡಿದ ಸ್ಪೀಕರ್ ನಿರ್ಣಯ, ಅಲ್ಪಸಂಖ್ಯಾತರಿಗೆ ಕಾಮಗಾರಿ ಗುತ್ತಿಗೆ ನೀಡುವಾಗ ಶೇ. 4ರಷ್ಟು ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟಿಸಿದರು.
ಗದಗ: ಬಿಜೆಪಿಯ 18 ಜನ ಶಾಸಕರನ್ನು ಸದನದಿಂದ ಅಮಾನತು ಮಾಡಿದ ಸ್ಪೀಕರ್ ನಿರ್ಣಯ, ಅಲ್ಪಸಂಖ್ಯಾತರಿಗೆ ಕಾಮಗಾರಿ ಗುತ್ತಿಗೆ ನೀಡುವಾಗ ಶೇ. 4ರಷ್ಟು ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟಿಸಿದರು.
ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ವಿರೋಧ ಪಕ್ಷವಾಗಿ ನಾವು ನ್ಯಾಯಯುತ ಹೋರಾಟ ಮಾಡಿದರೂ ಅಮಾನತು ಮಾಡಿರುವುದು ಖಂಡನೀಯ. ಇದೊಂದು ಸರ್ವಾಧಿಕಾರಿ ಸರ್ಕಾರವಾಗಿದೆ. ಇಂತಹ ಸಂದರ್ಭದಲ್ಲಿ ಸಭಾಧ್ಯಕ್ಷರು ಪಕ್ಷಾತೀತವಾಗಿ ನಿಯಮಾನುಸಾರ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. ಆದರೆ ಅವರು ಈ ತರಹದ ನಿರ್ಣಯವನ್ನು ಯಾರ ಒತ್ತಡದಿಂದ ತೆಗೆದುಕೊಂಡರು ಎಂಬುದು ತಿಳಿಯಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ, ಅಲ್ಪಸಂಖ್ಯಾತರ ತುಷ್ಟಿಕರಣ ಮತ್ತು ಗುತ್ತಿಗೆಯಲ್ಲಿ ಅವರಿಗೆ ಮೀಸಲಾತಿ ನೀಡುವದು ಸಂವಿಧಾನಬದ್ಧವಾಗಿಲ್ಲ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶವಿಲ್ಲ, ಆದರೂ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೆ ತಂದು ಜನರ ನಡುವೆ ಸಂಘರ್ಷಕ್ಕೆ ನಾಂದಿ ಮಾಡಿಕೊಡುತ್ತಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ರಾಜ್ಯ ಸರ್ಕಾರದ ನಡೆಯನ್ನು ಬಲವಾಗಿ ಖಂಡಿಸಿದರು. ಪ್ರತಿಭಟನಾ ಸಭೆಯ ನಂತರ ಮಾನವ ಸರಪಳಿಯನ್ನು ನಿರ್ಮಿಸಿ, ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಘೋಷಣೆಗಳನ್ನು ಕೂಗಿ ಸರ್ಕಾರದ ನೀತಿಯನ್ನು ಖಂಡಿಸಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಫಕೀರೇಶ ರಟ್ಟಿಹಳ್ಳಿ, ಆರ್.ಕೆ. ಚವ್ಹಾಣ, ನಾಗರಾಜ ಕುಲಕರ್ಣಿ, ಹಿರಿಯರಾದ ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ಉಮೇಶಗೌಡ ಪಾಟೀಲ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಅಧ್ಯಕ್ಷ ಬೂದಪ್ಪ ಹಳ್ಳಿ, ತೋಟೊಸಾ ಭಾಂಡಗೆ, ಬಿ.ಎಚ್. ಲದ್ವಾ, ಎಂ.ಎಂ. ಹಿರೇಮಠ, ವಿಜಯಕುಮಾರ ಗಡ್ಡಿ, ಭೀಮಸಿಂಗ ರಾಠೋಡ, ಶ್ರೀಪತಿ ಉಡುಪಿ, ವಸಂತ ಮೇಟಿ, ಉಮೇಶ ಮಲ್ಲಾಪೂರ, ಹೇಮಗಿರೀಶ ಹಾವಿನಾಳ, ಸೋಮಶೇಖರ ಚೆರೇದ, ಮಹೇಶ ಮುಸ್ಕಿನಭಾವಿ, ನಾಗನಗೌಡ ತಿಮ್ಮನಗೌಡ್ರ, ಅಂದಪ್ಪ ಹಾರೂಗೇರಿ, ಅಶೋಕ ನವಲಗುಂದ, ರವಿ ದಂಡಿನ, ಚಂದ್ರು ತಡಸದ, ರಾಘವೇಂದ್ರ ಯಳವತ್ತಿ, ಮಂಜುನಾಥ ಮುಳಗುಂದ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ಜಯಶ್ರೀ ಅಣ್ಣಿಗೇರಿ, ವಿಜಯಲಕ್ಷ್ಮೀ ಶಶಿಧರ ದಿಂಡೂರ, ಲಕ್ಷ್ಮೀ ಶಂಕರ ಕಾಕಿ, ಶಿವು ಹಿರೇಮನಿಪಾಟೀಲ, ಯೋಗೇಶ್ವರಿ ಭಾವಿಕಟ್ಟಿ, ಅಪ್ಪಣ್ಣ ಟೆಂಗಿನಕಾಯಿ, ನಾಗರಾಜ ತಳವಾರ, ಬಸವರಾಜ ಇಟಗಿ, ರಮೇಶ ವಕ್ಕಾರ, ವಾಯ್.ಪಿ.ಅಡ್ನೂರ, ನಿಂಗಪ್ಪ ಮಣ್ಣೂರ, ಬಸವರಾಜ ಬಡಿಗೇರ, ರೇಖಾ ಬಂಗಾರಶೆಟ್ಟರ ಹಾಗೂ ಇನ್ನೂ ಹಲವಾರು ಪ್ರಮುಖರು ಹಾಜರಿದ್ದರು.