ಇಡೀ ವಿಶ್ವವೇ ಮೋದಿ ಮತ್ತೆ ಅಧಿಕಾರ ಹಿಡಿಯಲು ಕಾಯುತ್ತಿದೆ

| Published : Mar 09 2024, 01:30 AM IST

ಸಾರಾಂಶ

ಕಳೆದ ಇಪ್ತೈದು ಮುವ್ವತ್ತು ವರ್ಷದಿಂದ ಸೋಲುತ್ತಲೇ ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗೆಲ್ಲುವ ಭರವಸೆಯನ್ನಿಟ್ಟುಕೊಂಡು ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿಯವರೆಗೂ ವೀರಶೈವ ಸಮಾಜದವರೇ ಅಧ್ಯಕ್ಷರಾಗುತ್ತಿದ್ದರು. ಈಗ ಎಚ್.ಡಿ. ಕೋಟೆ ತಾಲೂಕಿಗೆ ಒಕ್ಕಲಿಗ ಸಮಾಜಕ್ಕೆ ಮತ್ತು ಸರಗೂರು ತಾಲೂಕಿಗೆ ವೀರಶೈವ ಸಮಾಜದ ಅಧ್ಯಕ್ಷರಿಗೆ ಮಣೆ ಹಾಕಲಾಗಿದೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಭಾರತವಲ್ಲದೇ ಇಡೀ ವಿಶ್ವವೇ ಮೋದಿ ಅಧಿಕಾರ ಹಿಡಿಯುವುದನ್ನು ಎದುರು ನೋಡುತ್ತಿದೆ ಎಂದು ಮೈಸೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ್ ಕುಮಾರ್ ತಿಳಿಸಿದರು.

ಪಟ್ಟಣದ ಜೈನಭವನದಲ್ಲಿ ಬಿಜೆಪಿಯ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನಾಗಲಿ, ಇಲ್ಲಿನ ಅಭ್ಯರ್ಥಿಯನ್ನು ಗಮನದಲ್ಲಿಟ್ಟುಕೊಳ್ಳದೇ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಕು ಎಂದರು.

ಪಕ್ಷದ ನಿಯಮದಂತೆ ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ನಡೆಸಲಾಗುತ್ತದೆ ಎಂದರು.

ರಾಜ್ಯ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ ಮಾತನಾಡಿ, ಕಳೆದ ಇಪ್ತೈದು ಮುವ್ವತ್ತು ವರ್ಷದಿಂದ ಸೋಲುತ್ತಲೇ ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗೆಲ್ಲುವ ಭರವಸೆಯನ್ನಿಟ್ಟುಕೊಂಡು ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿಯವರೆಗೂ ವೀರಶೈವ ಸಮಾಜದವರೇ ಅಧ್ಯಕ್ಷರಾಗುತ್ತಿದ್ದರು. ಈಗ ಎಚ್.ಡಿ. ಕೋಟೆ ತಾಲೂಕಿಗೆ ಒಕ್ಕಲಿಗ ಸಮಾಜಕ್ಕೆ ಮತ್ತು ಸರಗೂರು ತಾಲೂಕಿಗೆ ವೀರಶೈವ ಸಮಾಜದ ಅಧ್ಯಕ್ಷರಿಗೆ ಮಣೆ ಹಾಕಲಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಜವಬ್ದಾರಿ ಇದೆ, ಕಳೆದ ಲೋಕಸಭೆಯಲ್ಲಿ ಅರವತ್ತು ಸಾವಿರ ಮತ ನೀಡಲಾಗಿತ್ತು, ಈ ಭಾರಿ ಮೈತ್ರಿ ಇರುವುದರಿಂದ ಒಂದು ಲಕ್ಷ ಮತ ಹಾಕಿಸುವ ಗುರಿ ನಮ್ಮ ಮೇಲಿದೆ. ಬೂತ್ಗಳಲ್ಲಿ ಹೆಚ್ಚು ಮತ ಬಂದ ಗ್ರಾಮಕ್ಕೆ ಮುಂಬರುವ ಜಿಲ್ಲಾ ಮತ್ತು ತಾಪಂನಲ್ಲಿ ಅವರನ್ನು ಗುರುತಿಸಲಾಗುವುದು ಎಂದರು.

ಪ್ರಧಾನಿ ಮೋದಿ ಅವರು ದೇಶದಲ್ಲಿ 390 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದು ಚಾಮರಾಜನಗರ ಕ್ಷೇತ್ರವೂ ಕೂಡ ಒಂದಾಗಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ನಿಕಟಪೂರ್ವ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ ಮಾತನಾಡಿ, ನಾನು ಅಧ್ಯಕ್ಷನಾಗಿದ್ದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಹಲವು ಚುನಾವಣೆಯಲ್ಲಿ ಪಕ್ಷವನ್ನು ಮೇಲೆತ್ತಲು ಹಲವು ಮುಖಂಡರ, ರಾಜ್ಯ ಮತ್ತು ಜಿಲ್ಲಾ ನಾಯಕರ ಶ್ರಮದಿಂದ ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ಈ ವೇಳೆ ನಿಕಟಪೂರ್ವ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ, ಬಿಜೆಪಿ ಬಾವುಟವನ್ನು ಎಚ್.ಡಿ. ಕೋಟೆ ಮಂಡಲದ ನೂತನ ಅಧ್ಯಕ್ಷ ಶಂಭೇಗೌಡ, ಸರಗೂರು ಮಂಡಲದ ನೂತನ ಅಧ್ಯಕ್ಷ ಕೆ.ಪಿ. ಗುರುಸ್ವಾಮಿ ಅವರಿಗೆ ಹಸ್ತಾಂತರಿಸುವ ಮೂಲಕ ಅಧಿಕಾರ ನೀಡಲಾಯಿತು.

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ನಟರಾಜು, ಎಸ್.ಟಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ನಾಗೇಶ್, ಟೌನ್ ಅಧ್ಯಕ್ಷ ನಂದೀಶ್, ಸೋಮಾಚಾರ್, ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ವಿವೇಕಾನಂದ, ಕಚೇರಿ ಕಾರ್ಯದರ್ಶಿ ಚಂದ್ರಮೌಳಿ, ಎಸ್.ಸಿ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ರಾಜು, ಸಾಮಾಜಿಕ ಜಾಲತಾಣದ ನಿಕಟಪೂರ್ವ ಸಂಚಾಲಕ ಬಹದ್ದೂರ್ ಸತೀಶ್, ಗೋಕುಲ್, ಗಣಪತಿ ಇದ್ದರು.