ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಅಭ್ಯರ್ಥಿ ರಘುನಾಥ್ ಅವರನ್ನು ಬೆಂಬಲಿಸಲು ಬಿ.ಆರ್. ನಟರಾಜ ಜೋಯಿಸ್ ಅವರ ನೇತೃತ್ವದಲ್ಲಿ ನಡೆದ ಸಭೆ ತೀರ್ಮಾನಿಸಿತು.ಜಿಲ್ಲಾ ಬ್ರಾಹ್ಮಣ ಮಹಾಸಭಾ, ಸಂಧ್ಯಾ ಸುರಕ್ಷಾ ಟ್ರಸ್ಟ್, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕ ವೇದಿಕೆ, ಶಾಕಂಬರಿ ಧಾರ್ಮಿಕ ಶ್ರದ್ಧಾಕೇಂದ್ರ, ಅಟಲ್‌ಜೀ ಸಂಸ್ಕಾರ ಭಾರತ್ ಪ್ರತಿಷ್ಠಾನದ ಅಡಿಯಲ್ಲಿ ನಟರಾಜ ಜೋಯಿಸ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬ್ರಾಹ್ಮಣ ಸಮುದಾಯದ ವಿವಿಧ ಸಂಘಗಳ ಅಧ್ಯಕ್ಷರು ಪಾಲ್ಗೊಂಡು ಈ ಬಾರಿಯ ಚುವಾಣೆಯಲ್ಲಿ ಗುರುನಾಥ್ ಅವರನ್ನು ಬೆಂಬಲಿಸಿ, ಚುನಾವಣಾ ಪ್ರಚಾರ ನಡೆಸಲು ತೀರ್ಮಾನಿಸಿದರು.ಸಭೆಯಲ್ಲಿ ವಿವಿಧ ಸಂಘದ ಅಧ್ಯಕ್ಷರಾದ ಸುರ್ಯ ನಾರಾಯಣರಾವ್, ಬಬ್ಬೂರುಕಮ್ಮೆ, ಶ್ರೀನಿವಾಸ್, ಅಶ್ವಥ್‌ನಾರಾಯಣ್, ನಾರಾಯಣರಾವ್‌ಬಡಗನಾಡು, ನಟರಾಜ್, ಗುರುಮೂರ್ತಿ, ಬೆಟ್ಟದಪುರ ಸಂಕೇತಿ ಸರೋಜಮ್ಮ, ಕೌಶಿಕ್‌ಸಂಕೇತಿ, ಅನ್ನಪೂರ್ಣಮ್ಮ, ಪ್ರಭಾಕರ್, ಗಣೇಶ್‌ಕೌಶಿಕ್‌ಶರ್ಮ, ಸೀತಾರಾಂ, ವಿಜಯಲಕ್ಷ್ಮೀ, ವಿಜಯ ವೆಂಕಟೇಶ್, ಜಲಜಾಕ್ಷಿ, ಉಷಾ, ಅಶೋಕ್, ಸುರೇಶ್, ರವೀಂದ್ರ, ಸುರೇಶ್, ಹೋಟೆಲ್‌ಮಾಲೀಕರಾದ ರಘು, ಪ್ರಹ್ಲಾದ್, ಯುವಕರಾದ ಸತ್ಯನಾರಾಯಣ, ಗಂಗಾಧರ್, ಪ್ರಭಾಕರ್, ಸುರೇಶ್, ಕೊಳ್ಳೇಗಾಲ, ನಂಜನಗೂಡು, ಮಂಡ್ಯ, ಜಿ.ವಿ. ನಾಗರಾಜ್, ಶ್ರೀರಂಗಪಟ್ಟಣ ಬ್ರಾಹ್ಮಣ ಸಂಘಟನೆಯ ಅಧ್ಯಕ್ಷರು ಮತ್ತು ಮುಖಂಡರು ಪಾಲ್ಗೊಂಡಿದ್ದರು.