ಸ್ಲಮ್‌ ಬೋರ್ಡ್‌ ಮನೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

| Published : May 19 2025, 02:21 AM IST

ಸ್ಲಮ್‌ ಬೋರ್ಡ್‌ ಮನೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

District Collector instructs to complete work on slum board house

-ಚಿಂಚೋಳಿ ತಾಲೂಕಿಗೆ ಬಿ.ಫೌಜಿಯಾ ತರನ್ನುಮ ಭೇಟಿ । ಜಾತಿ ಸಮೀಕ್ಷೆ ಕಾರ್ಯ ಪರಿಶೀಲನೆ

----

ಕನ್ನಡಪ್ರಭ ವಾರ್ತೆ ಚಿಂಚೋಳಿ

ಎಲ್ಲ ಗ್ರಾಮಗಳಲ್ಲಿ ಒಳಮೀಸಲು ಜಾತಿಗಣತಿಕಾರ್ಯವನ್ನು ಚಿಂಚೋಳಿ ತಾಲೂಕಿನಲ್ಲಿ ಸಮೀಕ್ಷಾ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದೆ. ಜಾತಿಸಮೀಕ್ಷೆ ಕಾರ್ಯವನ್ನು ಸರಕಾರ ಮೇ೨೫ಕ್ಕೆವಿಸ್ತರಣೆ ಮಾಡಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ ಹೇಳಿದರು.

ಚಿಂಚೋಳಿ ಪುರಸಭೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಚಿಮ್ಮಾಇದಲಾಯಿ ಗ್ರಾಮಕ್ಕೆ ಭೇಟಿ ಜಾತಿ ಜನಗಣತಿ ಕಾರ್ಯ ಪರಿಶೀಲಿಸಲಾಗಿದೆ. ಜಾತಿ ಸಮೀಕ್ಷೆಯಲ್ಲಿ ವಲಸೆ ಹೋದವರಿಗೆ ಜಾತಿ ಸಮೀಕ್ಷೆ ಬಗ್ಗೆ ತಿಳಿಸಬೇಕು ಎಂದು ತಿಳಿಸಿದರು.ನಂತರ ಪುರಸಭೆ ಕಚೇರಿಗೆ ಭೇಟಿ ನೀಡಿದ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರೊಂದಿಗೆ ನಡೆಸಿ ಚಿಂಚೋಳಿಯಲ್ಲಿ ಕೆ.ಆರ್.ಡಿ.ಸಿ.ಎಲ್ ನಿಗಮದಿಂದ ನಡೆಸಿರುವ ಒಳಂಗಾಣ ಕ್ರೀಡಾಂಗಣ, ರಂಗಮಂದಿರ,ಶಾಪಿಂಗ ಕಾಂಪ್ಲೆಕ್ಸ ಅಭಿವೃದ್ಧಿ ಕಾಮಗಾರಿ ಸಂಪೂರ್ಣವಾಗಿ ಕಳೆಪೆಮಟ್ಟದಿಂದ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ತನಿಖೆ ನಡೆಸಲು ಉನ್ನತ ಅಧಿಕಾರಿಗಳ ತಂಡ ರಚಿಸಲಾಗಿದೆ.

ಪುರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಸದಸ್ಯರು ಅಧಿಕಾರಿಗಳೊಂದಿಗೆ ಹೊಂದಾಣಕೆಯಿಂದ ಒಳ್ಳೆಯ ಕೆಲಸವನ್ನು ಮಾಡಲು ಸೂಚಿಸಿದ್ದೇನೆ. ಚಿಂಚೋಳಿ ಪುರಸಭೆಗೆ ನಗರೋತ್ಥಾನ ಯೋಜನೆಗಳು ಎಸ್.ಎಫ,ಸಿ ಯೋಜನೆ, ಕಂದಾಯ ಇಲಾಖೆ ಆರೋಗ್ಯ ಇಲಾಖೆ ಅಭಿವೃದ್ಧಿ ಕೆಲಸ ಕುಂಠಿತವಾಗಿವೆ ಅವುಗಳ ಪ್ರಗತಿಗೆ ಸೂಚನೆ ಮಾಡಲಾಗಿದೆ ಎಂದು ಹೇಳಿದರು.

ಚಂದಾಪೂರ ನಗರದ ಬೀಜೋತ್ಪಾದನಾ ಕೇಂದ್ರದಲ್ಲಿ ೧೦ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ ತಾಲೂಕ ಆಡಳಿತ ಕಚೇರಿಗೆ ಮೂಲಸೌಕರ್ಯ ಕೊರತೆಯಿಂದಾಗಿ ಪ್ರಾರಂಭಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೌಚಾಲಯ ಕಾರ್ಯವನ್ನು ಪರಿಶೀಲಿಸಲಾಗಿದ್ದು, ಗುಣಮಟ್ಟದಿಂದ ನಿರ್ಮಿಸುವಂತೆ ಎಚ್ಚರಿಕೆ ನೀಡಿದ್ದೇನೆ ಎಂದರು.

ಚಿಂಚೋಳಿ ಅಂಬೇಡ್ಕರ, ಜಗಜೀವನರಾಮ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ.

ಕಲಭಾವಿ ತಾಂಡಾ ರಸ್ತೆ ಮಾರ್ಗದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ ಸ್ಲಮ್‌ ಮನೆಗಳು ಇನ್ನು ಪೂರ್ಣಗೊಂಡಿಲ್ಲವೆಂದು ಸಾರ್ವಜನಿಕರು ದೂರಿದ್ದು, ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳು ೯ತಿಂಗಳು ಅವಕಾಶ ನೀಡುವಂತೆ ತಿಳಿಸಿದ್ದಾರೆ.

ಮನೆಗಳನ್ನು ಗುಣಮಟ್ಟದಿಂದ ನಿರ್ಮಿಸಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಮನೆಗಳು ಹಾಳಾಗಿವೆ. ಇವುಗಳ ತನಿಖೆಯನ್ನು ನಡೆಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ, ಕೆ.ಆರ್.ಡಿ.ಸಿ.ಎಲ್.ಸ್ಲಂಬೋರ್ಡ ಕಾಮಗಾರಿ ಕಳೆಪೆಮಟ್ಟದಿಂದ ಕೂಡಿವೆ. ತನಿಖೆಗಾಗಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.

ಸೇಡಮ ಸಹಾಯಕ ಆಯುಕ್ತ ಪ್ರಭುರೆಡ್ಡಿ ಪಾಟೀಲ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಸ್ಲಂಬೋರ್ಡ ಎಇಇ ಶ್ರೀಧರ.ತಾಪಂ ಅಧಿಕಾರಿ ಶಂಕರ ರಾಠೋಡ ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ವಾಲಿ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಪುರಸಭೆ ಅಧ್ಯಕ್ಷ ಆನಂದ ಟೈಗರ,ಗ್ರೇಡ-೨ತಹಸೀಲ್ದಾರ ವೆಂಕಟೇಶ ದುಗ್ಗನ್, ಡಾ|ಮಹ್ಮದಗಫಾರ ಅಹೆಮದ, ಡಾ.ಬಾಲಾಜಿ ಪಾಟೀಲ, ಡಾ|ಸಂತೋಷ ಪಾಟೀಲ, ಬಿಇಒ ಲಚಮಯ್ಯ, ಪಿಎಸ್‌ಐ ಗಂಗಮ್ಮ,ಕಂದಾಯ ನಿರೀಕ್ಷ ರವಿಕುಮಾರ ಪಾಟೀಲ,ಜೆಇ ದೇವೇಂದ್ರ ಕೋರವಾರ ಇದ್ದರು.

---

ಫೋಟೊ:

ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ ಭೇಟಿ ನೀಡಿ ಜಾತಿ ಜನಗಣತಿ ಕಾರ್ಯವನ್ನು ಪರಿಶೀಲಸಿದರು. ಎಸಿ ಪ್ರಭುರೆಡ್ಡಿ,ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಬಿಇಒ ಲಚಮಯ್ಯ, ಶಿವಯೋಗಿ ರುಸ್ತಂ;ಪೂರ, ಜಾತಿ ಸಮೀಕ್ಷೆ ಸಿಬ್ಬಂದಿ ಇದ್ದರು.