ನೋಡಿದೆ...ತೊಗರಿ ಖರೀದಿಗೆ ನೋಂದಣಿ

| Published : Jan 06 2024, 02:00 AM IST

ಸಾರಾಂಶ

ಕೇಂದ್ರ ಸರಕಾರದ ಬೆಲೆ ಸ್ಥಿರೀಕರಣ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ಜಿಲ್ಲೆಯ ಕನಿಷ್ಠ ಮಾರುಕಟ್ಟೆ ಸಂಗ್ರಹಣಾ ದರ ಅಥವಾ ಕ್ರಿಯಾತ್ಮಕ ಖಚಿತ ಸಂಗ್ರಹಣ ದರ, ಯಾವುದು ಹೆಚ್ಚು ಅದನ್ನು ಪರಿಗಣಿಸಿ ಖರೀದಿಸಲು ಘೋಷಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೇಂದ್ರ ಸರಕಾರದ ಬೆಲೆ ಸ್ಥಿರೀಕರಣ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ಜಿಲ್ಲೆಯ ಕನಿಷ್ಠ ಮಾರುಕಟ್ಟೆ ಸಂಗ್ರಹಣಾ ದರ ಅಥವಾ ಕ್ರಿಯಾತ್ಮಕ ಖಚಿತ ಸಂಗ್ರಹಣ ದರ, ಯಾವುದು ಹೆಚ್ಚು ಅದನ್ನು ಪರಿಗಣಿಸಿ ಖರೀದಿಸಲು ಘೋಷಿದೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಟಾಸ್ಕ್‌ಪೋಸ್ ಸಮಿತಿ ಅಧ್ಯಕ್ಷೆ ಜಾನಕಿ ಕೆ.ಎಂ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಪ್ರತಿ ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಲಂತೆ ಗರಿಷ್ಠ ಪ್ರಮಾಣ ನಿಗದಿಪಡಿಸಿದ್ದು, ರೈತರ ನೋಂದಣಿ ಕಾರ್ಯ ಹಾಗೂ ಖರೀದಿ ಕಾರ್ಯವನ್ನು 4 ಲಕ್ಷ ಮೆಟ್ರಿಕ್ ಟನ್‌ವರೆಗೆ ಸಂಗ್ರಹವಾಗುವರೆಗೆ ಕಾಲಾವಧಿ ನಿಗಪಡಿಸಿದೆ. ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಎಜನ್ಸಿಯಾಗಿ, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಸಂಸ್ಥೆಯನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಿದೆ. ಪ್ರತಿ ಏಕರೆಗೆ 5 ಕ್ವಿಂಟಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ ಕ್ವಿಂಟಲ್ ತೊಗರಿಯನ್ನು ಮಾತ್ರ ಖರೀದಿಸತಕ್ಕದ್ದು. ಖರೀದಿ ಕೇಂದ್ರಗಳಲ್ಲಿ ತೊಗರಿಯನ್ನು ಖರೀದಿಸುವ ಪೂರ್ವದಲ್ಲಿ ರೈತರಿಂದ ಆಧಾರ ಕಾರ್ಡ ಪ್ರತಿ ಕಡ್ಡಾಯವಾಗಿ ಪಡೆದು ಪರಿಶೀಲಿಸಿ ನೊಂದಣಿಸಿಕೊಳ್ಳಲಾಗುತ್ತಿದೆ. ರೈತರ ಹೆಸರಿನಲ್ಲಿ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಅಥಾವ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವು ಡಿಬಿಟಿ, ಎನ್ಇಎಫ್ಟಿ ಮೂಲಕ ಜಮಾ ಆಗುವಂತೆ ಪಾವತಿ ಮಾಡತಕ್ಕದ್ದು. ತೊಗರಿ ಖರೀದಿ ಕೇಂದ್ರದಲ್ಲಿ ರೈತರ ಹೆಸರಿನ ವರ್ತಕರು ತರುವ ತೊಗರಿಯನ್ನು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಲಾಗುತ್ತಿದೆ. ತೊಗರಿಯನ್ನು ಖರೀದಿ ಪೂರ್ವದಲ್ಲಿ ಖರೀದಿ ಕೇಂದ್ರಗಳಾದ ಪಿಎಸಿಎಸ್, ಟಿಎಪಿಸಿಎಂಎಸ್, ಎಫ್ಪಿಓ ಸಂಘಗಳು ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬಾಗಲಕೋಟೆ ಅವರೊಂದಿಗೆ ಒಪ್ಪಿಗೆ ಪತ್ರ ಮಾಡಿಕೊಂಡು ನಂತರ ಖರೀದಿಸಲು ಸೂಚಿಸಿದೆ.

ರೈತರು ಖರೀದಿ ಕೇಂದ್ರಗಳಾದ ರೇಣುಕಾ ರೈತ ಉತ್ಪಾದಕರ ಕಂಪನಿ, ಬಾಗಲಕೋಟೆ, ಪಿಕೆಪಿಎಸ್ ಹೀರೆ ಆದಾಪೂರ, ಗವಿಶ್ರೀ ರೈತ ಉತ್ಪಾದಕರ ಕಂಪನಿ, ಇಲಕಲ್ಲ, ನಂದರಾಜ ರೈತ ಉತ್ಪಾದಕರ ಕಂಪನಿ, ನಂದವಾಡಗಿ, ಆಶಾ ಕಿರಣ ರೈತ ಉತ್ಪಾದಕರ ಕಂಪನಿ ಲಿಮಿಟೆಡ್, ಹೂಲಗೇರಿ, ಪಿಕೆಪಿಎಸ್ ಕೆರೂರ, ಮಾತೃ ಸುರಕ್ಷಾ ರೈತ ಉತ್ಪಾದಕರ ಕಂಪನಿ ಬರಗಿ, ಸರ್ವಬಂಧು ರೈತ ಉತ್ಪಾದಕರ ಕಂಪನಿ, ಮುಧೋಳ ಹಾಗೂ ಕೃಷಿ ದಾಸೋಯಿ ರೈತ ಉತ್ಪಾದಕರ ಕಂಪನಿ ಕುಲಹಳ್ಳಿಗಳಲ್ಲಿ ರೈತರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬಾಗಲಕೋಟೆ (9449864458) ಇವರನ್ನು ಸಂಪರ್ಕಿಬಹುದಾಗಿದೆ ಎಂದು ತಿಳಿಸಿದರು.