ಎಚ್ಡಿಕೆ ಸಮ್ಮುಖದಲ್ಲಿ ದಿಶಾ ಸಭೆ ನಡೆಸಿದ ಜಿಲ್ಲಾಧಿಕಾರಿ ಕುಮಾರ್

| Published : Jul 04 2025, 11:46 PM IST

ಎಚ್ಡಿಕೆ ಸಮ್ಮುಖದಲ್ಲಿ ದಿಶಾ ಸಭೆ ನಡೆಸಿದ ಜಿಲ್ಲಾಧಿಕಾರಿ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಅಬ್ಬರ, ಗದ್ದಲ- ಗೊಂದಲ, ವಾಕ್ಸಮರ, ಅಧಿಕಾರಿಗಳಿಗೆ ತರಾಟೆ ಇದಾವುದೂ ಇಂದಿನ ಸಭೆಯಲ್ಲಿ ಕಂಡುಬರಲಿಲ್ಲ. ಕಾಂಗ್ರೆಸ್‌ನ ಆರು ಮಂದಿ ಶಾಸಕರ ಪೈಕಿ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಒಬ್ಬರು ಮಾತ್ರ ಹಾಜರಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಸಭೆ ಅಧಿಕಾರಿಗಳು ನಡೆಸಿದ ಸಭೆಯಂತೆ ಕಂಡುಬಂದಿತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆದರೂ ಇಡೀ ಸಭೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ

ಅವರು ನಿಯಂತ್ರಣದಲ್ಲಿಟ್ಟುಕೊಂಡು ಮುನ್ನಡೆಸಿದ್ದು ವಿಶೇಷವಾಗಿತ್ತು.

ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೋರಾಗಿ ಮಾತನಾಡಲಾಗದ ಕಾರಣ ಮೆಲುದನಿಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತಾ, ಇಲಾಖೆಗಳಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಪಡೆದುಕೊಂಡರು. ಸಭೆ ಸುಗಮವಾಗಿ ನಡೆಯುವುದಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕುಮಾರಸ್ವಾಮಿ ಅವರಿಗೆ ನೆರವಾದರು.

ಯಾವುದೇ ಅಬ್ಬರ, ಗದ್ದಲ- ಗೊಂದಲ, ವಾಕ್ಸಮರ, ಅಧಿಕಾರಿಗಳಿಗೆ ತರಾಟೆ ಇದಾವುದೂ ಇಂದಿನ ಸಭೆಯಲ್ಲಿ ಕಂಡುಬರಲಿಲ್ಲ. ಕಾಂಗ್ರೆಸ್‌ನ ಆರು ಮಂದಿ ಶಾಸಕರ ಪೈಕಿ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಒಬ್ಬರು ಮಾತ್ರ ಹಾಜರಿದ್ದರು. ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ವಿಧಾನಪರಿಷತ್ ಶಾಸಕ ಕೆ.ವಿವೇಕಾನಂದ, ದಿಶಾ ಸಮಿತಿ ಸದಸ್ಯ ಡಾ.ಕೆ.ಅನ್ನದಾನಿ ಜೆಡಿಎಸ್ ಪರವಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇಲಾಖೆಗಳ ಪಾಠವನ್ನು ಅಧಿಕಾರಿಗಳು ಒಪ್ಪಿಸುತ್ತಾ ಮುಂದೆ ಮುಂದೆ ಸಾಗಿದರು. ಅಧಿಕಾರಿಗಳ ಮಾತನ್ನು ಒಪ್ಪಿಕೊಂಡವರಂತೆ ಜನಪ್ರತಿನಿಧಿಗಳು ಶೀಘ್ರವಾಗಿ ಇಲಾಖೆಗಳ ಮಾಹಿತಿಯನ್ನು ಕೇಳಿ ಮುಗಿಸಿದರು. ಅಧಿಕಾರಿಗಳು ಯಾವುದೇ ಭಯ, ಆತಂಕವಿಲ್ಲದೆ ಮಾಹಿತಿಯನ್ನು ಪೂರ್ಣಗೊಳಿಸುತ್ತಿದ್ದರು. ಒಟ್ಟಾರೆ ಅಭಿವೃದ್ಧಿ ವಿಷಯ ದಿಶಾ ಸಭೆಯಲ್ಲಿ ನಗಣ್ಯವಾಗಿರುವಂತೆ ಕಂಡುಬಂದಿತು.