ಸಾರಾಂಶ
ರಂಗೂಪುರ ಶಿವಕುಮಾರ್‌ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಸುದ್ದಿ ಮಾಸುವ ಮುನ್ನವೇ ಮೂರು ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆಂಬ ಮಾಹಿತಿ ಜಿಲ್ಲಾಧಿಕಾರಿಗೆ ಸಿಕ್ಕಿದ ಹಿನ್ನೆಲೆ ತಾಲೂಕಿನಲ್ಲಿ ಮೂರು ಬಾಲ್ಯ ವಿವಾಹಕ್ಕೆ ತಡೆ ಬಿದ್ದಿದೆ.ಜಿಲ್ಲಾಧಿಕಾರಿ ಟಿ.ಸಿ. ಶಿಲ್ಪನಾಗ್ ಅವರ ಸೂಚನೆಯ ಬೆನ್ನಲ್ಲೆ ಎಚ್ಚೆತ್ತುಕೊಂಡ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸ್ವಯಂಸೇವಾ ಸಂಸ್ಥೆಗಳು ತಾಲೂಕಿನ ಅಣ್ಣೂರುಕೇರಿ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ ಮೂರು ಬಾಲ್ಯ ವಿವಾಹ ತಡೆಗೆ ಮುಂದಾದರು.ಅಣ್ಣೂರು ಕೇರಿ ಗ್ರಾಮದಲ್ಲಿ ಮೂರು ಬಾಲ್ಯಗಳು ನಡೆಯುತ್ತವೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಬಂದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ರವಾನಿಸಿ ವರದಿ ನೀಡುವಂತೆ ಸೂಚನೆ ನೀಡಿದ ಬಳಿಕ ಗ್ರಾಮದಲ್ಲಿ ಸ್ಥಳ ಮಹಜರು ನಡೆಸಲಾಗಿದೆ ಎಂದು ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ ಹೇಳಿದರು.
ಕನ್ನಡಪ್ರಭದೊಂದಿಗೆ ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಬಳಿಕ ಅಣ್ಣೂರು ಕೇರಿ ಮೂರು ಮನೆಗಳಿಗೆ ತೆರಳಿ ಸ್ಥಳ ಮಹಜರು ನಡೆಸಿ, ಬಾಲ್ಯ ವಿವಾಹ ಸಂಬಂಧ ವಧು, ವರರ ದಾಖಲಾತಿ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿ ಎಂದು ಸೂಚನೆ ನೀಡಲಾಗಿದೆ ಎಂದರು. ಬಾಲ್ಯ ವಿವಾಹಕ್ಕೆ ಮುಂದಾಗಿದ್ದ ಮೂರು ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಪೋಷಕರಿಗೆ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿದ್ದು, ಅಲ್ಲದೆ ಯಾವ ಕಾರಣಕ್ಕೂ ಮದುವೆ ವಯಸ್ಸು ಬರುವ ತನಕ ಮದುವೆ ಮಾಡಕೂಡದು ಎಂದು ಹೇಳಿದ್ದಾರೆ ಎಂದರು.ಬಾಲ್ಯ ವಿವಾಹಕ್ಕೆ ಮುಂದಾಗಿದ್ದ ಮಕ್ಕಳ ಶಾಲಾ ದಾಖಲಾತಿಯೊಂದಿಗೆ ಸೆ. 2 (ಇಂದು) ಮಂಗಳವಾರ ಚಾಮರಾಜನಗರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳು ಹಾಗೂ ಪೋಷಕರು ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಬಾಲ್ಯ ವಿವಾಹ ತಡೆಯಲು ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಶಿಲ್ಪ, ಮಕ್ಕಳ ಸಹಾಯವಾಣಿ ಕೇಂದ್ರ ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಸ್ತರಣಾಧಿಕಾರಿ ಸೋನಿಯಾ ಬೇಗಂ, ಮುಖ್ಯ ಶಿಕ್ಷಕರಾದ ಮುರಳೀಧರ್, ವಿ.ಚಿನ್ನಯ್ಯ, ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ ಸಂಯೋಜಕ ಜಿ.ಸಿ.ನಾರಾಯಣಸ್ವಾಮಿ ಭೇಟಿ ನೀಡಿದ್ದರು.ಕೋಟ್.....ಅಣ್ಣೂರು ಕೇರಿಯಲ್ಲಿ ಬಾಲ್ಯ ವಿವಾಹಕ್ಕೆ ಶಾಲೆ ಬಿಟ್ಟಿದ್ದ ಬಾಲಕಿಗೆ ವಿವಾಹಕ್ಕೆ ಕೆಲ ದಿನಗಳ ಹಿಂದೆಯೇ ಬಾಲಕಿಯ ಪೋಷಕರು ಸಿದ್ಧತೆ ನಡೆಸಿದ್ದರು. ಗ್ರಾಪಂನಿಂದಲೇ ಪೋಷಕರು ಮನವೊಲಿಸಿ ಶಾಲೆ ಬಿಟ್ಟಿದ್ದ ಬಾಲಕಿಯನ್ನು ಶಾಲೆ ಸೇರಿಸಿದ್ದೇವು. ಈಗ ಎರಡು ಬಾಲ್ಯ ವಿವಾಹಕ್ಕೆ ಸಿದ್ದತೆ ನಡೆಸಿದ್ದರು. ಅವರ ಮನವೊಲಿಸಲಾಗಿದೆ.
-ಜಿ.ಶಿಲ್ಪ, ಪಿಡಿಒ,ಅಣ್ಣೂರು ಕೇರಿ<>
೧ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿಯಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ ಪೋಷಕರನ್ನು ವಿವಿಧ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮನವೊಸಿದರು.1GPT1.jpg89.5 kB