ಜಿಲ್ಲಾ ಕಾಂಗ್ರೆಸ್ ನಿಂದ ಶಿವು ಮಾದಪ್ಪಗೆ ಶ್ರದ್ಧಾಂಜಲಿ ಸಭೆ

| Published : Mar 16 2025, 11:45 PM IST

ಜಿಲ್ಲಾ ಕಾಂಗ್ರೆಸ್ ನಿಂದ ಶಿವು ಮಾದಪ್ಪಗೆ ಶ್ರದ್ಧಾಂಜಲಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಅವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಮಡಿಕೇರಿ : ಡೈನಾಮಿಕ್ ಲೀಡರ್ ಎಂದೇ ಅಭಿಮಾನಿ ವಲಯದಲ್ಲಿ ಗುರುತಿಸಿಕೊಂಡಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಾಜಿ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ರವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ ನವರು ಮಾತನಾಡಿ ಶಿವುಮಾದಪ್ಪ ನವರ ವ್ಯಕ್ತಿತ್ವ ಅತ್ಯಂತ ಅಪರೂಪದ ವ್ಯಕ್ತಿತ್ವವಾಗಿದ್ದು ಕ್ಷಣಮಾತ್ರದಲ್ಲಿ ಜನರನ್ನು ಸೆಳೆಯುವ ವರ್ಣರಂಜಿತ ವ್ಯಕ್ತಿಯಾಗಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿಯಾಗಿ ನಿಭಾಯಿಸಿದ ಶಿವು ಮಾದಪ್ಪ ನವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಮಾತನಾಡಿ ಜನಪ್ರತಿನಿಧಿಯಾಗಿ,

ರಾಜಕಾರಣಿಯಾಗಿ, ಸಮಾಜ ಸೇವಕರಾಗಿ ಜಿಲ್ಲೆಯಲ್ಲಿ ಜನಾನುರಾಗಿ ನಾಯಕರಾಗಿ ಗುರುತಿಸಿಕೊಂಡ ಶಿವು ಮಾದಪ್ಪ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು.

ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ನವರು ಸ್ನೇಹಜೀವಿಯಾಗಿದ್ದ ಶಿವು ಮಾದಪ್ಪ ನವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಉಪಾಧ್ಯಕ್ಷರಾದ ಸುಜು ತಿಮ್ಮಯ್ಯ, ಕೆಪಿಸಿಸಿ ಸದಸ್ಯರಾದ ಬೇಕಲ್ ರಮಾನಾಥ್, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಹನೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ.ಶಶಿಧರ್, ಎಚ್.ಎ.ಹಂಸ, ಇಸ್ಮಾಯಿಲ್, ಪಟ್ಟಡ ರಂಜಿ ಪೂಣಚ್ಚ , ಮೀದೇರಿರ ನವೀನ್ ಸೇರಿದಂತೆ ಪ್ರಮುಖರು ಶಿವು ಮಾದಪ್ಪ ನವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು.

ಪ್ರಮುಖರಾದ ಕಟ್ರತನ ವೆಂಕಟೇಶ್, ಕೇಟೋಳಿ ಮೋಹನ್ ರಾಜ್, ಪ್ರಕಾಶ್ ಆಚಾರ್ಯ, ಬೊಳ್ಳಿಯಂಡ ಗಣೇಶ್, ಹೊಸೂರು ಸೂರಜ್, ವಸಂತ ಭಟ್, ಮಂಡಿರ ಸದಾ ಮುದ್ದ ಮುದ್ದಪ್ಪ, ಕಲೀಲ್ ಭಾಷ, ಕೆ.ಜೆ.ಪೀಟರ್, ಎಂ.ಎಂ.ಹನೀಫ್ , ಮುದ್ದುರಾಜ್, ಮೀನಾಜ್ ಪ್ರವೀಣ್, ಶಶಿ, ಫ್ಯಾನ್ಸಿ ಪಾರ್ವತಿ ಸೇರಿದಂತೆ ನೂರಾರು ಪಕ್ಷದ ಮುಖಂಡರು, ಕಾರ್ಯಕರ್ತರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.