ಸಾರಾಂಶ
ಅಳ್ವೆಕೋಡಿಯಲ್ಲಿ ಸಾಹಿತಿ ನಾರಾಯಣ ಯಾಜಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ಕನ್ನಡದ ಮನಸುಗಳು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮನವಿ ಮಾಡಿದರು.
ಭಟ್ಕಳ: ಡಿಸೆಂಬರ್ ೩೧ರಂದು ಶಿರಾಲಿಯ ಅಳ್ವೇಕೋಡಿ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ನಡೆಯಲಿರುವ ಭಟ್ಕಳ ತಾಲೂಕು ೧೧ನೇ ಸಾಹಿತ್ಯ ಸಮ್ಮೇಳನದ ಲಾಂಛನ ಮತ್ತು ಆಮಂತ್ರಣ ಪತ್ರಿಕೆಯನ್ನು ಮೀನುಗಾರಿಕಾ ಸಚಿವ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಂಕಾಳು ವೈದ್ಯ ಬಿಡುಗಡೆಗೊಳಿಸಿದರು.
ಅಳ್ವೆಕೋಡಿಯಲ್ಲಿ ಸಾಹಿತಿ ನಾರಾಯಣ ಯಾಜಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ಕನ್ನಡದ ಮನಸುಗಳು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಕೋಶಾಧ್ಯಕ್ಷ ಶ್ರೀಧರ ಶೇಟ್, ಗೌರವ ಕಾರ್ಯದರ್ಶಿ ಸಯ್ಯದ ಗೌಸ್ ಮೊಹಿಯೂದ್ದೀನ್, ಸಾಹಿತಿ ಡಾ. ಸಯ್ಯದ ಝಮೀರುಲ್ಲ ಷರೀಫ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ ಮುರ್ಡೆಶ್ವರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಚಿತ್ರಕಲಾ ಶಿಕ್ಷಕ ಸಂಜಯ ಗುಡಿಗಾರ, ಸರ್ಕಾರಿ ನೌಕರ ಸಂಘದ ರಾಜ್ಯ ಪ್ರತಿನಿದಿ ಕುಮಾರ ನಾಯ್ಕ ಉಪಸ್ಥಿತರಿದ್ದರು.ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ
ಕುಮಟಾ: ಇಲ್ಲಿನ ಕೃಷಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ತಾಲೂಕು ಕೃಷಿಕ ಸಮಾಜದ ಮುಂದಿನ ೫ ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನಾರಾಯಣ ಎಸ್. ಹೆಗಡೆ, ಉಪಾಧ್ಯಕ್ಷರಾಗಿ ಚಿದಾನಂದ ಗಣಪತಿ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪಕುಮಾರ ಹೆಗಡೆ, ಖಜಾಂಚಿಯಾಗಿ ಲಿಂಗಪ್ಪ ಎಸ್. ನಾಯ್ಕ, ಜಿಲ್ಲಾ ಪ್ರತಿನಿಧಿಯಾಗಿ ವಿವೇಕ ಜಾಲಿಸತ್ಗಿ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಪಾದ ಭಟ್ಟ, ರಾಮಚಂದ್ರ ದೇಸಾಯಿ, ಗಣಪತಿ ಬೊಮ್ಮ ಪಟಗಾರ, ರಾಮಚಂದ್ರ ವಿ. ಭಟ್, ರಾಜೀವ ಕುಪ್ಪಾ ಭಟ್, ಚಂದ್ರಶೇಖರ ಎನ್. ನಾಯ್ಕ, ಲೋಕೇಶ ಶಾನಭಾಗ, ತಿಮ್ಮಣ್ಣ ಗೋಪಾಲ ಭಟ್, ವಿನಾಯಕ ಗೋವಿಂದ ಹೆಗಡೆ, ಪರಮೇಶ್ವರ ಮಾಸ್ತಿ ನಾಯ್ಕ ಆಯ್ಕೆಯಾಗಿದ್ದಾರೆ.ಸರ್ಕಾರದ ಯೋಜನೆಗಳ ಲಾಭ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಪ್ರತಿಯೊಬ್ಬ ಅರ್ಹರಿಗೂ ಸಿಗುವಂತೆ ಕೃಷಿಕ ಸಮಾಜ ಕೆಲಸ ಮಾಡಲಿದೆ ಎಂದು ನೂತನ ಅಧ್ಯಕ್ಷ ನಾರಾಯಣ ಹೆಗಡೆ ಘೋಷಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.