ಕಾಮನ್‌ ಪುಟಕ್ಕೆಮಾನವ ಮೈತ್ರಿ ಸಂಪದ ಸಮ್ಮೇಳನದ ಪೋಸ್ಟರ್‌ ಬಿಡುಗಡೆ

| Published : Mar 27 2025, 01:01 AM IST

ಸಾರಾಂಶ

ಕೇವಲ ಒಂದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗದೇ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದೆ.

ಫೋಟೋ 26 ಎಂವೈಎಸ್‌35ಕನ್ನಡಪ್ರಭ ವಾರ್ತೆ ಮೈಸೂರುನಂಜನಗೂಡಿನ ತಥಾಗತ ಬುದ್ಧ ವಿಹಾರ, ವಿಶ್ವಮೈತ್ರಿ ಬುದ್ಧ ವಿಹಾರ ಹಾಗೂ ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಏ. 5 ಮತ್ತು 6 ರಂದು ಆಯೋಜಿಸಿರುವ ಮಾನವ ಮೈತ್ರಿ ಸಂಪದ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್‌ ಪುರುಷೋತ್ತಮ್ ಪೋಸ್ಟರ್‌ ಬಿಡುಗಡೆಗೊಳಿಸಿದರು. ಇದೊಂದು ಅರ್ಥಪೂರ್ಣ ಸಮ್ಮೇಳನ. ಕೇವಲ ಒಂದು ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗದೇ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಭಾರತವನ್ನು ಬೌದ್ಧ ರಾಷ್ಟ್ರವನ್ನಾಗಿಸಬೇಕು ಎಂಬ ಆಶಯವಿದೆ ಎಂದರು.ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಇನ್ನು ಸಮ್ಮೇಳನದಲ್ಲಿ ಪ್ರಗತಿಪರರು, ವಿಚಾರ ವಾದಿಗಳು, ವಿದ್ಯಾರ್ಥಿಗಳು ಮೊದಲಾದವರು ಪಾಲ್ಗೊಳ್ಳುವರು. ಬೌದ್ಧ ಧರ್ಮದ ಜ್ಞಾನದ ಅರಿವು ಮೂಡಿಸುವ ಯತ್ನ ಇಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.ಗಾಂಧಿನಗರ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಹುಲಿ ಹುಲಿಯನ್ನು, ಸಿಂಹ ಸಿಂಹವನ್ನು ಕೊಲ್ಲುವುದಿಲ್ಲ. ಆದರೆ ಮನುಷ್ಯ ಇದಕ್ಕೆ ಅಪವಾದ. ಮನುಷ್ಯ ಮನುಷ್ಯರ ನಡುವೆ ದ್ವೇಷ ಮೊದಲಾದವು ಇದೆ. ಹೀಗಾಗಿ ಮಾನವ ಮೈತ್ರಿ ಅಗತ್ಯ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಆಂಧ್ರದ ಓರ್ವ ಪ್ರಭಾವಿಯೊಬ್ಬರ ಮಾತಿನಂತೆ ದೇಶ ಕೇವಲ ಬೆಟ್ಟಗುಡ್ಡ, ಭೌಗೋಳಿಕ ಮಾತ್ರವಲ್ಲ. ಮನುಷ್ಯನೂ ಮುಖ್ಯ. ಆದರೆ ನಾವು ಮನುಷ್ಯತ್ವ, ಮಾನವೀಯತೆ ನೆಲೆಬಿಟ್ಟು ಯೋಚಿಸುತ್ತಿದ್ದೇವೆ. ಹೀಗಾಗಿ ಇದಕ್ಕೆ ನೆಲೆ ತಂದುಕೊಟ್ಟವರು ಭಗವಾನ್ ಬುದ್ಧ ಆಗಿದ್ದಾರೆ ಎಂದರು.ಈ ವೇಳೆ ಅಹಿಂದ ಜವರಪ್ಪ, ,ಸಿ. ಹರಕುಮಾರ್, ಶಿವಶಂಕರ್ ಮೊದಲಾದವರು ಇದ್ದರು.