ಸುಂಟಿಕೊಪ್ಪದಲ್ಲಿ 29 ಹಾಗೂ 30ರಂದು ನಡೆಯಲಿರುವ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆಯಿತು.
ಕನ್ನಡಪ್ರಭವಾರ್ತೆ ಮಡಿಕೇರಿ
ಸುಂಟಿಕೊಪ್ಪದಲ್ಲಿ 29 ಹಾಗೂ 30ರಂದು ನಡೆಯಲಿರುವ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆಯಿತು.ಕಸಾಪ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನದ ಲಾಂಛನ ವನ್ನು ಜಿಲ್ಲಾ ಕಸಾಪ ದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಬಿಡುಗಡೆಗೊಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್, ಕಸಾಪ ಪ್ರ.ಕಾರ್ಯದರ್ಶಿಗಳಾದ ಮುನಿರ್ ಅಹ್ಮದ್, ಡಿ.ಎಂ.ರೇವತಿ, ಕೋಶಾಧಿಕಾರಿ ಎಚ್.ಎಸ್.ಸಂಪತ್ ಕುಮಾರ್ , ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೆ.ಎಸ್.ನಾಗೇಶ್, ಕಸಾಪ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್, ಟಿ.ಜಿ.ಪ್ರೇಮಕುಮಾರ್, ಮನು ಅಚ್ಚಮ್ಮಯ್ಯ ಇತರರು ಇದ್ದರು.---------------------------------
ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಮೊದಲ ಸಂಕಲ್ಪ ಅಭಿಮಾನೋತ್ಸವ: ಬಸವರಾಜ ಬೊಮ್ಮಾಯಿಕನ್ನಡಪ್ರಭ ವಾರ್ತೆ ಮಡಿಕೇರಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಮೊದಲನೆಯ ದೊಡ್ಡ ಜನರ ಸಂಕಲ್ಪ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ. ಅದು ನಮ್ಮ ಚುನಾವಣೆಯ ಪ್ರಾರಂಭ ಮತ್ತು ಕಾಂಗ್ರೆಸ್‌ನ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕೊಡಗಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನೂ ಗೆಲ್ಲುವಂತ ಶಕ್ತಿ ಈ ಚುನಾವಣೆ ನೀಡಿದೆ. ಅವರ ಕನಸಿನ ವಿಕಸಿತ ಭಾರತದ ಸಂಕಲ್ಪಕ್ಕೆ ಶಕ್ತಿ ನೀಡುವ ಸಂದೇಶ ಈ ಚುನಾವಣೆಯಲ್ಲಿದೆ ಎಂದು ಹೇಳಿದರು.ಕರ್ನಾಟಕದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಉತ್ತಮವಾದ ವಾತಾವರಣ ಇತ್ತು. ನಮ್ಮ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದರು. ಆದರೆ ಕೊನೆಯ ಎರಡು ದಿನ ಸಿಎಂ ಸಿದ್ದರಾಮಯ್ಯ ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದು ಪ್ರಜಾಪಭುತ್ವಕ್ಕೆ ಒಪ್ಪುವಂತಹ ಕೆಲಸ ಅಲ್ಲ ಎಂದು ಹೇಳಿದರು.