24 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

| Published : Sep 05 2024, 12:31 AM IST

24 ಶಿಕ್ಷಕರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತರಾಸು ರಂಗಮಂದಿರದಲ್ಲಿ ನಡೆವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಪ್ರಶಸ್ತಿ ಪ್ರಧಾನ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಒಟ್ಟು 24 ಶಿಕ್ಷಕರಿಗೆ ಗುರುವಾರ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜಿನಾಥ್‌ ತಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಗರದ ತರಾಸು ರಂಗಮಂದಿರದಲ್ಲಿ ನಡೆವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದ ಉತ್ತಮ ಶಿಕ್ಷಕರ ಪ್ರಸ್ತಾವನೆಗಳನ್ನು ಪರಿಶೀಲನೆ ಮಾಡಿದ ಜಿಲ್ಲಾ ಆಯ್ಕೆ ಸಮಿತಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರನ್ನು 2024-25ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ವಿಶೇಷ ಶಿಕ್ಷಕ ಪ್ರಶಸ್ತಿ ನೀಡಲು ಆಯ್ಕೆ ಮಾಡಿದೆ. ಪ್ರೌಢಶಾಲಾ ವಿಭಾಗ-6, ಹಿರಿಯ ಪ್ರಾಥಮಿಕ ಶಾಲೆ ವಿಭಾಗ-6, ಕಿರಿಯ ಪ್ರಾಥಮಿಕ ಶಾಲೆ ವಿಭಾಗ-6 ಹಾಗೂ ವಿಶೇಷ ಪ್ರಶಸ್ತಿ ವಿಭಾಗ-ಸೇರಿದಂತೆ ಒಟ್ಟು 24 ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

*ಜಿಲ್ಲಾಮಟ್ಟದ ಉತ್ತಮ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ. ಪ್ರೌಢಶಾಲಾ ವಿಭಾಗ:

ಚಿತ್ರದುರ್ಗ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಹ ಶಿಕ್ಷಕ ಎಚ್.ಕೆ.ವಿಜಯ್ ಕುಮಾರ್, ಚಳ್ಳಕೆರೆ ತಾಲೂಕು ಮ್ಯೆಲನಹಳ್ಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎನ್.ರಾಧಮಣಿ, ಹೊಸದುರ್ಗ ತಾಲೂಕು ದೇವಪುರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಹ ಶಿಕ್ಷಕ ಧನಂಜಯ, ಹೊಳಲ್ಕೆರೆ ತಾಲೂಕು ರಂಗಾಪುರ ಸ್ವಾತಂತ್ರ್ಯ ಜ್ಯೋತಿ ಪ್ರೌಢಶಾಲೆಯ ಸಹ ಶಿಕ್ಷಕ ಎ.ಆರ್.ಪ್ರವೀಣ್ ಕುಮಾರ್, ಚಳ್ಳಕೆರೆ ತಾಲೂಕು ಆದರ್ಶ ವಿದ್ಯಾಲಯ ಸಹ ಶಿಕ್ಷಕ ಜಿ.ಎಂ.ವೀರಭದ್ರಪ್ಪ, ಮೊಳಕಾಲ್ಮುರು ಶ್ರೀ ಶ್ರೀನಿವಾಸ ನಾಯಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಡಿ.ವಿ.ಕೃಷ್ಣಮೂರ್ತಿ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಚಿತ್ರದುರ್ಗ ತಾಲೂಕು ಹುಲ್ಲೇಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಜಿ.ಟಿ.ಹನುಮಂತಪ್ಪ, ಹಿರಿಯೂರು ತಾಲೂಕು ಕಾಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಿ.ಆರ್.ಶ್ರೀನಿವಾಸ, ಚಳ್ಳಕೆರೆ ತಾಲೂಕು ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಡಿ.ಪುಷ್ಪಲತ, ಮೊಳಕಾಲ್ಮುರು ತಾಲೂಕು ಮೊಗಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಈಶ್ವರಪ್ಪ, ಚಳ್ಳಕೆರೆ ತಾಲೂಕು ಹರವಿಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಚ್. ಸುರೇಶ್, ಹೊಸದುರ್ಗ ತಾಲೂಕು ಹೇರೂರು ಸರ್ಕಾರಿ ಸಹ ಶಿಕ್ಷಕಿ ಎ.ರೂಪ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಹೊಳಲ್ಕೆರೆ ತಾಲೂಕು ಗುಂಡೇರಿ ಸರ್ಕಾರಿ ಉರ್ದು ಕಿರಿಯ ಸಹ ಶಿಕ್ಷಕಿ ಶಕೀಲಾ ಜಾನ್, ಹಿರಿಯೂರು ತಾಲೂಕು ಕೆ.ಎನ್.ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಚ್.ಪಿ.ಸುನೀಲ್ ಕುಮಾರ್, ಚಿತ್ರದುರ್ಗ ತಾಲೂಕು ಹಲಗಪ್ಪನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಸ್.ಸುರೇಶ್, ಹೊಳಲ್ಕೆರೆ ತಾಲೂಕು ಬೋವಿಹಟ್ಟಿ ಅರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಯು.ಮಹೇಶ್, ಮೊಳಕಾಲ್ಮುರು ತಾಲೂಕು ಬಿಲಾಲ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಮ್.ಇಬ್ರಾಹಿಂ, ಚಳ್ಳಕೆರೆ ತಾಲೂಕು ಗೋಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಂ.ಮಲ್ಲಿಕಾರ್ಜುನಪ್ಪ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು:

ಚಿತ್ರದುರ್ಗ ತಾಲೂಕು ಭರಮಸಾಗರ ಶ್ರೀ ಬಾಪೂಜಿ ಪ್ರೌಢಶಾಲೆ ಸಹ ಶಿಕ್ಷಕ ಟಿ.ಸಿ.ಗೊಂಚಿಗಾರ್, ಹೊಸದುರ್ಗ ತಾಲೂಕು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಗ್ರೇಡ್-1 ವಿ.ಮಹಂತಪ್ಪ, ಚಿತ್ರದುರ್ಗ ತಾಲೂಕು ಕುರುಬರಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಉಮರ್ ಭಾಷ, ಯಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಿ.ಎನ್.ಮಹೇಶ್, ಮೊಳಕಾಲ್ಮುರು ತಾಲೂಕು ಕೆರೆಕೊಂಡಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಎಚ್.ಓಂಕಾರಮ್ಮ, ಚಳ್ಳಕೆರೆ ತಾಲೂಕು ಬುಕ್ಕೋರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಬಸವನಗೌಡ ಅವರು 2024-25ನೇ ಸಾಲಿನ ಜಿಲ್ಲಾಮಟ್ಟದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಂಜುನಾಥ್‌ ತಿಳಿಸಿದ್ದಾರೆ.