ಸಾರಾಂಶ
. ಸಿರಿ ಎಂದರೆ ಅನೇಕ ಉತ್ತಮ ಗುಣಗಳಿರುವ ಒಂದು ಹೆಸರು. ಸಿರಿಧಾನ್ಯವೂ ಕೂಡ ಎಲ್ಲಾ ರೀತಿಯ ಗುಣಗಳನ್ನು ಹೊಂದಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರವು ಸಿರಿಧಾನ್ಯಕ್ಕೆ ಹೆಚ್ಚಿನ ಪ್ರಚಾರ ಸಿಗುವಂತೆ ಮಾಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.ನಗರದ ವಸ್ತುಪ್ರದರ್ಶನದ ಆವರಣದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಉತ್ಪಾದಕರ, ಮಾರುಕಟ್ಟೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಕ್ಕಿದಾಗ ಮಾತ್ರ ಉತ್ತಮ ಫಲ ದೊರೆಯುತ್ತದೆ ಎಂದರು.ಸಿರಿ ಎಂದರೆ ಲಕ್ಷ್ಮೀ, ಐಶ್ವರ್ಯ ಹಾಗೂ ಶ್ರೀಮಂತಿಕೆಯ ಸಂಕೇತ. ನಾವು ಪ್ರತಿನಿತ್ಯ ಸೇವಿಸುವ ಆಹಾರಕ್ಕಿಂತ ಹೆಚ್ಚಿನ ಪೌಷ್ಠಿಕಾಂಶವನ್ನು ಸಮೃದ್ಧವಾಗಿ ಈ ಸಿರಿಧಾನ್ಯಗಳು ಹೊಂದಿದೆ. ಸಿರಿ ಎಂದರೆ ಅನೇಕ ಉತ್ತಮ ಗುಣಗಳಿರುವ ಒಂದು ಹೆಸರು. ಸಿರಿಧಾನ್ಯವೂ ಕೂಡ ಎಲ್ಲಾ ರೀತಿಯ ಗುಣಗಳನ್ನು ಹೊಂದಿದೆ. ಪ್ರಸ್ತುತ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗಿದೆ. ಸಿರಿಧಾನ್ಯಗಳನ್ನು ಬೆಳೆಯಲು ಕೃಷಿ ಇಲಾಖೆಯಿಂದ ತರಬೇತಿ ನಿಡಲಾಗುತ್ತಿದೆ. ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಲು ಅತ್ಯಾಧುನಿಕ ಯಂತ್ರಗಳು ಬಂದಿದೆ ಎಂದು ಅವರು ಹೇಳಿದರು.ಇಂದಿನ ದಿನಾಮಾನದಲ್ಲಿ ಅತಿ ಹೆಚ್ಚು ಖನಿಜಗಳು, ಪೌಷ್ಠಿಕಾಂಶಗಳು, ಕ್ಯಾಲ್ಸಿಯಂ ಸಿಗುವುದು ಸಿರಿಧಾನ್ಯಗಳಲ್ಲಿ ಮಾತ್ರ. ಸಿರಿಧಾನ್ಯಗಳು ಇತ್ತೀಚಿನ ಬೆಳೆಗಳಲ್ಲ. ಇವುಗಳು ಸಾಂಪ್ರಾದಾಯಿಕ ಬೆಳೆಗಳು ಎಂದರು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕುವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಇಂದು ನಮ್ಮ ಜೀವನದಲ್ಲಿರುವ ನಾಲ್ಕು ಹೀರೊಗಳೆಂದರೆ ಕಿಸಾನ್, ಜವಾನ್, ಕಿಸಾನ್, ಶಿಕ್ಷಕ ಮತ್ತು ವೈದ್ಯ. ಮೊದಲನೆ ಸ್ಥಾನದಲ್ಲಿರುವ ರೈತ ಅನ್ನವನ್ನು ನೀಡದಿದ್ದರೆ ಯಾರೂ ಕೆಲಸ ಮಾಡಲು ಸಾಧ್ಯವಾಗಲ್ಲ. ಜಗತ್ತಿನಲ್ಲಿ ಇಂದು ಯಾವುದೇ ವಸ್ತುಗಳನ್ನು ನಕಲು ಮಾಡಬಹುದು. ಆದರೆ, ಅನ್ನ ಹಾಗೂ ರಕ್ತವನ್ನು ನಕಲು ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.ರಾಜ್ಯ ಸರ್ಕಾರವು ಸಿರಿಧಾನ್ಯಕ್ಕೆ ಸಬ್ಸಿಡಿ ನೀಡುತ್ತಿದೆ. ಹೊಲದಲ್ಲಿ ಕೆಲಸ ಮಾಡುವ ರೈತರು ಭಯವನ್ನು ತೊರೆದು ಕೆಲಸ ಮಾಡುತ್ತಾರೆ. ಹೀಗಾಗಿ ಅನ್ನ ಕೊಡುವ ರೈತರನ್ನು ಮುಂಚೂಣಿಗೆ ತರಬೇಕು. ಆ ದೃಷ್ಠಿಯಿಂದ ಕೃಷಿಯನ್ನು ಕೈಗಾರಿಕರಣ ಮಾಡಬೇಕು. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ಸಿಗುತ್ತದೆ. ಇಂದು ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗುತ್ತಿಲ್ಲ. ಅದು ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಹೇಳಿದರು.ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ವಸ್ತುಪ್ರದರ್ಶನದ ಪ್ರಾಧಿಕಾರದ ಸಿಇಒ ರುದ್ರೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್, ಉಪಾಧ್ಯಕ್ಷ ನಾಗರಾಜು, ಅಣ್ಣೇಗೌಡ, ಸಫಿವುಲ್ಲಾ, ಕಾಳೇಗೌಡ, ರಾಜ್ಯ ರೈತ ಸಂಘದ ಬನ್ನೂರು ನಾರಾಯಣ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಎಲ್.ಟಿ. ವೆಂಕಟೇಶ್ ಮೊದಲಾದವರು ಇದ್ದರು.----ಬಾಕ್ಸ್...ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಫೋಟೋ- 9ಎಂವೈಎಸ್13
----ಮೈಸೂರು ಅರಮನೆ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆಯನ್ನು ಆಯೋಜಿಸಲಾಗಿತ್ತು. ಈ ನಡಿಗೆಗೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಚಾಲನೆ ನೀಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು.