ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರಬಂಧ, ಚರ್ಚಾ ಸ್ಪರ್ಧೆ

| Published : Aug 07 2024, 01:02 AM IST

ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರಬಂಧ, ಚರ್ಚಾ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಶಾಲಾ ಕಾಲೇಜುಗಳ ಪಠ್ಯ ವಿಷಯಗಳಲ್ಲಿ ‘ಸಹಕಾರ’ ವಿಷಯ ಅಳವಡಿಕೆ’ ಬಗ್ಗೆ ಪ್ರಬಂಧ ಸ್ಪರ್ಧೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಮಾಹಿತಿ ತಂತ್ರಜ್ಞಾನ ಬಳಕೆ ಮತ್ತು ತಾಂತ್ರಿಕತೆ ಅಳವಡಿಕೆಯಿಂದ ಮಾತ್ರವೇ ಸಹಕಾರಿ ಚಳುವಳಿ ಬಲ್ಯಾಡ್ಯಗೊಳ್ಳಬಲ್ಲದು’ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚರ್ಚಾ ಸ್ಪರ್ಧೆ ಕಾಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ. ರವಿ ಬಸಪ್ಪ ವಹಿಸಿದ್ದರು. ಚರ್ಚಾ ಸ್ಪರ್ಧೆ ತೀರ್ಪುಗಾರರಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶೈಲಜಾ, ಯೂನಿಯನ್ ನಿರ್ದೇಶಕ ಕೆ.ಎಂ. ತಮ್ಮಯ್ಯ, ಕೆ.ಐ.ಸಿ.ಎಂ.ನ ಪ್ರಾಂಶುಪಾಲ ಡಾ. ಆರ್,ಎಸ್, ರೇಣುಕಾ ಹಾಗೂ ಪ್ರಬಂಧ ಮೌಲ್ಯಮಾಪಕರಾಗಿ ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲ ಎಂ.ಎ. ಶ್ಯಾಮಲಾ ನಿರ್ವಹಿಸಿದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ. ಮಾದಯ್ಯ ಇದ್ದರು. ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶುದ್ಧ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪ್ರಬಂಧ ಸ್ಪರ್ಧೆ ಫಲಿತಾಂಶ:

ನೇತ್ರ ಎಚ್.ಎಸ್. ಮೂರ್ನಾಡು ಸರ್ಕಾರಿ ಪ್ರೌಢಶಾಲೆ(ಪ್ರ), ಪ್ರೇರಣ ಎಂ.ಎನ್.ಸಂತ ಜೋಸೆಫರ ಪ್ರೌಢಶಾಲೆ, ಮಡಿಕೇರಿ(ದ್ವಿ), ಕೃತಿಕ ಎ.ಬಿ..ಜ್ಞಾನಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು(ತೃ), ಮೊಹಮ್ಮದ್ ಉಮರ್ ಸಾದ್,ಮೌಲಾನಾ ಆಜಾದ್ ಮಾದರಿ ಶಾಲೆ, ಕುಶಾಲನಗರ ಸಮಾದಾನಕರ ಬಹುಮಾನ ಪಡೆದರು.

ಚರ್ಚಾ ಸ್ಪರ್ಧೆ ಫಲಿತಾಂಶ:

ಎಚ್.ಎ.ವಿವೇಕಾನಂದ ಪದವಿಪೂರ್ವ ಕಾಲೇಜು, ಕುಶಾಲನಗರ (ಪ್ರ), ಅದ್ವಿಕ,ಲಯನ್ಸ್ ಪದವಿಪೂರ್ವ ಕಾಲೇಜು, ಗೋಣಿಕೊಪ್ಪ (ದ್ವಿ), ಬನಿತ್ ಬೋಜಣ್ಣ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ಮಡಿಕೇರಿ(ತೃ) ಹಾಗೂ ವಿಪಿನ್ ಎ. ಕಾವೇರಿ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಸಮಾದಾನಕರ ಬಹುಮಾನ ಗಳಿಸಿದರು.