ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮೇ ೧ ರಿಂದ ೩ ರ ವರೆಗೆ ನಡೆಯುವ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬ್ಬಡ್ಡಿ ಜಾತ್ರೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಕೆ.ಎಸ್. ವಿನಯ್‌ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗರೆ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮೇ ೧ ರಿಂದ ೩ ರ ವರೆಗೆ ನಡೆಯುವ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬ್ಬಡ್ಡಿ ಜಾತ್ರೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಕೆ.ಎಸ್. ವಿನಯ್‌ಕುಮಾರ್ ತಿಳಿಸಿದರು. ಪಟ್ಟಣದ ರಾಜೀವ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಜಿ. ಪರಮೇಶ್ವರ ಯುವ ಪಡೆ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದಲ್ಲಿ ಕೊರಟಗೆರೆ ಪಟ್ಟಣದಲ್ಲಿ ಮೂರು ದಿನಗಳ ಕಾಲ ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಹೊನ್ನಲು ಬೆಳಕಿನ ಕಬಡ್ಡಿ ಪಂದ್ಯಗಳನ್ನು ನಡೆಸಲಾಗುವುದು. ಈ ಪಂದ್ಯಾವಳಿಗಳಿಗೆ ಪುರುಷರ ೧೬ ತಂಡಗಳು ಮತ್ತು ಮಹಿಳೆಯರ ೬ ತಂಡಗಳು ಭಾಗವಹಿಸಲಿವೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ ಮಾತನಾಡಿ ಈ ಕಬಡ್ಡಿ ಪಂದ್ಯಾವಳಿಗಳಲ್ಲಿ ವಿಜೇತರಿಗೆ ಮೊದಲ ಬಹುಮಾನ ೧ ಲಕ್ಷ, ದ್ವಿತೀಯ ೭೫ ಸಾವಿರ, ತೃತೀಯ ೫೦ ಸಾವಿರ, ನಾಲ್ಕನೇ ೨೫ ಸಾವಿರ ಬಹುಮಾನಗಳನ್ನು ಅದೇ ರೀತಿ ಮಹಿಳೆಯರಿಗೆ 1-4 ವರೆಗೆ ೪೦ ಸಾವಿರ, ೩೦ ಸಾವಿರ, ೨೦ ಸಾವಿರ, ೧೦ ಸಾವಿರ ಬಹುಮಾನಗಳನ್ನು ಪ್ರಯೋಜಿಸಲಾಗಿದೆ ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ ೩ ದಿನಗಳ ಕಾಲ ಊಟ ಮತ್ತು ತಿಂಡಿ ವ್ಯವಸ್ಥೆ ಇರುತ್ತದೆ, ಪಂದ್ಯಾವಳಿಗಳು ಹೊನಲು ಬೆಳಕಿನ ಪಂದ್ಯಗಳಾಗಿದ್ದು ಕಬಡ್ಡಿ ಜಾತ್ರೆಗೆ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ಬರುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ, ಆಯೋಜಕ ಅರವಿಂದ್, ಮಹಾಲಿಂಗಪ್ಪ, ವಾಲೆಚಂದ್ರಯ್ಯ, ಕುಮಾರ್, ವೆಂಕಟೇಶ್, ಎಲ್.ರಾಜಣ್ಣ, ಜಯಮ್ಮ, ಕವಿತಮ್ಮ, ಓಬಳರಾಜು, ರುದ್ರಪ್ರಸಾದ್, ಕೆ.ವಿ. ಮಜುನಾಥ್, ಕಾರ್ ಮಹೇಶ್, ನಾಸೀರ್, ಮುನ್ನಾಭಾಯ್, ಜಮೀರ್, ಜಯರಾಮ್, ಸುರೇಶ್, ಗೊಂದಿಹಳ್ಳಿ ರಂಗರಾಜು, ಆರಾದ್ಯ, ಸುನಿಲ್, ಆಟೋಕುಮಾರ್, ಅರವಿಂದ್, ಕೆಎಲ್‌ಎಂ.ಮಂಜು, ವೆಂಕಟರಾಜು, ಗೋಪಿನಾಥ್ ಮತ್ತಿತರರು ಇದ್ದರು.