ಸಾರಾಂಶ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಹಯೋಗದಲ್ಲಿ ಇದೇ ಜು.27 ರಂದು ಲಿಂಗಸುಗೂರಿನ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಹಾಗೂ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಹಯೋಗದಲ್ಲಿ ಇದೇ ಜು.27 ರಂದು ಲಿಂಗಸುಗೂರಿನ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ ಲಿಂಗಸುಗೂರು ಪಟ್ಟಣದಲ್ಲಿ ವೇದಿಕೆ ತನಕ ಮೆರವಣಿಗೆ ಜರುಗಲಿದೆ. ನಂತರ ಜರುಗಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದು, ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಚಿವ ಎನ್.ಎಸ್.ಬೋಸರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡಲಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಸಂಪಾದಕ ಬಿ.ಎಂ.ಹನೀಫ್ ಅತಿಥಿ ಉಪನ್ಯಾಸ ನೀಡಲಿದ್ದು, ಜಿಲ್ಲೆ ಸಂಸದರು,ಶಾಸಕರು, ಎಂಎಲ್ಸಿಗಳು, ವಿವಿಧ ನಿಗಮ ಮಂಡಳಿಗಳ,ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಡಿಸಿ,ಸಿಇಒ,ಎಸ್ಪಿ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದರು.ವಾರ್ಷಿಕ ಪ್ರಶಸ್ತಿ: ಪ್ರಸಕ್ತ ಸಾಲಿನ ವಾರ್ಷಿಕ ಪ್ರಶಸ್ತಿಯಲ್ಲಿ ಇಬ್ಬರಿಗೆ ಜೀವಮಾನ ಸಾಧನೆ ಉಳಿದಂತೆ 10 ಜನ ಪತ್ರಕರ್ತರು, ಒಬ್ಬ ಪತ್ರಿಕಾ ವಿತರಕ ಸೇರಿ ಒಟ್ಟು 11 ಜನರಿಗೆ ಹಲವರು ನೀಡಿದ ದೇಣಿಗೆಯ ಸ್ಮರಣಾರ್ಥ ಕೊಡುವ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಹಿರಿಯ ಪತ್ರಕರ್ತರಾದ ಭೀಮರಾಯ ಹದ್ದಿನಾಳ ಹಾಗೂ ಎನ್.ಬಸವರಾಜ ಅವರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನುನೀಡುತ್ತಿದ್ದು, ವರದಿಗಾರ ರಾದ ವಿಶ್ವನಾಥ ಹೂಗಾರ, ನೀಲಕಂಠಸ್ವಾಮಿ, ಎಚ್.ವೀರನಗೌಡ, ಅಮರೇಶ ಚಿಲ್ಕರಾಗಿ, ನವೀನ್ ಕುಮಾರ, ಅಮರೇಶ ಸಾಲಿಮಠ, ಸುನೀಲ ಕುಮಾರ, ರಾಘವೇಂದ್ರ, ಸಿರವಾರ, ಬಿ.ಮಲ್ಲಪ್ಪ, ಶಶಿಧರ ಕಂಚಿಮಠ ಮತ್ತು ಪತ್ರಿಕಾ ವಿತರಕ ವೀರೇಶ ಎಂ.ಕರಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸ ಲಾಗುವುದು ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಯ್ಯಸ್ವಾಮಿ ಕುಕುನೂರು ಇದ್ದರು.