ಸಾರಾಂಶ
ಉಡುಪಿಯ ಪೂರ್ಣಪ್ರಜ್ಞ ಸೆಂಟರ್ ಫಾರ್ ಪೊಪ್ಯೂಲರೈಝೇಷನ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕೇಂದ್ರದ ಅಡಿಯಲ್ಲಿ ಇಲ್ಲಿನ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಸ್ಪರ್ಧೆ - ೨೦೨೫’ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪೂರ್ಣಪ್ರಜ್ಞ ಸೆಂಟರ್ ಫಾರ್ ಪೊಪ್ಯೂಲರೈಝೇಷನ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕೇಂದ್ರದ ಅಡಿಯಲ್ಲಿ ಇಲ್ಲಿನ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಜಿಲ್ಲಾ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಸ್ಪರ್ಧೆ - ೨೦೨೫’ ನಡೆಯಿತು.ಜಿಲ್ಲೆಯ ವಿವಿಧ ಶಾಲೆಗಳ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಚಿಂತನೆ ಮತ್ತು ಶೈಕ್ಷಣಿಕ ಉತ್ಸಾಹವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗಿತ್ತು.ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಆಯ್ಕೆಯಾದ ೩೦ ಶಾಲೆಗಳಿಂದದ ೧೧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಪ್ರಶ್ನೋತ್ತರ ಸ್ಪರ್ಧೆಯನ್ನು ಲಿಖಿತ ಪರೀಕ್ಷೆ ಮತ್ತು ರಾಪಿಡ್-ಫೈರ್ ಸುತ್ತುಗಳು ಒಳಗೊಂಡಿದ್ದವು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ 10 ಸಾವಿರ ರು, ನಗದು : ಶಿವಾನಿ ಆರ್. ಮತ್ತು ದಿಯಾ (ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್), ದ್ವಿತೀಯ ಸ್ಥಾನ 7 ಸಾವಿರ ರು. ನಗದು : ಪೂರ್ವಿ ಶೆಟ್ಟಿ, ಪೂರ್ವಿಕಾ ವಿ. ಭಟ್, ಗೌರವ್ ಕಾಮತ್ (ಒಳಕಾಡು ಸರ್ಕಾರಿ ಸಂಯುಕ್ತ ಹೈಸ್ಕೂಲ್), ತೃತೀಯ ಸ್ಥಾನ 5 ಸಾವಿರ ರು. ನಗದು : ಕಾವ್ಯಾ, ನವ್ಯ ವಿ. ಶೆಟ್ಟಿ, ಸೃಷ್ಟಿ, ಶ್ರೀನಿಧಿ, ತೃಪ್ತಿ, ಇಶಾ (ಉಡುಪಿ ಸರ್ಕಾರಿ ಮಹಿಳಾ ಪಿಯು ಕಾಲೇಜು) ಗೆದ್ದುಕೊಂಡರು.ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಡಾ. ಪಿ. ಎಸ್. ಐತಾಳ್ ಈ ಸ್ಪರ್ಧೆ ಸಂಯೋಜಿಸಿದರು, ಕಾಲೇಜಿನ ಸಹಪ್ರಾಧ್ಯಾಪಕ ಶಿವಾನಂದ ಭಂಡಾರ್ಕರ್, ವೆಂಕಟೇಶ್ ಶೆಟ್ಟಿ, ದೀಪಕ್ ಶೆಟ್ಟಿ ಹಾಗೂ ಉಪನ್ಯಾಸಕರಾದ ರಾಜೇಶ್ ಮತ್ತು ವೇಣು ಮಾಧವ್ ಸ್ಪರ್ಧೆ ನಡೆಸಿಕೊಟ್ಟರು.