10 ಮಂದಿ ಹಿರಿಯ ವಕೀಲರಿಗೆ ಜಿಲ್ಲಾ ಮಟ್ಟದ ವಕೀಲ ಶ್ರೇಷ್ಠ ಪ್ರಶಸ್ತಿ ಪ್ರದಾನ

| Published : Dec 08 2024, 01:17 AM IST

ಸಾರಾಂಶ

ಕಿರಿಯ ವಕೀಲರು ನ್ಯಾಯಾಲಯಗಳಲ್ಲಿ ವಾದ ಮಂಡನೆ ಮಾಡುವ ವೇಳೆ ಹಿರಿಯ ವಕೀಲರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿ ನೈಪುಣ್ಯತೆ ಬೆಳೆಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮದ್ದೂರು

ಅಲಯನ್ಸ್ ಅಡ್ವೋಕೇಟ್ ಸಂಸ್ಥೆ ವತಿಯಿಂದ ಜಿಲ್ಲೆಯ 10 ಮಂದಿ ಹಿರಿಯ ವಕೀಲರಿಗೆ ಜಿಲ್ಲಾಮಟ್ಟದ ವಕೀಲ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದ ಸಮೀಪದ ಎಂ.ಎಂ.ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರು ಹಿರಿಯ ವಕೀಲರಾದ ಕೆ.ಎಸ್.ದೊರೆಸ್ವಾಮಿ, ಎಚ್.ವಿ.ನಾಗರಾಜು, ಬಸವಯ್ಯ, ಎಂ.ಪುಟ್ಟೇಗೌಡ, ಎಚ್. ವಿ.ಬಾಲರಾಜು, ಎಚ್.ಮಾದೇಗೌಡ ಬಿ.ಅಪ್ಪಾಜಿಗೌಡ, ಬಿ.ಎಲ್.ದೇವರಾಜು, ಸಿ.ಪುಟ್ಟರಾಜು ಟಿ. ಕೆ.ರಾಮೇಗೌಡ ಅವರಿಗೆ ವಕೀಲ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಬಳಿಕ ಮಾತನಾಡಿದ ನ್ಯಾಯಮೂರ್ತಿ ಶಿವಶಂಕರೇಗೌಡ ಅವರು, ಕಿರಿಯ ವಕೀಲರು ನ್ಯಾಯಾಲಯಗಳಲ್ಲಿ ವಾದ ಮಂಡನೆ ಮಾಡುವ ವೇಳೆ ಹಿರಿಯ ವಕೀಲರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿ ನೈಪುಣ್ಯತೆ ಬೆಳೆಸಿಕೊಳ್ಳಬಹುದು ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನ್ಯಾಯಮೂರ್ತಿಗಳನ್ನು ಪ್ರವಾಸಿ ಮಂದಿರದ ಆವರಣದಿಂದ ಜಾನಪದ ಕಲಾತಂಡದ ಮೆರವಣಿಗೆಯೊಂದಿಗೆ ಕರೆತರಲಾಯಿತು.

ಸಮಾರಂಭದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ವಿ.ಎಸ್.ನಾಗರಾಜು, ಮದ್ದೂರು ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ, ಉಪಾಧ್ಯಕ್ಷ ಪುಟ್ಟರಾಜು. ಕಾರ್ಯದರ್ಶಿ ಎಂ.ಜೆ.ಸುಮಂತ್, ವಕೀಲರ ಸಂಘದ ಎಂ.ಎನ್.ಶಿವಣ್ಣ, ಕೆ.ಎಸ್‌. ಶಿವಣ್ಣ, ವಿ. ಟಿ.ರವಿಕುಮಾರ್, ಚೆಲುವರಾಜು, ಮಾ.ಜ. ಚಿಕ್ಕಣ್ಣ, ಎಂ.ಮಹೇಶ,ದಯಾನಂದ. ಎಚ್.ವಿ.ನಾಗೇಶ, ಜಿ.ಸಿ .ಸತ್ಯ ನಿವೃತ್ತ ಪ್ರಾಂಶುಪಾಲ ಕೃಷ್ಣೇಗೌಡ ಮತ್ತಿತರರು ಇದ್ದರು.

ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಸ್. ಹರಿಣಿ . ಎಸ್.ಸಿ.ನಳಿನ, ಎನ್.ವಿ.ಕೊನಪ್ಪ. ಎಸ.ಪಿ.ಕಿರಣ್ ಅವರು ನ್ಯಾಯಾಲಯದ ಸಿಬ್ಬಂದಿ, ನ್ಯಾಯಮೂರ್ತಿಗಳಾದ ಶ್ಯಾಮಪ್ರಸಾದ್. ಟಿ.ಜಿ. ಶಿವಶಂಕರೇಗೌಡ ಅವರನ್ನು ಸ್ವಾಗತಿಸಿದರು.