ಜಿಲ್ಲಾ ಮಟ್ಟದ ವಾಲಿಬಾಲ್‌: ಮಳ್ಳೂರು ಬಿವೈಸಿ ತಂಡಕ್ಕೆ ಪ್ರಶಸ್ತಿ

| Published : Feb 28 2024, 02:41 AM IST

ಜಿಲ್ಲಾ ಮಟ್ಟದ ವಾಲಿಬಾಲ್‌: ಮಳ್ಳೂರು ಬಿವೈಸಿ ತಂಡಕ್ಕೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ 24ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಿವೈಸಿ ಮಳ್ಳೂರು ತಂಡ ಪ್ರಥಮ, ಬಿಲಾಲ್ ಪ್ರೆಂಡ್ಸ್ ನಾಕೂರು ದ್ವಿತೀಯ, ಸಂತೋಷ್ ಪ್ರೆಂಡ್ಸ್ ತಂಡ ತೃತೀಯ ಪ್ರಶಸ್ತಿ ಪಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ 24ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಿವೈಸಿ ಮಳ್ಳೂರು ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ವತಿಯಿಂದ 24ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಿತು. ದ್ವಿತೀಯ ಸ್ಥಾನವನ್ನು ಬಿಲಾಲ್ ಪ್ರೆಂಡ್ಸ್ ನಾಕೂರು, ತೃತೀಯ ಸ್ಥಾನವನ್ನು ಸಂತೋಷ್ ಪ್ರೆಂಡ್ಸ್ ತಂಡವು ಪಡೆದುಕೊಂಡಿತು.

ಸ್ಥಳೀಯ ಪರುಷರಿಗೆ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮಸ್ಥಾನ ಎಫ್.ವೈ.ಸಿ.ಎ, ದ್ವಿತೀಯ ಎಫ್.ವೈ.ಸಿ. ಬಿ. ಪಡೆದುಕೊಂಡಿತು. ಮಕ್ಕಳ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಸವೆಂತ್ ಸ್ಟಾರ್, ದ್ವಿತೀಯ ಸ್ಥಾನವನ್ನು ರಾಯಲ್ ಅಫೀಶೀಯಲ್ಸ್ ಪಡೆದುಕೊಂಡಿತು. ಸ್ಥಳೀಯ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಸಮುದಾಯ ಸಂಘ ಮಂಜಿಕೆರೆ ತಂಡ ಪ್ರಥಮ, ಎಫ್.ವೈ.ಸಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಂಬ್ ಇನ್‌ದ ಸಿಟಿ ಪ್ರಥಮ ನೀತು, ದ್ವಿತೀಯ ಬೀನಾ ಬಾರಿಕೆ ಪಡೆದುಕೊಂಡರು,

ಪಾಸಿಂಗ್‌ದ ಬಾಲ್ ವಾಣಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ರಮ್ಯ ಪಡೆದರು, ಸ್ಥಳೀಯ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಎಕೆಜಿ ಟಿಂಬರ್ ಬಾಯ್ಸ್ ಎ. ಪ್ರಥಮ, ಎಕೆಜಿ ಟಿಂಬರ್ ಬಾಯ್ಸ್ ಬಿ. ತಂಡ ದ್ವಿತೀಯ ಸ್ಥಾನ, ಸ್ಥಳೀಯ ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಸ್ಥಾನ ಸೀಮಾ ಪ್ರೆಂಡ್ಸ್ ಹಾಗೂ ದ್ವಿತೀಯ ಸ್ಥಾನ ಲೀಲಾವತಿ ಪ್ರೆಂಡ್ಸ್, ಮಕ್ಕಳ ಕ್ರೀಡೆಗಳಾದ ಕಾಳು ಹೆಕ್ಕುವುದು ಪ್ರಥಮ ಸಮ್ಮದ್, ದ್ವಿತೀಯ ಮನ್ವೀತಾ, ತೃತೀಯ ಜೈಹೀದ್, ಕಪ್ಪೆಜಿಗಿತ ಪ್ರಥಮ ಆರ್ಯನ್ ಪಿ.ಎ.ದ್ವತೀಯ ಮನ್ವೀತ್ ಎನ್.ಎಚ್. ತೃತೀಯ ಪುಣ್ಯ, ಗೋಣಿಚೀಲ ಓಟ ವಿನಯ್ ಪ್ರಥಮ, ದ್ವಿತೀಯ ಪ್ರಥಮ್, ತೃತೀಯ ಆರ್ಯನ್ ರಮೇಶ್ ಪಡೆದರು.

2022-23 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನವನ್ನು ಪ್ರಥಮ ನಯನ ಟಿ.ಎಂ. ದ್ವಿತೀಯ ರಾಜೇಶ್ವರಿ, ಪ್ರಾಥಮಿಕ ಶಾಲಾ ವಿಭಾಗದ 7ನೇ ತರಗತಿ ಆರ್ಸಾದ್ ಪ್ರಥಮ, ಚಸ್ವಿತ್ ಎಚ್.ಜಿ. ದ್ವಿತೀಯ, ಮಕ್ಕಳ ರಸ್ತೆ ಓಟ ಪ್ರಥಮ ಸ್ಥಾನ ನಿಖಿಲ್ ಗೌಡ ಕಲ್ಲೂರು, ದ್ವಿತೀಯ ಸ್ಥಾನ ತನುಷ್ ಅನಂತ್ ಮಂಜಿಕೆರೆ, ತೃತೀಯ ಸ್ಥಾನ ಜಗನ್ ಕೊಳಂಬೆ, ಸಾರ್ವಜನಿಕ ರಸ್ತೆ ಓಟ ಪ್ರಥಮ ಸೃಜನ್, ದ್ವಿತೀಯ ಸ್ಥಾನ ಕವನ್ ಕಲ್ಲೂರು, ತೃತೀಯ ಮಣಿ ಪಡೆದುಕೊಂಡರು.

ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಸುಂಟಿಕೊಪ್ಪ ಹೋಬಳಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅನೂಪ್‌ಕುಮಾರ್, ನಾಕೂರು ಶಿರಂಗಾಲ ಗ್ರಾ.ಪಂ.ಅಧ್ಯಕ್ಷ ಮಂದೋಡಿ ಜಗನ್ನಾಥ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪಕೋತಿನ, ಅಡಿಕೆರ ಶಾಂತಪ್ಪ, ಅಡಿಕೆರ ಧರ್ಮಪ್ಪ ಉದ್ಘಾಟಿಸಿದರು.