ಸಾರಾಂಶ
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ದಕ್ಷಿಣ ಕನ್ನಡ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳೂರು ಹಾಗೂ ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಯೋಗದಿಂದ ದೈಹಿಕ ಬೆಳವಣಿಗೆ ಸಾಧ್ಯವಿದ್ದು ಮಾನಸಿಕ ಕ್ಷಮತೆಗೆ ಹಾಗೂ ಆರೋಗ್ಯಕರ ಜೀವನಕ್ಕೆ ಪೂರಕವೆಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೇದಮೂರ್ತಿ ವಿದ್ವಾನ್ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು.ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ದಕ್ಷಿಣ ಕನ್ನಡ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳೂರು ಹಾಗೂ ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ - 2025ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕುಶಲ ಪೂಜಾರಿ, ಯೋಗ ಸಾಧಕ ಶೇಖರ ಕಡ್ತಲ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಯೋಗ ತರಬೇತುರಾದ ನರೇಂದ್ರ ಕಾಮತ್, ಸಮಿತಿಯ ಕಾರ್ಯದರ್ಶಿ ಸುಮಿತ್ ಕುಮಾರ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿ ಪೃಥ್ವಿರಾಜ ಆಚಾರ್ಯ ಕಿನ್ನಿಗೋಳಿ, ಹಿರಿಯ ಯೋಗಪಟು ಕೆ. ಅಶೋಕ್ ಕುಮಾರ್ , ಸಂಘಟಕರಾದ ಸಂತೋಷ್ ಮಂಡಕಜೆ, ಪ್ರಣೀಕ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು. ವಯೋಮಿತಿ 10 ರಿಂದ 55 ವರ್ಷಗಳ ಒಳಗಿನ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಜರಗಿದ್ದು 100ಕ್ಕೂ ಹೆಚ್ಚು ಸ್ವರ್ಧಾಳುಗಳು ಭಾಗವಹಿಸಿದ್ದರು. ರಕ್ಷಿತಾ ಪ್ರಣೀಕ್ ಪುಜಾರಿ ಸ್ವಾಗತಿಸಿದರು. ನವೀನ್ ಕುಮಾರ್ ಬಿ ವಂದಿಸಿದರು.