ಜ್ಞಾನವಿಕಾಸ ಸಂಯೋಜಕೀಯರಿಗಾಗಿ ಕ್ರಿಯಾ ಯೋಜನೆ ಮಾಹಿತಿ ಸಭೆ

| Published : Jul 18 2025, 12:45 AM IST

ಸಾರಾಂಶ

ಜ್ಞಾನವಿಕಾಸ ಕೇಂದ್ರಗಳ ನಿರ್ವಹಣೆ ಹಾಗೂ ಗುಣಮಟ್ಟದ ಕೇಂದ್ರಗಳ ನಿರಂತರ ಅನುಪಾಲನೆ

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕುವೆಂಪುನಗರದಲ್ಲಿ ಜ್ಞಾನವಿಕಾಸ ಸಂಯೋಜಕೀಯರಿಗಾಗಿ 2025-26 ಸಾಲಿನ ಕ್ರಿಯಾಯೋಜನೆ ಮಾಹಿತಿ ಸಭೆ ನಡೆಯಿತು.ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕ ವಿಜಯ್ ಕುಮಾರ್ ನಾಗನಾಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನವಿಕಾಸ ಕೇಂದ್ರಗಳ ನಿರ್ವಹಣೆ ಹಾಗೂ ಗುಣಮಟ್ಟದ ಕೇಂದ್ರಗಳ ನಿರಂತರ ಅನುಪಾಲನೆಯಲ್ಲಿ, ಸಂಯೋಜಕೀಯರ ಪಾತ್ರ,ಕಡಿಮೆ ಸದಸ್ಯರಿರುವ ಕೇಂದ್ರಕ್ಕೆ ಸದಸ್ಯರ ಸೇರ್ಪಡೆ ಮತ್ತು ಕಂತು ಬಾಕಿ ಅನುಪಾಲನೆ ಸಂಘಗಳ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಿಕೆ ಜ್ಞಾನ ವಿಕಾಸ ಕಾರ್ಯಕ್ರಮಗಳಿಗೆ ಉತ್ತಮ ಗುಣಮಟ್ಟದ ವಿಚಾರವನ್ನು ಆಯ್ಕೆ ಮಾಡಿಕೊಳ್ಳುವಂತೆ, ಯೋಜನೆಯ ಕಾರ್ಯಕ್ರಮ ಗಳನ್ನು ಸಕಾಲಕ್ಕೆ ಸದಸ್ಯರಿಗೆ ತಲುಪಿಸುವಂತೆ ಮಾಹಿತಿ ನೀಡಿದರು.ಮೈಸೂರು ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಮೂಕಾಂಬಿಕಾ ಮಾತನಾಡಿ, ಜ್ಞಾನವಿಕಾಸ ಕೇಂದ್ರಗಳಲ್ಲಿ, ಕ್ರಿಯಾಯೋಜನೆ ಪ್ರಕಾರ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಹಾಗೂ ಕೇಂದ್ರದ ದಾಖಲಾತಿ ನಿರ್ವಹಣೆ ಬಗ್ಗೆ, ಕೇಂದ್ರಗಳ ಗ್ರೇಡಿಂಗ್, ಗ್ರಂಥಾಲಯ ಪುಸ್ತಕಗಳ ಬಳಕೆ, ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯ ಬಗ್ಗೆ ಸೇವಾಪ್ರತಿನಿಧಿಯವರು ಪ್ರಾಮಾಣಿಕವಾಗಿ ಕತ೯ವ್ಯ ನಿರ್ವಹಿಸುವ ಕುರಿತು ಮಾಹಿತಿ ನೀಡಿದರು.ತಾಲೂಕಿನ ಯೋಜನಾಧಿಕಾರಿ ಪ್ರವೀಣ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಹಾಗೂ ಕೇಂದ್ರದ ಸಂಯೋಜಕೀಯರು ಭಾಗವಹಿಸಿದ್ದರು.