ಜಿಲ್ಲಾ ಹೆಗ್ಗಡೆ ಸಂಘದದಿಂದ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ

| Published : Aug 21 2024, 12:32 AM IST

ಜಿಲ್ಲಾ ಹೆಗ್ಗಡೆ ಸಂಘದದಿಂದ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮ ಕ್ಷೇತ್ರದ ಸಾಧನೆಗೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಯಕ್ಷಗಾನ ಭಾಗವತರಾದ ಸುಜಯ ಹೆಗ್ಡೆ ಕುತ್ಲೂರು ಅವರನ್ನು ಸನ್ಮಾನಿಸಲಾಯಿತು.

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ವತಿಯಿಂದ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಸೋಮವಾರ ಸಾಮೂಹಿಕ ವಿಶೇಷ ಹೂವಿನ ಪೂಜೆ ಮತ್ತು ವೇತನ ವಿತರಣಾ ಸಮಾರಂಭ ಸೋಮವಾರ ವೀರಮಾರುತಿ ದೇವಸ್ಥಾನದಲ್ಲಿ ನಡೆಯಿತು. ದಾನಿಗಳ ನೆರವಿನಿಂದ ಹೆಗ್ಗಡೆ ಸಮಾಜದ 155 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಕ ಹಾಗೂ ಸಾಮಾನ್ಯ ಸೇರಿದಂತೆ ಸುಮಾರು 6 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸನ್ಮಾನ:ಉದ್ಯಮ ಕ್ಷೇತ್ರದ ಸಾಧನೆಗೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಯಕ್ಷಗಾನ ಭಾಗವತರಾದ ಸುಜಯ ಹೆಗ್ಡೆ ಕುತ್ಲೂರು ಅವರನ್ನು ಸನ್ಮಾನಿಸಲಾಯಿತು. ಪ್ರಸನ್ನ ಹೆಗ್ಡೆ ಮತ್ತು ಶುಭರಾಜ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವೇಂದ್ರ ಹೆಗ್ಡೆ ದೇವಸ್ಥಾನ ಹಾಗೂ ಹೆಗ್ಗಡೆ ಸಮಾಜದ ಅಭಿವೃದ್ಧಿಗೆ ಎಲ್ಲರು ಸಹಕಾರ ನೀಡುವಂತೆ ವಿನಂತಿಸಿದರು. ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಮಾಜಿ ಅಧ್ಯಕ್ಷೆ ಯಶೋಧಾ ಹೆಗ್ಡೆ, ಸಿವಿಲ್ ಎಂಜಿನಿಯರ್ ಅನಿಲ್ ಹೆಗ್ಡೆ ಮಂಗಳೂರು, ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಎಸ್.ಹೆಗ್ಡೆ, ಯುವ ಘಟಕದ ಅಧ್ಯಕ್ಷ ಪ್ರಮೋದ್ ಹೆಗ್ಡೆ ಉಪಸ್ಥಿತರಿದ್ದರು. ದೇವಸ್ಥಾನಕ್ಕೆ ನಂದಾ ದೀಪವನ್ನು ಕೊಡುಗೆಯಾಗಿ ನೀಡಿದ ಪ್ರವೀಣ್ ಹೆಗ್ಡೆ ಕಾರ್ಕಳ ಹಾಗೂ ವಿದ್ಯಾರ್ಥಿ ವೇತನದ ವಿವಿಧ ದಾನಿಗಳನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ನವೀನ್ ಹೆಗ್ಡೆ ಸ್ವಾಗತಿಸಿದರು. ಯುವ ಘಟಕದ ಕಾರ್ಯದರ್ಶಿ ವೈಷ್ಣವ್ ಹೆಗ್ಡೆ ನಿರೂಪಿಸಿದರು. ಪ್ರನಿಲ್ ಹೆಗ್ಡೆ ವಿದ್ಯಾರ್ಥಿ ವೇತನದ ವಿವರ ನೀಡಿದರು. ಸುರೇಂದ್ರ ಕುಮಾರ್ ಹೆಗ್ಡೆ ವಂದಿಸಿದರು.