ತರಕಾರಿ ಖರೀದಿಗೆ ಬರುವ ಗ್ರಾಹಕರು ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬದಲು ಮರುಬಳಕೆ ಮಾಡಬಹುದಾದ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಾನಸ ಅನಿಲ್ ಮನವಿ ಮಾಡಿದರು.
ಸಿರುಗುಪ್ಪ: ತರಕಾರಿ ಖರೀದಿಗೆ ಬರುವ ಗ್ರಾಹಕರು ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬದಲು ಮರುಬಳಕೆ ಮಾಡಬಹುದಾದ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಬೇಕು ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಾನಸ ಅನಿಲ್ ಮನವಿ ಮಾಡಿದರು.
ನಗರದ ತರಕಾರಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ಮತ್ತು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ''''ಇನ್ನರ್ ವೀಲ್ ಕ್ಲಬ್'''' ವತಿಯಿಂದ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಉಚಿತವಾಗಿ 500 ಬಟ್ಟೆಯ ಬ್ಯಾಗ್ (ಚೀಲ) ಗಳನ್ನು ಭಾನುವಾರ ವಿತರಿಸಿ ಮಾತನಾಡಿದರು.ಪ್ಲಾಸ್ಟಿಕ್ ವಸ್ತು ಇಂದು ನಗರದ ಸ್ವಚ್ಛತೆ ಹಾಳು ಮಾಡುತ್ತಿದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾಷ್ಟು ಉಪಯೋಗ ಕಡಿಮೆ ಮಾಡುವ ಪ್ರಯತ್ನಿಸಿ, ಪರಿಸರ ಸ್ನೇಹಿ ಬಟ್ಟೆ ಚೀಲ ಉಪಯೋಗಿಸುವ ಹವ್ಯಾಸ ಬೆಳೆಸಿಕೊಳ್ಳೋಣ. ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ತಿಂಡಿ-ತಿನಿಸುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಡುತ್ತಾರೆ. ಹೀಗಾಗಿ, ಮನೆಯಿಂದ ಬರುವಾಗಲೇ ಬಟ್ಟೆ ಬ್ಯಾಗ್ ತರುವುದರ ಮೂಲಕ ನಿಮ್ಮ ಆರೋಗ್ಯದೊಂದಿಗೆ ಪರಿಸರವನ್ನೂ ರಕ್ಷಿಸಬೇಕು. ಆ ಮೂಲಕ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು. ಹಾಗೆಯೇ ಮಾರಾಟಗಾರರೂ ಮನೆಯಿಂದ ಬ್ಯಾಗ್ ತರುವಂತೆ ಗ್ರಾಹಕರಿಗೆ ಸೂಚಿಸಬೇಕು ಎಂದರು. ಕಾರ್ಯದರ್ಶಿ ಕಾಮಾಕ್ಷಿ ಕೆ.ಪಿ. ಹಾಗೂ ಕ್ಲಬ್‌ನ ಇತರ ಪ್ರಮುಖ ಸದಸ್ಯರು ಭಾಗವಹಿಸಿದ್ದರು.