ಸಾರಾಂಶ
ಮಂಡ್ಯ: ಸೇಂಟ್ ಜಾನ್ಸ್ ಕಾಂಪೋಸಿಟ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ದೈವಿಕ್ ವಿಕಲಾಂಗನಾಗಿದ್ದು, ಡಿಶೂನ್ ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಳೆದ ಜನವರಿ-ಫೆಬ್ರವರಿಯಲ್ಲಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಸಾವು-ಬದುಕಿನೊಂದಿಗೆ ಹೋರಾಡಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಪರೀಕ್ಷೆ ಬರೆದಿದ್ದನು. ಈ ಭೂಮಿ ಮೇಲೆ ತಾನು ಕೆಲವೇ ಕೆಲವು ದಿನಗಳು ಬದುಕುತ್ತೇನೆ ಎಂಬ ಅರಿವಿದ್ದರೂ ಪರೀಕ್ಷೆ ಬರೆಯಬೇಕೆಂಬ ಹಠ-ಛಲದೊಂದಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. ೮೭.೬ರಷ್ಟು ಫಲಿತಾಂಶ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದೈವಿಕ್ ಎಂಬ ಈ ವಿದ್ಯಾರ್ಥಿಯು ಇಂದಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಮಾದರಿಯಾಗಿರುತ್ತಾನೆ. ಇನ್ನೂ ಹೆಚ್ಚಿನ ಅಂಕ ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆ ತರಬೇಕೆಂದುಕೊಂಡಿದ್ದೆ. ಆದರೆ, ನನ್ನ ದೈಹಿಕ ಅಸಮರ್ಥತತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ದೈವಿಕ್ ನೋವಿನಿಂದ ಹೇಳುತ್ತಾನೆ. ಈತನ ಸಾಧನೆ ಇತರರಿಗೆ ಮಾದರಿಯಾಗಿದೆ.