ತರೀಕೆರೆದಿವ್ಯಚೇತನವನ್ನು ತುಂಬಿಕೊಳ್ಳಲು ವಿಶಾಲ ದೃಷ್ಠಿಕೋನ ಅಗತ್ಯ ಎಂದು ಕರ್ಕಿ ದೈವಜ್ಞ ಪೀಠದ ಶ್ರೀಮದ್ ಶಂಕರಾ ಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿ ಹೇಳಿದ್ದಾರೆ.

ತರೀಕೆರೆಯಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ , ತರೀಕೆರೆ

ದಿವ್ಯಚೇತನವನ್ನು ತುಂಬಿಕೊಳ್ಳಲು ವಿಶಾಲ ದೃಷ್ಠಿಕೋನ ಅಗತ್ಯ ಎಂದು ಕರ್ಕಿ ದೈವಜ್ಞ ಪೀಠದ ಶ್ರೀಮದ್ ಶಂಕರಾ ಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿ ಹೇಳಿದ್ದಾರೆ.ದೈವಜ್ಞ ಬ್ರಾಹ್ಮಣ ಸಮಾಜ ಮತ್ತು ದೈವಜ್ಞ ಬ್ರಾಹ್ಮಣ ಮಹಿಳಾ ಸಮಾಜದಿಂದ ಪಟ್ಟಣದ ಅನ್ನಪೂರ್ಣ ಸಭಾ ಭವನದಲ್ಲಿ ನಡೆದ ದೈವಜ್ಞ ದರ್ಶನದಲ್ಲಿ ಮಾತನಾಡಿದರು. ಭಗವಂತ ನಮ್ಮಲ್ಲಿ ಸತ್ ಚಿತ್ ಆನಂದ ತುಂಬಿದ್ದಾನೆ, ಜೀವನದ ಉದ್ದೇಶವೇ ಭಗವಂತನ ಪ್ರಾಪ್ತಿ ಮತ್ತು ಧನ್ಯತೆ. ನಾವು ಎಲ್ಲಿಂದ ಬಂದಿದ್ದೇವೆಯೋ ಅಲ್ಲಿಗೇ ಹೋಗಬೇಕು. ಹಾಗಾಗಿ ಜೀವನ ಸಾರ್ಥಕವಾಗಬೇಕು, ದಿವ್ಯ ಚೇತನ ಬೆಳಗಿ ಜೀವನ ಭವ್ಯತೆಯತ್ತ ಸಾಗಬೇಕು. ನಮ್ಮಲ್ಲಿ ಉದಾತ್ತ ಚಿಂತನೆ ಬೆಳೆಸಿಕೊಂಡು ದ್ವೇಷ ಭಾವನೆ ದೂರವಿಡಬೇಕು. ನೀನು ಬದುಕಿ ಇತರರನ್ನು ಬದುಕಿಸಬೇಕು ಎಂದು ಕರೆ ನೀಡಿದರುದೈವಜ್ಞ ದರ್ಶನ ಬಹಳ ಸುಂದರ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಸ್ತ್ರೋತ್ರ ಭಜನ, ಶೋಭಾಯಾತ್ರೆ ಚೆನ್ನಾಗಿ ನಡೆದಿದೆ, ದೈವಜ್ಞರ ದರ್ಶನ ಮತ್ತು ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳನ್ನು ಈ ಕಾರ್ಯಕ್ರಮದ ಮೂಲಕ ಸಮಸ್ತ ದೈವಜ್ಞರಿಗೆ ಪರಚಿಯಿಸುವುದೂ ಮುಖ್ಯ ಉದ್ದೇಶ ಎಂದು ತಿಳಿಸಿದರು.ತತ್ಕರಕಮಲಸಂಜಾತ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿ ಮಾತನಾಡಿ ಮನುಷ್ಯ ಜನ್ಮ ಬಹಳ ಅಪರೂಪ, ಅಶಾಶ್ವತ ಈ ಶರೀರವನ್ನು ಶಾಶ್ವತವಾಗಿ ರಕ್ಷಿಸುವುದು ಧರ್ಮ ಒಂದೇ, ಧರ್ಮ ಸಂಗವು ಭಗವಂತನಲ್ಲಿ ಇಟ್ಟ ಠೇವಣಿ ರೂಪದಲ್ಲಿ ನಮ್ಮನ್ನು ಮತ್ತು ಸಮಸ್ತರನ್ನು ರಕ್ಷಿಸಿ ಕಾಪಾಡುವಲ್ಲಿ ಸಹಕಾರಿ. ಹಾಗಾಗಿ ನಾವು ಧರ್ಮದ ರಕ್ಷಣೆ ಮಾರ್ಗದಲ್ಲಿ ನಡೆಯಬೇಕು, ಉದಾತ್ತ ಚಿಂತನೆ ಹಾಗೂ ನಮ್ಮ ನಡೆ ನುಡಿಗಳು ಧರ್ಮ ಚಿಂತನೆಯಲ್ಲಿಯೇ ಭಗವಂತನ ಕಾಣುವ ಮಾರ್ಗದಲ್ಲೇ ನಡೆಯಬೇಕು. ಕರ್ಮಕ್ಕೆ ತಕ್ಕ ಫಲ ದೊರೆಯುತ್ತದೆ ಹಾಗಾಗಿ ಎಲ್ಲರೂ ಸತ್ಕರ್ಮಗಳಲ್ಲಿ ನಡೆಯಬೇಕು. ದೈವಜ್ಞ ದರ್ಶನ ನಮ್ಮ ಮನಸ್ಸನ್ನು ಸಂತೋಷ ಪಡಿಸಿದೆ ಎಂದು ತಿಳಿಸಿದರು.ಶ್ರೀಮಠದಿಂದ ಆಗಮಿಸಿದ ಯೋಗೀಶ್ ರಾಮಚಂದ್ರ ಭಟ್ ಮಾತನಾಡಿ ನಾಲ್ಕು ದಶಕಗಳ ಹಿಂದಿನಿಂದ ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಯನ್ನು ಶ್ರೀಮಠ ತನ್ನ ಕಾರ್ಯವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ತಿಳಿಸಿದರು.ತರೀಕೆರೆ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಿ.ರವೀಂದ್ರ ಗುರುರಾಜ ಶೇಟ್ ಮಾತನಾಡಿ ಸಮಾಜದ ಪ್ರತಿಯೊಬ್ಬರೂ ಕೂಡ ಶ್ರೀ ಮಠ, ಪರಮಪೂಜ್ಯರ ಆಶೀರ್ವಾದ ಪಡೆಯಬೇಕು. ಶ್ರೀಗಳ ಆದೇಶಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿ ಶ್ರೀ ಗುರುಗಳು ಆಚರಣೆಗೆ ತಂದಿರುವ ಸಂಧ್ಯಾವಂದನ ಪೂಜೆ ಪುನಸ್ಕಾರ,ಭಜನೆಗಳನ್ನು ನಿರ್ವಹಿಸಬೇಕು ಎಂದು ಮನವಿ ಮಾಡಿದರು.ಶ್ರೀ ಮಠದ ಜಂಟಿ ಕಾರ್ಯದರ್ಶಿ ಸುಧಾಕರ ಶೇಟ್ ಮಾತನಾಡಿದರು. ನಿವೃತ್ತ ಶಿಕ್ಷಕ ಪಾಂಡುರಂಗ ಶೇಟ್ ಸಮಾಜದ ಪರವಾಗಿ ಉಭಯ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ಶ್ರೀ ಸುಬ್ರಹ್ಣ್ಯೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ಸಮಿತಿ ಪದಾದಿಕಾರಿಗಳು ಉಭಯ ಶ್ರೀಗಳಿಗೆ ಪೂರ್ಣಫಲ ಸಮರ್ಪಿಸಿ ಸ್ವಾಗತಿಸಿದರು.ಶಾರದ ಎನ್.ಮಂಜುನಾಥ್ ಮತ್ತು ತಂಡದವರಿಂದ ದೇವರನಾಮ,ಕು.ಸಮೃದ್ದಿ ಅವರ ಭರತ ನಾಟ್ಯ ಏರ್ಪಡಿಸಲಾಗಿತ್ತು.ವೇ.ಬ್ರ.ಶ್ರೀ ಲಕ್ಷ್ಮೀನಾರಾಯಣ ಭಗವಂತ ಭಟ್, ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀಧರ್ ಮಂಜುನಾಥ್ ಶೇಟ್, ಉತ್ತಮ ಶೇಟ್, ಸುಧಾಕರ ಶೇಟ್, ಪ್ರಶಾಂತ ಕುಮಾರ್, ಸಾಯಿನಾಥ್ ನಾಗೇಶ್ ಶೇಟ್, ಅರುಣ್ ಕುಮಾರ್, ಸಾಯಿರಾಮ್ ಭಟ್ ಪುರಸಬಾ ಸದಸ್ಯ ಟಿ.ಜಿ.ಅಶೋಕ ಕುಮಾರ್, ವಿನಾಯಕ ಶೇಟ್ ದೈವಜ್ಞ ಸಮಾಜದ ಮಹಿಳಾ ಮಂಡಳಿ ಅಧ್ಯಕ್ಷ ಸುಮನಾ ಪಾಂಡುರಂಗ, ದೈವಜ್ಞ ಬ್ರಾಹ್ಮಣ ಸಮಾಜದ ಪದಾದಿಕಾರಿಗಳು ಭಾಗವಹಿಸಿದ್ದರು.--30ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಮತ್ತು ದೈವಜ್ಞ ಬ್ರಾಹ್ಮಣ ಮಹಿಳಾ ಸಮಾಜದಿಂದ ನಡೆದ ದೈವಜ್ಞ ದರ್ಶನದಲ್ಲಿ ಕರ್ಕಿ ದೈವಜ್ಞ ಪೀಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿ ಮಾತನಾಡಿದರು. ತತ್ತಕರಕಮಲ ಸಂಜಾತ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳು ಇದ್ದರು.