ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದೇಶ ಕಾಯುವ ಯೋಧರೊಬ್ಬರ ಮನೆಯಲ್ಲಿ ದೀಪಾವಳಿಯನ್ನು ಅರ್ಥಪೂರ್ಣ ಆಚರಿಸಿ, ಅವರ ದೇಶಸೇವೆಯನ್ನು ಗೌರಲಾಯಿತು.
ಕಾಪು : ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದೇಶ ಕಾಯುವ ಯೋಧರೊಬ್ಬರ ಮನೆಯಲ್ಲಿ ದೀಪಾವಳಿಯನ್ನು ಅರ್ಥಪೂರ್ಣ ಆಚರಿಸಿ, ಅವರ ದೇಶಸೇವೆಯನ್ನು ಗೌರಲಾಯಿತು.
ಮೂಡುಬೆಳ್ಳೆಯ ತಿರ್ಲಪಲ್ಕೆ ನಿವಾಸಿ, ಯೋಧ ರವೀಂದ್ರ ಎಸ್. ಬೆಳ್ಳೆ ಅವರ ಮನೆಯಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸೈನಿಕರಾದ ರವೀಂದ್ರ ಎಸ್. ಬೆಳ್ಳೆ, ಸುಜಿತ್ ಪೂಜಾರಿ ಕಾರ್ಕಳ ಹಾಗೂ ಮೋಹನ್ ದಾಸ್ ಮೂಳೂರು ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾಪು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಮೂಡುಬೆಳ್ಳೆ, ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಮಾಜಿ ಉಪಾಧ್ಯಕ್ಷ ಶಶಿಧರ್ ವಾಗ್ಲೆ, ಕಟ್ಟಿಂಗೇರಿ ಶಕ್ತಿ ಕೇಂದ್ರದ ಪ್ರಮುಖ್ ಗುರುರಾಜ್ ಭಟ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್ ಹಾಗೂ ಚಲನಚಿತ್ರ ನಟಿ ಬಾಸುಮಾ ಕೊಡಗು ಉಪಸ್ಥಿತರಿದ್ದರು.