ದೀಪಾವಳಿ: ಶಿವಗಂಗೆಯ ದೇವಾಲಯದಲ್ಲಿ ಗೋಪೂಜೆ

| Published : Oct 24 2025, 01:00 AM IST

ಸಾರಾಂಶ

ದಾಬಸ್‍ಪೇಟೆ: ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮುಜರಾಯಿ ದೇವಾಲಯಗಳಲ್ಲಿ ಗೋಪೂಜೆ ಮಾಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಸೋಂಪುರ ಹೋಬಳಿಯ ಶಿವಗಂಗೆಯ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಇಒ ಬೃಂದಾ, ಪ್ರಧಾನ ಅರ್ಚಕರಾದ ರಾಜುದೀಕ್ಷಿತ್ ಹಾಗೂ ಸ್ಥಳೀಯರು ಗೋಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಪ್ರಧಾನ ಅರ್ಚಕ ರಾಜುದೀಕ್ಷಿತ್, ಜಿಲ್ಲಾಧಿಕಾರಿಗಳ ಆದೇಶದಂತೆ ಮುಜರಾಯಿ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದೇವೆ. ದೀಪಾವಳಿ ಹಬ್ಬ ಬೆಳಕಿನ ಸಂಕೇತವಾಗಿದ್ದು, ಎಲ್ಲರ ಬದುಕಿನಲ್ಲಿ ಕತ್ತಲೆ ಹೋಗಿ ಬೆಳಕು ಮೂಡಲಿ, ಎಲ್ಲರೂ ಸೇರಿ ಸಂಭ್ರಮ ಸಡಗರದಿಂದ ಆಚರಿಸುವುದೇ ಹಬ್ಬಗಳ ವಿಶೇಷ. ದೇಶೀಯ ಸಂಸ್ಕೃತಿಯ ಪ್ರತೀಕವಾದ ದೀಪಾವಳಿ ಹಬ್ಬವನ್ನು ದೇವಾಲಯಗಳಲ್ಲಿ ಈ ಬಾರಿ ಸಂಪ್ರದಾಯಿಕವಾಗಿ ಆಚರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾರುಪತ್ತೇದಾರರಾದ ಸುಮಾ, ದೇವಾಲಯದ ಸಿಬ್ಬಂದಿ ಹಾಜರಿದ್ದರು.

ಪೋಟೋ 3 :

ಸೋಂಪುರ ಹೋಬಳಿಯ ಶಿವಗಂಗೆಯ ಹೊನ್ನಾದೇವಿ ಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಪ್ರಧಾನ ಅರ್ಚಕರಾದ ರಾಜುದೀಕ್ಷಿತ್ ಹಾಗೂ ಸ್ಥಳೀಯರು ಗೋಪೂಜೆ ನೆರವೇರಿಸಿದರು.