ಡಿಜೆ ಬಂದ್‌, ಡಂಬಳದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯೇ ಸ್ಥಗಿತ

| Published : Sep 06 2025, 01:01 AM IST

ಸಾರಾಂಶ

9ನೇ ದಿನದ ಗಣೇಶ ವಿಸರ್ಜನೆ ವೇಳೆ ಪೊಲೀಸರು ಡಿಜೆ ಬಂದ್‌ ಮಾಡಿಸಿದ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯನ್ನೇ ಸ್ಥಗಿಸಿಗೊಳಿಸಿದ ಘಟನೆ ಡಂಬಳದಲ್ಲಿ ಗುರುವಾರ ರಾತ್ರಿ ನಡೆದಿದೆ. ಓಣಿಯ ಹಿರಿಯರ ಜತೆ ಪೊಲೀಸರು ಚರ್ಚಿಸಿದ ನಂತರ ಶುಕ್ರವಾರ ರಾತ್ರಿ ಮತ್ತೆ ಅದ್ಧೂರಿ ಮೆರವ ಣಿಗೆ ಮೂಲಕ ಗಣೇಶ ಮೂರ್ತಿ ವಿಸರ್ಜಿಸಲಾಯಿತು.

ಡಂಬಳ: 9ನೇ ದಿನದ ಗಣೇಶ ವಿಸರ್ಜನೆ ವೇಳೆ ಪೊಲೀಸರು ಡಿಜೆ ಬಂದ್‌ ಮಾಡಿಸಿದ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯನ್ನೇ ಸ್ಥಗಿಸಿಗೊಳಿಸಿದ ಘಟನೆ ಡಂಬಳದಲ್ಲಿ ಗುರುವಾರ ರಾತ್ರಿ ನಡೆದಿದೆ. ಓಣಿಯ ಹಿರಿಯರ ಜತೆ ಪೊಲೀಸರು ಚರ್ಚಿಸಿದ ನಂತರ ಶುಕ್ರವಾರ ರಾತ್ರಿ ಮತ್ತೆ ಅದ್ಧೂರಿ ಮೆರ‍ವಣಿಗೆ ಮೂಲಕ ಗಣೇಶ ಮೂರ್ತಿ ವಿಸರ್ಜಿಸಲಾಯಿತು.

ಗ್ರಾಮದ ಗಜಾನನ ಗೆಳೆಯರ ಬಳಗದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ವಿವಾದದಿಂದಾಗಿ ಗುರುವಾರ ರಾತ್ರಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರೊಂದಿಗೆ ವಾಗ್ವಾದ ನಡೆದು ಡಿಜೆಗೆ ಅವಕಾಶ ನೀಡಲಾಗುವುದಿಲ್ಲ ಎಂದ ಕಾರಣ ಭಕ್ತರು ಡಿಜೆ ಬೇಡವೇ ಬೇಡ ಎಂದು ನರೇಗಲ್ಲಪ್ಪಜ್ಜನ ಮೂರ್ತಿ ಬಳಿ ತಾತ್ಕಾಲಿಕ ಶೆಡ್ ಗಣಪನಿಗೆ ಹಾಕಿ ಅಲ್ಲಿಯೇ ಗಣಪನಿಗೆ ಭಜನೆ ಮಾಡಿದರು. ಹೀಗೆ ಸಮಿತಿ ಹಿರಿಯರು ಸಭೆ ನಡೆಸಿದರೂ ಹಗ್ಗ ಜಗ್ಗಾಟದಿಂದ ಗಣೇಶ ವಿಸರ್ಜನೆ ಸ್ಥಗಿತಗೊಂಡಿತು. ನಂತರ ಸಮಿತಿ ಡಿವೈಎಸ್‍ಪಿ ಪ್ರಭು ಕರೇದಳ್ಳಿ, ಸಿಪಿಐ ಮಂಜುನಾಥ ಕುಸುಗಲ್, ಸೇರಿದಂತೆ ಜಿಲ್ಲೆಯ ವಿವಿಧ ಪೋಲಿಸ್ ಇನ್‌ಸ್ಪೆಕ್ಟರ್ ಪೊಲೀಸ್‌ ಜತೆ ಮಾತುಕತೆ ನಡೆದು ಪರಸ್ಪರ ಸೌಹಾರ್ದತೆಯಿಂದ ಮತ್ತೆ ಯಥಾಪ್ರಕಾರ ಗಣೇಶನ ಮೆರವಣಿಗೆ ಅದ್ಧೂರಿಯಾಗಿ ನಡೆದು ವಿಸರ್ಜನೆಯಾಯಿತು. ಗ್ರಾಮದ ಸಾವಿರಾರು ಜನರೊಂದಿಗೆ ಗಣೇಶನ ಮೆರವಣಿಗೆ ಎಲ್ಲ ಸಮುದಾಯವರೊಂದಿಗೆ ನಡೆಯಿತು. ಪೊಲೀಸರು ಸೂಕ್ತ ಬಂದೋಬಸ್ತ್ ಮಾಡುವ ಮೂಲಕ ವಿಸರ್ಜನೆಗೆ ಸಹಕರಿಸಿದರು.