ಸಾರಾಂಶ
ನಗರದಲ್ಲಿ ಶನಿವಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಅವರ ಕುರ್ಚಿಯಲ್ಲಿ ಕೆಲ ಕಾಲ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಳಿತಿದ್ದು ಗಮನ ಸೆಳೆಯಿತು.
ಬೆಂಗಳೂರು : ನಗರದಲ್ಲಿ ಶನಿವಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಅವರ ಕುರ್ಚಿಯಲ್ಲಿ ಕೆಲ ಕಾಲ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಳಿತಿದ್ದು ಗಮನ ಸೆಳೆಯಿತು.
ಬಸವರಾಜ ಹೊರಟ್ಟಿ ಪಕ್ಕದಲ್ಲಿದ್ದ ಮುಖ್ಯಮಂತ್ರಿ ಆಸನದ ಮೇಲೆ ಕುಳಿತ ಡಿ.ಕೆ.ಶಿವಕುಮಾರ್ ಕೆಲ ನಿಮಿಷ ಹೊರಟ್ಟಿ ಅವರೊಂದಿಗೆ ಮಾತನಾಡಿ, ನಂತರ ತಮ್ಮ ಆಸನಕ್ಕೆ ಮರಳಿದರು.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೇರೊಬ್ಬರ ಆಸನದಲ್ಲಿ ಕುಳಿತು ಮಾತನಾಡುವುದು ಸಹಜವಾಗಿದ್ದರೂ ಪ್ರಸ್ತುತ ಕೆಲ ದಿನಗಳಿಂದ ಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯವರ ಆಸನದ ಮೇಲೆ ಕುಳಿತಿದ್ದು, ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಸಾರ್ವಜನಿಕರು, ಗಣ್ಯರಲ್ಲಿ ಗುಸುಗುಸಿಗೆ ಕಾರಣವಾಗಿದ್ದು ವಿಶೇಷವಾಗಿತ್ತು.