ನೇಪಾಳದಲ್ಲಿ ನಾಪತ್ತೆಯಾಗಿರುವ ರಾಜ್ಯದ ವ್ಯಕ್ತಿಗಳ ಗುರುತು ಪತ್ತೆ ಹಾಗೂ ಅಗತ್ಯವಿದ್ದಲ್ಲಿ ಅವರ ಮೃತದೇಹಗಳ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ತರಲು ಅನುಕೂಲವಾಗುವಂತೆ, ಡಿಎನ್‌ಎ ಪ್ರೊಫೈಲಿಂಗ್‌ಗಾಗಿ ಬೆಂಗಳೂರು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ನೋಡಲ್ ಕೇಂದ್ರವಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
-ಬೌರಿಂಗ್, ಲೇಡಿ ಕರ್ಜನ್ ಆಸ್ಪತ್ರೆ ನೋಡಲ್ ಕೇಂದ್ರ-ಜಿಬಿಎ ಸಹಾಯವಾಣಿ 1533 ಸಂಪರ್ಕಿಸಲು ಮನವಿ
ಕನ್ನಡಪ್ರಭ ವಾರ್ತೆ ಬೆಂಗಳೂರುನೇಪಾಳದಲ್ಲಿ ನಾಪತ್ತೆಯಾಗಿರುವ ರಾಜ್ಯದ ವ್ಯಕ್ತಿಗಳ ಗುರುತು ಪತ್ತೆ ಹಾಗೂ ಅಗತ್ಯವಿದ್ದಲ್ಲಿ ಅವರ ಮೃತದೇಹಗಳ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ತರಲು ಅನುಕೂಲವಾಗುವಂತೆ, ಡಿಎನ್‌ಎ ಪ್ರೊಫೈಲಿಂಗ್‌ಗಾಗಿ ಬೆಂಗಳೂರು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ನೋಡಲ್ ಕೇಂದ್ರವಾಗಿ ನೇಮಕ ಮಾಡಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ. ನಾಪತ್ತೆ ವ್ಯಕ್ತಿಗಳ ಗುರುತು ಪತ್ತೆಹಚ್ಚಲು ಅವರ ಪ್ರಥಮ ಸಂಬಂಧಿಕರಾದ ತಂದೆ, ತಾಯಿ, ಮಗ ಅಥವಾ ಮಗಳು ತಮ್ಮ ಗುರುತು ಹಾಗೂ ನಾಪತ್ತೆ ವ್ಯಕ್ತಿಯೊಂದಿಗಿನ ಸಂಬಂಧ ಪರಿಶೀಲಿಸಲು ಡಿಎನ್ಎ ಮಾದರಿ ನೀಡಬಹುದು. ಡಿಎನ್ಎ ಮಾದರಿ ಸಂಗ್ರಹಣೆಗೆ ಬರುವ ಸಂಬಂಧಿಕರು ಇತ್ತೀಚಿನ ಒಂದು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಆಧಾರ್ ಸೇರಿದಂತೆ ಸರ್ಕಾರದಿಂದ ನೀಡಲಾದ ಯಾವುದೇ ಗುರುತಿನ ಚೀಟಿ ಹಾಗೂ ನಾಪತ್ತೆ ವ್ಯಕ್ತಿಯೊಂದಿಗಿನ ತಮ್ಮ ಗುರುತು ಮತ್ತು ಸಂಬಂಧ ದೃಢೀಕರಿಸಲು ಅಗತ್ಯವಿರುವ ಇತರೆ ಸಂಬಂಧಿತ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.ನೋಡಲ್ ಅಧಿಕಾರಿಗಳನ್ನಾಗಿ, ಡಾ.ನಾಗೇಶ್ ಕುಪ್ಪಸ್ತ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ವಿಧಿ-ವಿಜ್ಞಾನ ವೈದ್ಯಕೀಯ ವಿಭಾಗ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು. (ಮೊಬೈಲ್: 9742707500), ಡಾ.ವಾದಿರಾಜ್ ಬಿ. ಪೊಕ್ಕನ್, ನಿವಾಸಿ ವೈದ್ಯಾಧಿಕಾರಿ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು (ಮೊ.9448408640) ಇವರನ್ನು ನಿಯೋಜಿಸಲಾಗಿದೆ. ಮೇಲ್ಕಂಡ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣ, ಮಾಹಿತಿ ಅಥವಾ ಸಹಾಯದ ಅಗತ್ಯವಿದ್ದಲ್ಲಿ, ಸಂಬಂಧಪಟ್ಟವರು ಜಿಬಿಎ ಸಹಾಯವಾಣಿ ಸಂಖ್ಯೆ 1533 ಅನ್ನು ಸಂಪರ್ಕಿಸಬಹುದು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
