ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ  ನ.13ರಂದು ಯಮಸಲ್ಲೇಖನ ವೃತ ಸ್ವೀಕರಿಸಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರದಲ್ಲಿ ಅಷ್ಟಮ ನಂದೀಶ ಕ್ಷೇತ್ರದ ಸಂಸ್ಥಾಪಕರಾದ ಜ್ಞಾನೇಶ್ವರ ಮುನಿಮಹಾರಾಜರು (86) 8 ದಿನಗಳ ಬಳಿಕ ನ.20ರಂದು ಸಂಜೆ 5 ಗಂಟೆಗೆ ದೇವಲಾಪುದಲ್ಲಿ ಸಮಾಧಿ ಮರಣ ಹೊಂದಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನ.13ರಂದು ಯಮಸಲ್ಲೇಖನ ವೃತ ಸ್ವೀಕರಿಸಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರದಲ್ಲಿ ಅಷ್ಟಮ ನಂದೀಶ ಕ್ಷೇತ್ರದ ಸಂಸ್ಥಾಪಕರಾದ ಜ್ಞಾನೇಶ್ವರ ಮುನಿಮಹಾರಾಜರು (86) 8 ದಿನಗಳ ಬಳಿಕ ನ.20ರಂದು ಸಂಜೆ 5 ಗಂಟೆಗೆ ದೇವಲಾಪುದಲ್ಲಿ ಸಮಾಧಿ ಮರಣ ಹೊಂದಿದರು.ಅಂತಿಮ ದಹನಕ್ರಿಯಾ ವಿಧಿವಿಧಾನಗಳು ನ.21 ಬೆಳಗ್ಗೆ 11ಕ್ಕೆ ದೇವಲಾಪುರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಜರುಗಲಿದೆ. ಅಪಾರ ಭಕ್ತ ಸಮೂಹ ಹೊಂದಿದ್ದ ಮುನಿಗಳು ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿದ್ದಾರೆ. 300ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ, ಮೌಲ್ಯಿಕ ಶಿಕ್ಷಣ ನೀಡಲಾಗುತ್ತದೆ. ಕುಲಭೂಷಣ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮೀಣ ಜನರ ಆರ್ಥಿಕತೆಗೆ ಅನುಕೂಲತೆ ಮಾಡಿದ್ದರು. ಧಾರವಾಡ, ಬೆಳಗಾವಿ ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೀನ ಮಂದಿರಗಳನ್ನು ಕಟ್ಟಿಸಿ ಜನರ ಕಲ್ಯಾಣಕ್ಕೆ ನೆರವಾಗಿದ್ದರು. ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಜಯಕೀರ್ತಿ ವಿದ್ಯಾಪೀಠ, ಸಹಕಾರಿ ಸಂಘ, ಜೀನ ಮಂದಿರ ನಿರ್ಮಿಸಿದ್ದಾರೆ. ಮುನಿಗಳು 108 ಸಮೇದ ಶಿಖರಜಿ ಯಾತ್ರೆ, 5 ಬಾರಿ ಸಂಘದೊಂದಿಗೆ ಪಾದಯಾತ್ರೆ ಮಾಡಿದ್ದಾರೆ.ಗರಗ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಪರಿಶ್ರಮದಿಂದ ಅಧ್ಯಯನ ಮಾಡಿ ತಹಸೀಲ್ದಾರ ಆಗಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಮುನಿದೀಕ್ಷೆ ಪಡೆದು ಲೋಕ ಕಲ್ಯಾಣಕ್ಕಾಗಿ, ಧರ್ಮ ಜಾಗೃತಿಗಾಗಿ ಜೀವನವನ್ನೆ ಮುಡುಪಾಗಿಟ್ಟಿದ್ದರು. ಅಪಾರ ಭಕ್ತ ಸಮೂಹ ಮರಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದೆ.;Resize=(128,128))
;Resize=(128,128))
;Resize=(128,128))
;Resize=(128,128))