ಸಾರಾಂಶ
ಡಂಬಳ: ಪ್ರತಿಯೊಬ್ಬರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪುಣ್ಯದ ಕಾರ್ಯ ಮಾಡಬೇಕು. ಮನುಷ್ಯ ಸತ್ಯವಂತ, ನೀತಿವಂತರ ಸಂಗ ಮಾಡಬೇಕು. ಈ ನಿಟ್ಟಿನಲ್ಲಿ ಚನ್ನವೀರ ಶರಣರ ಹಾಗೂ ಮಹಾತ್ಮರ ಸ್ಮರಣೆ ಮಾಡುವುದರೊಂದಿಗೆ ಗುರುಗಳ ಮಾರ್ಗದರ್ಶನದಂತೆ ಬದುಕುವುದನ್ನು ಕಲಿತಾಗ ನೆಮ್ಮದಿಯ ಜೀವನ ಕಾಣಬಹುದು ಎಂದು ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಸುಕ್ಷೇತ್ರ ಜಂತ್ಲಿ ಶಿರೂರ ಗ್ರಾಮದ ಶಾಖಾ ಮಠದ ಚಿಕೇನಕೊಪ್ಪ ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾಮಹೋತ್ಸವ, ನೂತನ ಗಡ್ಡಿತೇರು ಲೋಕಾರ್ಪಣೆ, ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚನ್ನವೀರ ಶರಣರು ತಪಸ್ಸಿನ ಮೂಲಕ ಸಮಾಜದ ಭಕ್ತರ ಹಿತ ಕಾಪಾಡುವ ಚಿಂತನೆ ಹೊಂದಿದವರಾಗಿದ್ದಾರೆ.ಸಮಾಜದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಭಾವದಿಂದ ಮಠ ಕಟ್ಟಿದರು. ಹೀಗಾಗಿ ಎಲ್ಲರೂ ಚನ್ನವೀರ ಶರಣರ ಸ್ಮರಣೆ ಮಾಡಬೇಕು ಹಾಗೂ ಇಂದು ನೂತನ ಜೀವನಕ್ಕೆ ಕಾಲಿಟ್ಟ ನವದಂಪತಿಗಳು ಉತ್ತಮ ಬದುಕು ಸಾಗಿಸಬೇಕು ಎಂದು ಹೇಳಿದರು.
ಡಾ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಜಗತ್ತಿನ ಶ್ರೇಷ್ಠ ಜೀವಿ ಮನುಷ್ಯ, ಆದರೆ ಇಂದಿನ ಮನುಷ್ಯರು ತಮ್ಮ ಸ್ವಾರ್ಥ ಜೀವನದಲ್ಲಿ ಅಂತಹ ಶ್ರೇಷ್ಠತೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲರೂ ಮನುಷ್ಯತ್ವ ಜೀವನದ ಅರ್ಥ ತಿಳಿದುಕೊಳ್ಳಬೇಕು. ಶ್ರೀಮಠದಲ್ಲಿ ಶಿವಶಾಂತವೀರ ಶರಣರು ನಿತ್ಯ ಲಿಂಗಪೂಜೆ ಮಾಡುವ ಮೂಲಕ ಭಕ್ತರ ಹಿತ ಚಿಂತನೆ ಮಾಡುತ್ತಿದ್ದಾರೆ. ಜಗತ್ತಿನ ಎಲ್ಲ ಜೀವರಾಶಿಗಳ ಜೀವನ ಸುಂದರವಾಗಿರಲಿ ಎಂಬ ಬಯಕೆ ಶ್ರೀಗಳದ್ದಾಗಿದೆ ಎಂದು ಹೇಳಿದರು.ಬಳಗಾನೂರದ ಶ್ರೀಶಿವಶಾಂತವೀರ ಶರಣರು ಸಾನ್ನಿಧ್ಯ ಹಾಗೂ ನೇತೃತ್ವ ವಹಿಸಿದ್ದರು.
ತಿಂಗಳ ಪರ್ಯಂತ ಕಲಬುರ್ಗಿಯ ಶ್ರೀಶರಣಬಸವೇಶ್ವರ ಕುರಿತು ಪುರಾಣ ನೀಡಿದ ಶರಣ ಶ್ರೀಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಮಾತನಾಡಿ, ಜೀವನದಲ್ಲಿ ಧರ್ಮದ ಅರಿವನ್ನು ಪ್ರತಿಯೊಬ್ಬರಲ್ಲೂ ಮೂಡಬೇಕು ಅಂದಾಗ ಜೀವನ ಪಾವನಗೊಳ್ಳುತ್ತದೆ ಎಂದು ಪುರಾಣ ಮಂಗಲ ನುಡಿಗಳನ್ನಾಡಿದರು.ಶಿವಣ್ಣ ನಾವಳ್ಳಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶರಣಕುಮಾರ ಹೂಗಾರ ಸಂಗೀತ, ಮಹಾಂತೇಶ ತಬಲಾಗೆ ಸಾತ್ ನೀಡಿದರು.
ಈ ವೇಳೆ ಕಣಗಿನಹಾಳ ಜಂತ್ಲಿ-ಶಿರೂರದ ಧರ್ಮರಾಜ ಅಜ್ಜ, ಗ್ರಾಪಂ ಅಧ್ಯಕ್ಷೆ ರತ್ನವ್ವ ರಾಜಕುಮಾರ ಪೂಜಾರ, ಗ್ರಾಪಂ ಉಪಾಧ್ಯಕ್ಷ ರವಿ ದೊಡ್ಡಮನಿ, ವೆಂಕಟೇಶ ಕುಲಕರ್ಣಿ, ಸುರೇಶ ಚಿಗರಿ, ಹೇಮಣ್ಣ ಪೂಜಾರ, ರಾಜಕುಮಾರ ಪೂಜಾರ, ಗವಿಸಿದ್ದಯ್ಯ ಹಳ್ಳಿಕೇರಿ, ಹನುಮಂತ ಪೂಜಾರ, ಕುಮಾರ ವೆಂಕಟಾಪೂರ, ಶಿವಾಜಪ್ಪ ಧರ್ಮಿ, ವಿಜಯಕುಮಾರ ಶಿರುಂದ, ಶಿವಪ್ಪ ಕಟ್ಟಿ, ಶಿವಾನಂದ ಹೂಗಾರ, ಲೋಹಿತ ತಂಗೋಡಿ, ಬಸನಗೌಡ ಪಾಟೀಲ್, ಸರ್ವ ಸದಸ್ಯರು, ಪಿಡಿಒ ವಸಂತ ಗೋಕಾಕ ಹಾಗೂ ಗ್ರಾಮದ ನೂರಾರು ಮಹಿಳೆಯರು, ಭಕ್ತರು ಇದ್ದರು. ಶಿವಣ್ಣ ನಾವಳ್ಳಿ ಸ್ವಾಗತಿಸಿ ನಿರೂಪಿಸಿದರು.