ಕನ್ನಡಪ್ರಭ ವಾರ್ತೆ ಪಾಲಬಾವಿ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು, ಅಪರಿಚಿತ ಪ್ರಾಣಿಗಳಿಂದ ದೂರವಿರುವುದು ಹಾಗೂ ಮಕ್ಕಳು ಪ್ರಾಣಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸುವುದು ಅತ್ಯಂತ ಮುಖ್ಯ ಎಂದು ಹಂದಿಗುಂದದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಹನುಮಂತ ನಾವಿ ಹೇಳಿದರು
ಕನ್ನಡಪ್ರಭ ವಾರ್ತೆ ಪಾಲಬಾವಿ
ಸಾಕುಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು, ಅಪರಿಚಿತ ಪ್ರಾಣಿಗಳಿಂದ ದೂರವಿರುವುದು ಹಾಗೂ ಮಕ್ಕಳು ಪ್ರಾಣಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸುವುದು ಅತ್ಯಂತ ಮುಖ್ಯ ಎಂದು ಹಂದಿಗುಂದದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಹನುಮಂತ ನಾವಿ ಹೇಳಿದರು.ಸಮೀಪದ ಸುಲ್ತಾನಪುರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.22ರಂದು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಬಿಸ್ ರೋಗ ಹರಡುವಿಕೆ, ಅದರ ಅಪಾಯಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೆ, ಗಾಯವನ್ನು ತಕ್ಷಣ ಸಾಬೂನು ಹಾಗೂ ಹರಿಯುವ ನೀರಿನಿಂದ ಕನಿಷ್ಠ 15 ನಿಮಿಷ ತೊಳೆಯಬೇಕು. ಬಳಿಕ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಹಾಗೂ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.ಪ್ರಭಾರಿ ಮುಖ್ಯಗುರು ಎಸ್.ಎನ್. ಬುರ್ಲಟ್ಟಿ, ಭೂದಾನಿಗಳಾದ ಈಶ್ವರ ಪಾಟೀಲ, ಸದಾಶಿವ ಮನೋಜಿ, ಶಿಕ್ಷಕರಾದ ಶಿವಾನಂದ ದುಲಾರಿ, ಸಂಜಯ ಹಿಪ್ಪರಗಿ, ವಿಠ್ಠಲ ಮಾದರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.