ಸಾರಾಂಶ
- ಕೃಷಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ।
- ಆನಗೋಡು ರೈತಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ - - -ಕನ್ನಡಪ್ರಭ ವಾರ್ತೆ, ದಾವಣಗೆರೆ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಕೃತಕ ಅಭಾವ ಸೃಷ್ಟಿಯಾಗದಂತೆ ಬಿತ್ತನೆಬೀಜ, ರಸಗೊಬ್ಬರ ಸಮರ್ಪಕ ವಿತರಣೆ ಮಾಡಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಆನಗೋಡು ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿ, ರೈತರಿಗೆ ವಿತರಣೆ ಮಾಡಲು ದಾಸ್ತಾನು ಮಾಡಿರುವ ಬಿತ್ತನೆಬೀಜ, ರಸಗೊಬ್ಬರ ಪರಿಶೀಲನೆ ನಡೆಸಿದ ಅವರು, ಕೃಷಿ ಅಧಿಕಾರಿಗಳಿಗೆ ಸಲಹೆ ನೀಡಿದರು.''''''''ಎಂ.ಕೆ., ಡಿಕೆಸಿ, ಗಂಗಾ ಕಾವೇರಿ'''''''' ರೈತರ ಬೇಡಿಕೆ ಇರುವ ಮೆಕ್ಕೆಜೋಳ ಬಿತ್ತನೆ ಬೀಜಗಳು. ಆದರೆ, ಇಲ್ಲಿ ಬೇರೆ ಕಂಪನಿಗಳ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ಜಂಟಿ ಕೃಷಿ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ, ರೈತರ ಬೇಡಿಕೆಗೆ ಅನುಗುಣವಾಗಿ ಮೆಕ್ಕೆಜೋಳ ಬಿತ್ತನೆ ಬೀಜ, ರಸಗೊಬ್ಬರ ತರಿಸಿ ವಿತರಣೆ ಮಾಡಬೇಕು. ರೈತರಿಗೆ ಬೇಡವಾದ ಬಿತ್ತನೆ ಬೀಜ ಇಲ್ಲಿ ದಾಸ್ತಾನು ಮಾಡಲಾಗಿದೆ. ಕೂಡಲೇ ಈ ಬಿತ್ತನೆ ಬೀಜಗಳನ್ನು ವಾಪಸ್ ಕಳುಹಿಸಿ, ರೈತರಿಗೆ ಅಗತ್ಯ ಬೇಕಾದ ಬಿತ್ತನೆ ಬೀಜಗಳ ವಿತರಿಸಬೇಕೆಂದು ತಾಕೀತು ಮಾಡಿದರು.
ಹಿಂದಿನ ವರ್ಷದಲ್ಲಿ ಸಂಭವಿಸಿದ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಈಗ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಬರುತ್ತಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು. ಜೊತೆಗೆ ಬಿತ್ತನೆಗೆ ಬೇಕಾದ ಕೃಷಿ ಉಪಕರಣಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ಬೀಜ ಹಾಕಿ, ಪರೀಕ್ಷೆಗೆ ಒಳಪಡಿಸಬೇಕು. ಅದು ಉತ್ಕೃಷ್ಟವಾಗಿ ಮೊಳಕೆಯೊಡೆದರೆ ಆ ಬೀಜಗಳನ್ನು ರೈತರಿಗೆ ವಿತರಿಸಬೇಕು. ಈಗ ರೈತರಿಗೆ ಬೇಕಾದ ಬೀಜ ತಂದು ಪರೀಕ್ಷೆಗೊಳಪಡಿಸಿ ವಿತರಿಸಬೇಕೆಂದರೂ ಕನಿಷ್ಠ ಒಂದೂವರೆ ವಾರ ಸಮಯ ಬೇಕು. ಈ ಕೆಲಸ ಪೂರ್ವದಲ್ಲಿಯೇ ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
- - - ಕೋಟ್ಎಒ ಗೈರು: ತರಾಟೆ
ಆನಗೋಡು ರೈತ ಸಂಪರ್ಕ ಕೇಂದ್ರದ ಎಒ ಶ್ರೀನಿವಾಸ್ ರಜೆಯ ಮೇಲೆ ತೆರಳಿದ್ದರು. ಇದರಿಂದ ಶಾಸಕ ಕೆ.ಎಸ್. ಬಸವಂತಪ್ಪ ಅಸಮಾಧಾನಗೊಂಡರು. ಬೇರೆ ದಿನಗಳಲ್ಲಿ ರಜೆ ತೆಗೆದುಕೊಂಡರೆ ಯಾರು ಕೇಳುವುದಿಲ್ಲ. ರೈತರು ಬಿತ್ತನೆ ಮಾಡುವ ಸಂದರ್ಭ ಕೇಂದ್ರ ಸ್ಥಳದಲ್ಲಿದ್ದು, ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು. ಈ ಬಾರಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು ರೈತರ ನೆರವಿಗೆ ಧಾವಿಸಬೇಕೆಂದು ಸೂಚನೆ ನೀಡಿದರು.- - - -27ಕೆಡಿವಿಜಿ33, 34ಃ:
ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ದಿಢೀರ್ ಭೇಟಿ ನೀಡಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ವ್ಯವಸ್ಥೆ ಪರಿಶೀಲನೆ ನಡೆಸಿದರು.