ಕಾನೂನಿಗೆ ವಿರುದ್ಧವಾಗಿ ಅರಣ್ಯವಾಸಿಗಳ ಒಕ್ಕಲೆಬ್ಬಿಸದಿರಿ: ರವೀಂದ್ರ ನಾಯ್ಕ

| Published : Jul 04 2024, 01:03 AM IST

ಕಾನೂನಿಗೆ ವಿರುದ್ಧವಾಗಿ ಅರಣ್ಯವಾಸಿಗಳ ಒಕ್ಕಲೆಬ್ಬಿಸದಿರಿ: ರವೀಂದ್ರ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಭೂಮಿ ಹಕ್ಕಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಅರಣ್ಯವಾಸಿಗಳ ಅರ್ಜಿ ಪುನರ್‌ ಪರಿಶೀಲನಾ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಆಡ್ಡಿಪಡಿಸದಂತೆ ಆದೇಶವಿದೆ. ಆದರೂ ಆದೇಶ ಉಲ್ಲಂಘನೆ ಮಾಡುತ್ತಿರುವುದು ಖಂಡನಾರ್ಹ.

ಸಿದ್ದಾಪುರ: ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು. ಅರಣ್ಯವಾಸಿಗಳಿಗೆ ಬಂದಿರುವ ನೋಟಿಸ್‌ ವಿರೋಧಿಸಿ ವಿಚಾರಣೆ ಸ್ಥಗಿತ ಮಾಡಬೇಕೆಂದು ಅರಣ್ಯವಾಸಿಗಳು ಕಾನೂನಾತ್ಮಕ ಅರ್ಜಿ ಸಲ್ಲಿಸಿದರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಬುಧವಾರ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದ ಮುಖ್ಯಸ್ಥ ಅಶೋಕ ಬಸರೂರು ಅವರ ಕಲಾಪಕ್ಕೆ ಅರಣ್ಯವಾಸಿಗಳ ಪರವಾಗಿ ಹಾಜರಾಗಿ ಅರ್ಜಿ ಸಲ್ಲಿಸಿದ ನಂತರ ಈ ಕುರಿತು ವಿವರ ನೀಡಿದರು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಅರ್ಜಿಗೆ ಸಂಬಂಧಿಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆಯು ಪೂರ್ಣ ಆಗುವವರೆಗೆ ಸಾಗುವಳಿ ಅರಣ್ಯ ಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎಂಬ ಸ್ಪಷ್ಟ ಅಂಶ ಕಾನೂನಿನಲ್ಲಿ ಉಲ್ಲೇಖವಿದೆ. ಈ ಕುರಿತು ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವ ವಿಚಾರಣೆಗೆ ಸಲ್ಲಿಸಿದ ತಕರಾರಿನಲ್ಲಿ ಪ್ರಸ್ತಾಪಿಸಲಾಗಿದೆ. ಕಾನೂನು ನಿರ್ದೇಶನದ ಹೊರತಾಗಿಯೂ ಅರಣ್ಯ ಅಧಿಕಾರಿಗಳು, ಅರಣ್ಯವಾಸಿಗಳಿಗೆ ತೊಂದರೆ ನೀಡುವ ಕ್ರಮವನ್ನು ಆಕ್ಷೇಪಿಸಿದರು.

ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಭೂಮಿ ಹಕ್ಕಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ಅರಣ್ಯವಾಸಿಗಳ ಅರ್ಜಿ ಪುನರ್‌ ಪರಿಶೀಲನಾ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಆಡ್ಡಿಪಡಿಸದಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೂ ಆದೇಶ ಉಲ್ಲಂಘನೆ ಮಾಡುತ್ತಿರುವುದು ಖಂಡನಾರ್ಹ ಎಂದರು.

ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಗಿರೀಶ ನಾಯ್ಕ, ಬಸವರಾಜ ಬೋಜಳ್ಳಿ ಉಪಸ್ಥಿತರಿದ್ದರು. ಅರಣ್ಯವಾಸಿಗಳಾದ ಮಂಜು ಕನ್ನಾ ನಾಯ್ಕ, ರಾಮಚಂದ್ರ ನಾಯ್ಕ, ಕನ್ನಾ ಪುಟ್ಟ ನಾಯ್ಕ, ಕನ್ನಾ ಮಾರ್ಯ ನಾಯ್ಕ, ಬಿಲ್ಲುಮನೆ, ಕಸಗೋಡ ಗಣೇಶ ಮೊಗೇರ ಕಪ್ಪಿನಗಡ್ಡಿ, ಬೊಮ್ಮ ಗೌಡ ಕಿತ್ತೊಳಿ, ನಂದನ ಭಟ್ಟ ದೊಡ್ಮನೆ ಮುಂತಾದವರು ವಿಚಾರಣೆ ಸ್ಥಗಿತಕ್ಕೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರು.