ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಬೇಡಿ

| Published : Sep 02 2024, 02:02 AM IST

ಸಾರಾಂಶ

ಮಕ್ಕಳ ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡಬೇಡಿ. ಮಕ್ಕಳ ಜೊತೆ ನೀವು ಸೇರಿ ನೀತಿ ಕಥೆ, ಹಾಡು, ನೃತ್ಯ, ಜಾನಪದ ಗೀತೆಗಳು, ಮಕ್ಕಳ ಚಲನ, ವಲನ ಹಾಗೂ ಪಾಲನೆಗೆ ಹೆಚ್ಚಿನ ಗಮನಕೊಡಬೇಕು ಎಂದು ಪೋಷಕರಿಗೆ ಕನಸು ಮತ್ತು ಬೇಗೂರು ಸೌಹಾರ್ದ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜಿ.ಆರ್. ಚಂದ್ರಕಲಾ ಮನವರಿಕ ಮಾಡಿದರು. ಹಾಸನ ನಗರದ ತಣ್ಣೀರುಹಳ್ಳದಲ್ಲಿರುವ ಪ್ರಜ್ವಲ್ ವಿದ್ಯಾ ಕಿಡ್ಸ್ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ತಣ್ಣೀರುಹಳ್ಳದಲ್ಲಿರುವ ಪ್ರಜ್ವಲ್ ವಿದ್ಯಾ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕನಸು ಮತ್ತು ಬೇಗೂರು ಸೌಹಾರ್ದ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಜಿ.ಆರ್. ಚಂದ್ರಕಲಾ ಅವರು ಉದ್ಘಾಟಿಸಿದರು. ನಂತರ ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳ ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಅಭ್ಯಾಸ ಮಾಡಬೇಡಿ. ಮಕ್ಕಳ ಜೊತೆ ನೀವು ಸೇರಿ ನೀತಿ ಕಥೆ, ಹಾಡು, ನೃತ್ಯ, ಜಾನಪದ ಗೀತೆಗಳು, ಮಕ್ಕಳ ಚಲನ, ವಲನ ಹಾಗೂ ಪಾಲನೆಗೆ ಹೆಚ್ಚಿನ ಗಮನಕೊಡಬೇಕು ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಲೇಡೀಸ್ ಕ್ಲಬ್ ನ ಕಾರ್ಯದರ್ಶಿ ಹಾಗೂ ವೈಷ್ಣವಿ ಚಾರಿಟೇಬಲ್ ಟ್ರಸ್ಟ್ ನ ಸಹ ಕಾರ್ಯದರ್ಶಿ ಪ್ರತಿಭಾ ಇವರು ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸಿದರು. ಕೃಷ್ಣ ರಾಧೆ ವೇಷಧರಿಸಿದ್ದ ಮಕ್ಕಳಿಗೆ ಮತ್ತು ಪೋಷಕರಿಗೆ ಹಸಿರು ಗಿಡಗಳನ್ನು ಕೊಡುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.