ಸಾರಾಂಶ
- ಶಕ್ತಿನಗರದಲ್ಲಿ ರಕ್ತದೊತ್ತಡ, ಇಸಿಜಿ, ವೈದ್ಯರ ಸಮಾಲೋಚನಾ ಶಿಬಿರ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಜು.26 ಒತ್ತಡದ ಜೀವನ, ಶ್ರಮವಿಲ್ಲದ ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿವೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾದರೂ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ, ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಡಿ.ಎಸ್. ಉಮಾ ಪ್ರಕಾಶ ಹೇಳಿದರು. ನಗರದ ಎಸ್.ಎಸ್. ಹೈಟೆಕ್ ರಸ್ತೆಯ ಶಕ್ತಿ ನಗರದ ಭೀಷ್ಮ ವೃತ್ತದ ಎಸ್.ಎಂ. ಕಾಂಪ್ಲೆಕ್ಸ್‌ನಲ್ಲಿ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ದಾವಣಗೆರೆ ಮತ್ತು ಜಯನಗರ ಸಿ ಬ್ಲಾಕ್ ನಾಗರೀಕ ಹಿತರಕ್ಷಣಾ ಸಮಿತಿ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದೊತ್ತಡ, ಇಸಿಜಿ, ವೈದ್ಯರ ಸಮಾಲೋಚನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದರು.ಪ್ರತಿಯೊಬ್ಬರೂ ನಿತ್ಯವೂ ನಿಯಮಿತವಾಗಿ ನಡಿಗೆ, ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಯೋಗಾಭ್ಯಾಸ, ಧ್ಯಾನದಿಂದ ಒತ್ತಡ ನಿವಾರಣೆ ಮಾಡಿಕೊಳ್ಳಬೇಕು. ಸಾತ್ವಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವಂತ ರೂಢಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೇ ಅರೋಗ್ಯವಂತರಾಗುವ ಜತೆ ಸದೃಢ, ಆರೋಗ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನ ಡಾ.ರಾಕೇಶ ಮಾತನಾಡಿ, ಮಾನವನ ದೇಹದಲ್ಲಿ ಹೃದಯ ಪ್ರಮುಖ ಅಂಗ. ಎದೆನೋವು ಕಾಣಿಸಿಕೊಂಡಾಗ ಯಾವುದೇ ಭಯಕ್ಕೆ ಒಳಗಾಗದೇ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯಬೇಕು. ಹೃದಯಾಘಾತಕ್ಕೆ ಭಯವೇ ಮೂಲಕಾರಣ. ಆದ್ದರಿಂದ ಸಮಾಜದಲ್ಲಿ ನಾವು ಹೃದಯವಂತರಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಹೃದಯಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲೂ ಕರೆ ಮಾಡಿದರೂ ಸ್ಪಂದನೆ ಮಾಡಲಾಗುವುದು ಎಂದರು.ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎನ್.ಬಿಕ್ಕೋಜಪ್ಪ ಅಧ್ಯಕ್ಷತೆ ವಹಿಸುವರು. ದೂಡಾ ಮಾಜಿ ಅಧ್ಯಕ್ಷ ಎ.ವೈ.ಪ್ರಕಾಶ, ಸಮಿತಿ ಪಿ.ಎಸ್.ನಾಗರಾಜ, ಪಿ.ಅಂಜಿನಪ್ಪ, ಟಿ.ಇ.ರುದ್ರಪ್ಪ, ವೈ.ತಿಪ್ಪೇಸ್ವಾಮಿ ಶೆಟ್ರು, ಡಿ.ರವಿಕುಮಾರ, ಪಿ.ಎಸ್.ನಾಗರಾಜ, ಸುರೇಶ ಅಡ್ಲಿಗೆರೆ, ನಿಂಗಪ್ಪ ಇಟ್ಟಿಗಿ, ಮೈಲಾರಪ್ಪ, ಹಿರಿಯ ಪತ್ರಕರ್ತ ಎಂ.ವೈ.ಸತೀಶ ಮಡಿವಾಳರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ.ಉಳವಯ್ಯ, ಕಾರ್ಯದರ್ಶಿ ಸಿ.ಅಜಯ ನಾರಾಯಣ, ಖಜಾಂಚಿ ಎಸ್.ನಾಗರಾಜ ಹಾಗೂ ಸಹ ಕಾರ್ಯದರ್ಶಿ ಎಚ್.ಎಂ.ನಾಗರಾಜ, ಎಚ್.ಎನ್.ಶಿವಕುಮಾರ ಇತರರು ಇದ್ದರು.
- - - -26ಕೆಡಿವಿಜಿ1:ದಾವಣಗೆರೆಯಲ್ಲಿ ರಕ್ತ ದೊತ್ತಡ, ಇಸಿಜಿ, ವೈದ್ಯರ ಸಮಾಲೋಚನಾ ಶಿಬಿರವನ್ನು ಪಾಲಿಕೆ ಸದಸ್ಯೆ ಉಮಾ ಪ್ರಕಾಶ ಉದ್ಘಾಟಿಸಿದರು.