ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳಲ್ಲಿ ಕಣ್ಣು ಅತೀ ಪ್ರಮುಖ ಅಂಗವಾಗಿದೆ. ಕಾರಣ ನೀವುಗಳು ನಿಮ್ಮಕಣ್ಣಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.ಅವರು ಇಳಕಲ್ಲ ನಗರದ ಕಾಖಂಡಕಿ ಕಣ್ಣಿನಆಸ್ಪತ್ರೆಯಲ್ಲಿ ಇಳಕಲಿನ ಲೈನ್ಸ್ ಸಂಸ್ಥೆ ಹಾಗೂ ಸುಭಾಸ ಕಾಖಂಡಕಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಿದ್ದ 100 ನೇತ್ರಗಳ ಬೆಳಗಿದ ನಂದಾದೀಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಗರದ ವೈದ್ಯಕೀಯ ಸೇವೆ ನಾಡಿನ ತುಂಬ ಪಸರಿಸಿದೆ. ಕಾರಣ ಇಂದು ಬಾಗಲಕೋಟೆ ಬಿಟ್ಟ ನಂತರ ಇಳಕಲ್ಲ ನಗರದ ವೈದ್ಯಕೀಯ ಸೇವೆ ಅತ್ಯುತ್ತಮವಾಗಿದೆ ಎಂದು ತಿಳಿಸಿದರು.
ಡಾ.ಸುಹಾಸ ಕಾಖಂಡಕಿ ಇವರ ತಂದೆ ಸುಭಾಸ ಅವರು ನಮ್ಮ ಮನೆಯ ವೈದ್ಯರಾಗುವುದರ ಜೊತೆ ನಮ್ಮ ಮನೆಯವರಾಗಿ ನಮ್ಮ ತಂದೆ ಅವರ ಆಪ್ತಮಿತ್ರರಾಗಿದ್ದರು. ಅವರ ಹೆಸರಿನಲ್ಲಿ ಇಂದು 100 ಜನರಿಗೆ ಉಚಿತವಾಗಿ ಕಣ್ಣು ಚಿಕಿತ್ಸೆ ಮಾಡಿದ್ದು, ಇದು ಒಂದು ಸಾಧನೆ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಳಕಲ್ಲ ಲೈನ್ಸ್ ಸಂಸ್ಥೆ ಅಧ್ಯಕ್ಷ ರಾಜಕುಮಾರ ಕಾಟವಾ ಮಾತನಾಡಿ, ಈ ಭಾಗದ ಜನರ ಸೇವೆಗೆ ಸದಾ ಮೀಸಲಾಗಿರುವ ಇಳಕಲ್ಲ ಲೈನ್ಸ್ ಸಂಸ್ಥೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಸುಭಾಷ ಕಾಖಂಡಕಿ ಕಣ್ಣಿನ ಆಸ್ಪತ್ರೆ ಸಹಾಯವೆ ದೊಡ್ಡದು ಎಂದರು.
ಸಮಾರಂಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಹಾಗೂ ಶಾಂತಕುಮಾರ ಸುರಪುರ, ವೆಂಕಟೇಶ ಸಾಕಾ, ರಾಜು ಬೋರಾ, ಡಾ.ಸುಹಾಸ ಕಾಖಂಡಕಿ ದಂಪತಿಗಳನ್ನು ಸಹ ಗೌರವಿಸಿ ಸತ್ಕರಿಸಲಾಯಿತು.ಸಮಾರಂಭದಲ್ಲಿ ಕಾರ್ಯದರ್ಶಿ ಕಾಶಿಮ ಕಂದಗಲ್ಲ, ಪ್ರಮೋದ ಹಂಚಾಟೆ, ಸೋಮು ಸಪ್ಪರದ, ಲಾಲಬಾಷಾ ಶಿವನಗುತ್ತಿ, ಪ್ರಕಾಶ ಕರಡಿ, ಶ್ರೀನಿವಾಸ ರಾಜೋಳ್ಳಿ, ಪರುಶರಾಮ ರಾಜೋಳ್ಳಿ, ಮುರಗೇಶ ಪಾಟೀಲ, ರವಿ ಅಂಗಡಿ, ಡಾ.ಸಂತೋಷ ಪೂಜಾರ, ಡಾ.ಮಹಾಂತೇಶ ಅಕ್ಕಿ ಇತರರು ಇದ್ದರು.